ಹೈವೇ ಬದಿಯಲ್ಲಿದ್ದ ಅನಧಿಕೃತ ಸಂಚಾರಿ ಔಷಧಿ ಶಾಪ್ ತೆರವುಗೊಳಿಸಿದ ಬೆಳ್ತಂಗಡಿ ಪೊಲೀಸರು

ಜೈನ್ ಪೇಟೆಯಲ್ಲಿ
ಆಯುರ್ವೇದಿಕ್ ಹೆಸರಿನಲ್ಲಿ ‘ಗುಳಿಗೆ’ ಸುಲಿಗೆ..!
ಅಶ್ಲೀಲ ಜಾಹಿರಾತು ಹಾಕಿ
ಸಂಶಯಾಸ್ಪದ ಔಷಧಿ ಮಾರುತ್ತಿದ್ದ ಅಂಗಡಿ ತೆರವು!
ಬೆಳ್ತಂಗಡಿ : ಕಾಲೇಜ್ ರಸ್ತೆಯ ಪ್ರವೇಶ ಧ್ವಾರದ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಓಮ್ನಿ ಮಾದರಿಯ ವಾಹನ ನಿಲ್ಲಿಸಿ ವಿವಿಧ ಅಶ್ಲೀಲ ಚಿತ್ರಗಳನ್ನು ಡಿಸ್ಪ್ಲೇ ಮಾಡಿ ಲೈಂಗಿಕ ರೋಗಗಳಿಗೆ ಮದ್ದುಗಳನ್ನು ಮಾರಾಟಕ್ಕಾಗಿ ಪ್ರದರ್ಶನಕ್ಕಿಟ್ಟು ಆಕರ್ಷಿಸುತ್ತಿದ್ದ ವಾಹನವನ್ನು ಬೆಳ್ತಂಗಡಿ ಪೊಲೀಸರು ತೆರವುಗೊಳಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಮಂಗಳೂರು – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ
ಗುರುವಾಯನಕೆರೆ – ಬೆಳ್ತಂಗಡಿ ಮಧ್ಯೆ ಜೈನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ರಸ್ತೆಯ ಬಳಿ ಮಹಾರಾಷ್ಟ್ರ (MH 41.V.5793)
ನೋಂದಣಿಯ ಓಮ್ನಿ ಮಾದರಿಯ ವಾಹನ ನಿಲ್ಲಿಸಿ ಹಿಂದಿ ಭಾಷೆಯ
ಯುವಕರಿಬ್ಬರು ಹಿಮಾಲಯ ಆಯುರ್ವೇದಿಕ್ ಹೆಸರಿನಲ್ಲಿ ವಿವಿಧ ಅಶ್ಲೀಲ ಚಿತ್ರಗಳನ್ನು ಡಿಸ್ಪ್ಲೇ ಮಾಡಿ ಲೈಂಗಿಕ ಸಮಸ್ಯೆ, ನರ ದೌರ್ಬಲ್ಯ, ಗುಪ್ತ ರೋಗ ಮುಂತಾದ ಲೈಂಗಿಕ ರೋಗಗಳಿಗೆ ಮದ್ದುಗಳ ನೆಪದಲ್ಲಿ ನೂರಾರು ಬಗೆಯ ಸಂಶಯಾಸ್ಪದ ಔಷಧಿ(ಗುಳಿಗೆ)ಗಳನ್ನು ಮೂರು ದಿನಗಳಿಂದ ಮಾರಾಟ ಮಾಡುತ್ತಿದ್ದರು.
ಇದನ್ನು ಗಮನಿಸಿದ ಯುವಕರನ್ನು ವಿಚಾರಿಸಿದಾಗ ನಗರಪಂಚಾಯತ್ ಮಾರ್ಕೆಟ್ ಟೆಂಡರ್ ದಾರ ಕಮರ್ ಎಂಬಾತನಲ್ಲಿ ಒಪ್ಪಿಗೆ ಪಡೆದು ವಾಹನದಲ್ಲಿ ಸಂಶಯಾಸ್ಪದ ಲೈಂಗಿಕ ಔಷಧಿ ಮಾರಾಟದ ವಾಹನವನ್ನು ಇಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ, ರಾತ್ರಿಯಾಗುತ್ತಿದ್ದಂತೆ ಜನರು ಮುಗಿ ಬೀಳುತ್ತಿದ್ದು ಮಾದಕ ವಸ್ತುಗಳು , ಚೂರ್ಣಗಳು, ವಯಾಗ್ರದಂತ ಮಾರಕ ಕಾಮೋತ್ತೇಜಕ ಗುಳಿಗೆಗಳು ಮಾರಾಟವಾಗುತ್ತಿದ್ದ ಶಂಕೆ ವ್ಯಕ್ತವಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ಮಹಾರಾಷ್ಟ್ರ ಮೂಲದ ಯುವಕರು ವಾಹನದಲ್ಲಿ ಇಲ್ಲಿ ದಂಧೆ ಆರಂಭಿಸಿರುವ ಸಾಧ್ಯತೆ ಇದೆ.
ಆದರೆ ಮೇಲ್ನೋಟಕ್ಕೆ ಆಯುರ್ವೇದ ಔಷಧಿ ಮಳಿಗೆಯಂತೆ ಕಾಣುವ ಔಷಧಿ ಇದ್ದು ಅವರು ಏನೆಲ್ಲಾ ಔಷಧಿ , ಗುಳಿಗೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಸಂಗತಿ “ನನಗೆ ತಿಳಿದಿರಲಿಲ್ಲ” ಎಂದು
ಟೆಂಡರ್ ದಾರ ಕಮರ್ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಲಾಯಿಲಾದ ಮನು ಹಾಗೂ ಸಂಜೀವ ಆರ್ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ವಾಹನವನ್ನು ಪರಿಶೀಲಿಸಿ ಅಶ್ಲೀಲ ಚಿತ್ರಗಳ ಜಾಹಿರಾತು ಡಿಸ್ಪ್ಲೇ ಫ್ಲೆಕ್ಸ್ ತೆರವು ಮಾಡಿ ಯುವಕರನ್ನು ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಪಡೆದುಕೊಂಡಿದ್ದಾರೆ.













Post Comment