ಬೆಳ್ತಂಗಡಿಯಲ್ಲೊಂದು ಕುರ್ಚಿ ಕಾಯುತ್ತಿದೆ : ಆ ನಾಯಕನ ಆಗಮನಕ್ಕಾಗಿ..

ಬೆಳ್ತಂಗಡಿಯಲ್ಲೊಂದು ಕುರ್ಚಿ ಕಾಯುತ್ತಿದೆ : ಆ ನಾಯಕನ ಆಗಮನಕ್ಕಾಗಿ..

Share

WhatsApp-Image-2024-03-18-at-8.26.53-PM-300x225 ಬೆಳ್ತಂಗಡಿಯಲ್ಲೊಂದು  ಕುರ್ಚಿ ಕಾಯುತ್ತಿದೆ :  ಆ ನಾಯಕನ ಆಗಮನಕ್ಕಾಗಿ..

ಅವರು ಕಚೇರಿಗೆ ಬಾರದೆ ಭರ್ತಿ 2 ತಿಂಗಳಾಗಿದ್ದು ಯಾಕೆ?

ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ, ಹಿರಿಯ ರಾಜಕೀಯ ಮುತ್ಸದ್ಧಿ ಅವರು ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಕಾರಣ ಅವರು ತಮ್ಮ ಪ್ರೀತಿಯ ಕಚೇರಿಗೆ ಬಾರದೆ ಜನರಿಗೆ ಮುಖತ: ಭೇಟಿಗೆ ಸಿಗದೆ ಸುದೀರ್ಘ ಭರ್ತಿ 60 ದಿನಗಳೇ ಕಳೆಯಿತು.

2023ನೇ ಜನವರಿ 15ರಂದು 79ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಾಕ್ಷಿಯಾಗಿ ಸಂಭ್ರಮದಿಂದ ಆಚರಿಸಿಕೊಂಡ ಮಾಜಿ ಶಾಸಕ ಕೆ.ವಸಂತ ಬಂಗೇರ ಹುಟ್ಟುಹಬ್ಬದ ಮರುದಿನ ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇತ್ತೀಚೆಗೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿದ್ದಾರೆ ಎಂಬ ಮಾಹಿತಿ ಆಪ್ತ ವಲಯದಿಂದ ತಿಳಿದು ಬಂದಿದೆ.

ವಸಂತ ಬಂಗೇರ ಅವರು ಕಚೇರಿಗೆ ಬಾರದೆ, ಕುರ್ಚಿಯಲ್ಲಿ ಕುಳಿತುಕೊಳ್ಳದೆ ಕಚೇರಿಯ ಆ ಕುರ್ಚಿಗೆ ಅವರ ಆಪ್ತ ಸ್ಪರ್ಶವಿಲ್ಲದೆ ಭರ್ತಿ ಎರಡು ತಿಂಗಳಾಗಿದ್ದು ಇಡೀ ಕಚೇರಿ ಅವರ ಶೀಘ್ರ ಆಗಮನದ ನಿರೀಕ್ಷೆಯಲ್ಲಿದೆ.

WhatsApp-Image-2024-03-18-at-8.28.52-PM-300x225 ಬೆಳ್ತಂಗಡಿಯಲ್ಲೊಂದು  ಕುರ್ಚಿ ಕಾಯುತ್ತಿದೆ :  ಆ ನಾಯಕನ ಆಗಮನಕ್ಕಾಗಿ..

ಇನ್ನೊಂದೆಡೆ ನಮ್ಮ ನಾಯಕ ವಿಶ್ರಾಂತಿ ಮುಗಿಸಿ ಮತ್ತೆ ಎಂದಿನಂತೆ ಲವಲವಿಕೆಯಿಂದ ಕಚೇರಿಗೆ ಯಾವಾಗ ಬರುತ್ತಾರೆ , ಯಾವಾಗ ನಮ್ಮ ಸಂಕಷ್ಟ, ಕುಂದು ಕೊರತೆಗಳನ್ನು ಆಲಿಸುತ್ತಾರೆ ಎಂದು ಅವರ ಆಪ್ತ ವಲಯ ಮಾತ್ರವಲ್ಲದೆ ಕಾರ್ಯಕರ್ತರು, ಅಭಿಮಾನಿಗಳು ಕಾಯುತ್ತಿದ್ದಾರೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿದೆ.

vasanth-bangera-300x136 ಬೆಳ್ತಂಗಡಿಯಲ್ಲೊಂದು  ಕುರ್ಚಿ ಕಾಯುತ್ತಿದೆ :  ಆ ನಾಯಕನ ಆಗಮನಕ್ಕಾಗಿ..

ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ವಸಂತ ಬಂಗೇರ ಅವರು ದಿನದ 24 ಗಂಟೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಅಥವಾ ಗ್ರಾಮಗಳ ಬೇಟಿಯಲ್ಲಿ ಬಿಡುವಿಲ್ಲದೆ ಜನರ ಜೊತೆ ಕಳೆಯುತ್ತಿದ್ಧ ವಸಂತ ಬಂಗೇರರವರು ದಿಢೀರ್ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯ ಬೇಕಾಯಿತು ಎಂದು ಅವರ ಆಪ್ತ ವಲಯ ಮತ್ತು ಕಚೇರಿ ಸಹಾಯಕರು ಮಾಹಿತಿ ನೀಡಿದ್ದಾರೆ.
ಮಾಜಿಯಾದರೂ ಹಾಲಿಯಾದರೂ ಖಾಸಗಿ ಜೀವನಕ್ಕೆ ಅಂಟಿಕೊಂಡು ನೆಪ ಹೇಳಿಕೊಂಡು ಜನರಿಂದ ತಪ್ಪಿಸಿಕೊಂಡು ಕಾಲಹರಣ ಮಾಡುವ ಜಾಯಮಾನ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರದಲ್ಲ.
ಜನಪರ ಕಾಳಜಿಗೆ, ನಂಬಿದವರ ಸಂಕಷ್ಟ, ಕುಂದುಕೊರತೆಗಳಿಗೆ ಸಕಾಲದಲ್ಲಿ ಸ್ಪಂದಿಸಲು ಅಧಿಕಾರವೇ ಬೇಕೆಂದಿಲ್ಲ ಎಂದು ನಂಬಿದವರು ಅವರು.
ಜವಾಬ್ದಾರಿಯುತ ಹಾಲಿ ಜನಪ್ರತಿನಿಧಿಯಂತೆ ದಿನಚರಿ, ಟೈಮ್ ಟೇಬಲ್ , ಕಮಿಟ್ ಮೆಂಟ್ ಗಳನ್ನು ಅನುಸರಿಸುವ ವಸಂತ ಬಂಗೇರರವರು ಸಹಜವಾಗಿ ತಮ್ಮ ಮನೆಗೆ ಭೇಟಿಗಾಗಿ, ಸ್ಪಂದನೆಯ ನಿರೀಕ್ಷೆಯಲ್ಲಿ ಬರುವ ಜನರನ್ನು ಮಾತನಾಡಿಸಿ ಸ್ಪಂದಿಸಿದ ಬಳಿಕವೇ ತಮ್ಮ ಕಚೇರಿಗೆ ಹೊರಡುವ ವಿಚಾರ ಎಲ್ಲರಿಗೂ ತಿಳಿದ ಸಂಗತಿ.

WhatsApp-Image-2024-03-18-at-7.59.03-PM-1-300x225 ಬೆಳ್ತಂಗಡಿಯಲ್ಲೊಂದು  ಕುರ್ಚಿ ಕಾಯುತ್ತಿದೆ :  ಆ ನಾಯಕನ ಆಗಮನಕ್ಕಾಗಿ..

ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 11 ಗಂಟೆಯೊಳಗೆ ಕಚೇರಿಯಲ್ಲಿ ಲವಲವಿಕೆಯಿಂದ ಹಾಜರಿರುತ್ತಾರೆ.ವಸಂತ ಬಂಗೇರರವರು ತಮ್ಮ ಕಚೇರಿಗೆ ಬರುವ ಮೊದಲೇ ಕಾರ್ಯಕರ್ತರು, ಅಭಿಮಾನಿಗಳು ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಲು ಕಾಯುತ್ತಿರುತ್ತಾರೆ.ಬಂದವರ ಸಂಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುತ್ತಾ ಮಧ್ಯಾಹ್ನ ದಾಟಿದರೂ ಜನರನ್ನು ಕಳಿಸದೆ ಊಟಕ್ಕೆ ಮನೆಗೆ ಹೊರಡುವುದೇ ತಡವಾಗಿ. ಕೆಲವೊಮ್ಮೆ ಊಟಕ್ಕೆ ಮನೆಗೂ ಹೊರಡಲಾಗದಷ್ಟು ಒತ್ತಡವಿರುತ್ತದೆ. ಅನಿವಾರ್ಯ ಒತ್ತಡಗಳಿಂದ ಮನೆಗೆ ಊಟಕ್ಕೆ ಹೋಗದಿದ್ದರೆ ತುಂಬಾ ಪ್ರಿಯವಾದ ಗಂಜಿ ಬೊಂಡಕ್ಕೆ ಅವಲಕ್ಕಿ ಹಾಕಿ ಸವಿಯುವುದೂ ಇದೆ, ಯಾವತ್ತಾದರೊಮ್ಮೆ ಹೋಟೆಲ್ ಊಟ ತರಿಸುವುದು ಇರುತ್ತದೆ.

WhatsApp-Image-2024-03-18-at-7.59.04-PM-300x225 ಬೆಳ್ತಂಗಡಿಯಲ್ಲೊಂದು  ಕುರ್ಚಿ ಕಾಯುತ್ತಿದೆ :  ಆ ನಾಯಕನ ಆಗಮನಕ್ಕಾಗಿ..

ತಾವು ಮಾಜಿಯಾಗಿರಲಿ ಹಾಲಿಯಾಗಿರಲಿ, ಸರಕಾರ ಪಕ್ಷದ್ದೇ ಇರಲಿ, ಬೇರೆ ಪಕ್ಷದ್ದೇ ಇರಲಿ ಇವರ ಕಚೇರಿಗೆ ಬಿಡುವಿಲ್ಲ, ಇರುವುದಿಲ್ಲ,ಚೇಂಬರ್ ಖಾಲಿ ಕಾಣುವುದೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.ದೌರ್ಜನ್ಯಕ್ಕೊಳಗಾದವರಿಗೆ ಧೈರ್ಯ ತುಂಬಿಸುವುದು, ನೊಂದವರಿಗೆ, ರೋಗಿಗಳಿಗೆ ಸಾಂತ್ವನ ನೀಡುವುದು ಜನರನ್ನು ಪೀಡಿಸುವ ಅಲೆದಾಡಿಸುವ ಅಧಿಕಾರಿಗಳಿಗೆ ಖಾರವಾಗಿ ತರಾಟೆಗೆ ತೆಗೆದುಕೊಳ್ಳುವುದು,ಭ್ರಷ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವುದು,ಕಳಪೆ ಕಾಮಗಾರಿ ವೀಕ್ಷಣೆ, ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಇವೆಲ್ಲಾ ವಸಂತ ಬಂಗೇರರ ದಿನಚರಿಯ ಮುಖ್ಯ ಭಾಗಗಳಾಗಿರುವುದು ಎಲ್ಲರಿಗೂ ತಿಳಿದ ವಿಚಾರ.

ತಮ್ಮ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳಾಗಿ ವೈದ್ಯರ ಸಲಹೆ, ಆಪ್ತರ ವಿನಂತಿ, ಒತ್ತಾಯಗಳ ಮೇರೆಗೆ ವಿಶ್ರಾಂತಿ ಪಡೆಯಬೇಕೆನಿಸಿದಾಗ ಜನರು ಸಣ್ಣ ಪುಟ್ಟ ಸಮಸ್ಯೆಗಳನ್ನು ಹಿಡಿದುಕೊಂಡು ತಮ್ಮ ನಿವಾಸಕ್ಕೆ ಬರುವುದಾಗಿ ಮಾಹಿತಿ ಬಂದಾಗ ಅವರನ್ನು ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಬಿಡುತ್ತಿದ್ದರು.
ಕೆಲವೊಂದು ಸೂಕ್ಷ್ಮ ಸಂದರ್ಭಗಳಲ್ಲಿ ಅನ್ಯಾಯಕ್ಕೊಳಗಾಗಿ ಬಂದವರ ಪರ ಇವರ ಪ್ರಾಮಾಣಿಕ ಕಾಳಜಿ ಬಗ್ಗೆ ಹೇಳುವುದಾದರೆ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ಬೆಡ್ಡಲ್ಲಿ ಚೆಕಪ್ ಗೆ ಮಲಗಿದ್ದರೂ ಅನಿವಾರ್ಯ ಸಂದರ್ಭಗಳಲ್ಲಿ ತಡವಾಗುತ್ತದೆಂದು ಹಾಸಿಗೆಯಿಂದ ಎದ್ದು ಹೊರಟು ನಿಲ್ಲುವ ಉದಾಹರಣೆಗಳೂ ಇದೆ ಎಂದು ಅವರ ಆತ್ಮೀಯರೇ ಹೇಳುತ್ತಾರೆ.

ಹೌದು ಮಾಜಿ ಶಾಸಕರೂ ಹಿರಿಯ ಕಾಂಗ್ರೆಸ್ ಮುಖಂಡರೂ ಆಗಿರುವ ಕೆ.ವಸಂತ ಬಂಗೇರ ಅವರು ಈ ವರ್ಷದ ಹುಟ್ಟುಹಬ್ಬದ ಮರುದಿನವೇ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಕಾರಣ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡು ಇದೀಗ 60 ದಿನಗಳಾದವು.ವಸಂತ ಬಂಗೇರ ತಮ್ಮ ಕಚೇರಿಗೆ ಬಾರದೆ ,ಪೂರ್ಣ ಪ್ರಮಾಣದ ರಾಜಕೀಯ ವಲಯದಲ್ಲಿ ಕಾಣಿಸಿಕೊಳ್ಳದಿದ್ದಾಗ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನೊಳಗೊಂಡ ಆಪ್ತವಲಯದಲ್ಲಿ ಏನೋ ಒಂದು ರೀತಿಯ ಶೂನ್ಯ ಭಾವ, ಮಂಕು ಆವರಿಸಿದಂತೆ ಕಂಡು ಬರುತ್ತಿದ್ದು ಇದು ಕಾಂಗ್ರೆಸ್ ಪಕ್ಷಕ್ಕೂ ವ್ಯಾಪಿಸಿ ಲೋಕಸಭಾ ಚುನಾವಣೆ ಎದುರಿಸಲು ಯಾವ ರೀತಿ ಸಜ್ಜಾಗಬಹುದೆಂಬ ಕುತೂಹಲ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ ಮುಂತಾದ ಆಡಳಿತ ಯಂತ್ರಕ್ಕೆ ಆಗಾಗ ಚುರುಕು ಮುಟ್ಟಿಸುವುದು, ರಾಜಕೀಯ ವಿರೋಧಿಗಳು ಆಡಳಿತಾತ್ಮಕವಾಗಿ ಅಥವಾ ಅಭಿವೃದ್ಧಿ ವಿಚಾರದಲ್ಲಿ ಎಡವಿದಾಗ ಇದರ ವಿರುದ್ಧ ಪತ್ರಿಕಾ ಗೋಷ್ಠಿ, ಪ್ರತಿಭಟನೆಗಳ ಮೂಲಕ ಮೊದಲು ಗಟ್ಟಿ ಧ್ವನಿ ಎತ್ತಿ ಘರ್ಜಿಸುವುದು ವಸಂತ ಬಂಗೇರರ ರಾಜಕೀಯ ಎದೆಗಾರಿಕೆ ಎಂದು ಹೇಳಬಹುದು.

WhatsApp-Image-2024-03-18-at-8.32.22-PM-1-295x300 ಬೆಳ್ತಂಗಡಿಯಲ್ಲೊಂದು  ಕುರ್ಚಿ ಕಾಯುತ್ತಿದೆ :  ಆ ನಾಯಕನ ಆಗಮನಕ್ಕಾಗಿ..

ಆದರೆ ಒಂದು ವೇಳೆ ಆರೋಗ್ಯದ ದೃಷ್ಠಿಯಿಂದ ವಿಶ್ರಾಂತಿಗಾಗಿ ವಸಂತ ಬಂಗೇರ ಅವರು ಸಕ್ರೀಯ ರಾಜಕೀಯದಿಂದ ವಿಮುಕ್ತರಾಗುವುದು ಅನಿವಾರ್ಯವಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಣ ಪ್ರತಿಷ್ಠೆಗಾಗಿ ಬಣ ಬಣವೆಂದು ಗೋಡೆ ಕಟ್ಟಿಕೊಂಡಿರುವ ಬ್ಲಾಕ್ ಕಾಂಗ್ರೆಸ್ ನಾಯಕರು ಹಿರಿಯ ಮುತ್ಸದ್ಧಿ ವಸಂತ ಬಂಗೇರ ಅವರ ಅನುಪಸ್ಥಿತಿಯಲ್ಲಿ ಪಕ್ಷವನ್ನು ಹೇಗೆ ಮುನ್ನಡೆಸುತ್ತಾರೆ ಎನ್ನುವುದನ್ನು ಜನ ಕಾದು ನೋಡಬೇಕಾಗಿದೆ.

ಇನ್ನೊಂದೆಡೆ ನಮ್ಮ ನಾಯಕ ವಿಶ್ರಾಂತಿ ಮುಗಿಸಿ ಮತ್ತೆ ಎಂದಿನಂತೆ ಲವಲವಿಕೆಯಿಂದ ಕಚೇರಿಗೆ ಯಾವಾಗ ಬರುತ್ತಾರೆ , ಯಾವಾಗ ನಮ್ಮ ಸಂಕಷ್ಟ,ಕುಂದು ಕೊರತೆಗಳನ್ನು ಆಲಿಸಲು ಬರುತ್ತಾರೆ ಎಂಬಿತ್ಯಾದಿ ಕುತೂಹಲ ಸಹಜವಾಗಿ ಅವರ ಆಪ್ತ ವಲಯ ಮಾತ್ರವಲ್ಲದೆ ಕಾರ್ಯಕರ್ತರಲ್ಲಿ ಅಭಿಮಾನಿಗಳಲ್ಲಿದೆ.ಈ ಮಧ್ಯೆ ಸಂಪೂರ್ಣವಾಗಿ ಚೇತರಿಸಿಕೊಂಡರೂ ವಯೋಸಹಜವಾಗಿ ಅವರಿಗೆ ವಿಶ್ರಾಂತಿಯ ಅಗತ್ಯ ಇದೆ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.

Post Comment

ಟ್ರೆಂಡಿಂಗ್‌