Share

ಬೆಳ್ತಂಗಡಿ : ಇಲ್ಲಿನ ನೂತನ ಪ್ರವಾಸಿ ಮಂದಿರದ ಸ್ವಚ್ಛತಾ ನಿರ್ವಹಣೆಗೆ ಪ್ರಭಾವಿಯಾಗಿರುವ ‘ಬಡ್ಡಿ’ಕೋರ ವ್ಯಕ್ತಿಯೊಬ್ಬನನ್ನು (ಪಿಡಬ್ಲ್ಯುಡಿ) ಲೋಕೋಪಯೋಗಿ ಇಲಾಖಾಧಿಕಾರಿಗಳು ಹೊರ ಗುತ್ತಿಗೆ ಆಧಾರದಲ್ಲಿ
ನೇಮಕ ಮಾಡಿಕೊಂಡಿರುವ ಕುತೂಹಲಕರ ಸಂಗತಿಯೊಂದು ಬೆಳಕಿಗೆ ಬಂದಿದ್ದು ಈತನನ್ನು ನೇಮಕಾತಿ ಮಾಡಿಕೊಂಡಿರುವುದು ಐಬಿ ಗುಮಾಸ್ತನಾಗಿಯೋ..
ಪಿಡಬ್ಲ್ಯುಡಿ ಕಚೇರಿಯ ಕಂಪ್ಯೂಟರ್ ಸಿಬ್ಬಂದಿಗಳ ಕಾವಲುಗಾರನಾಗಿಯೋ ಎಂಬ ಬಗ್ಗೆ ಇಲಾಖೆಯ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.
ಅನುಮಾನ ಇದೀಗ ಮೂಡಲು ಕಾರಣವಾಗಿದೆ.
ಈತ ಕಾಟಾಚಾರಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಾ ಸಂಬಳ ಪಡೆಯುತ್ತಿರುವುದು ಇಲಾಖಾಧಿಕಾರಿಗಳಿಗೆ
ಲೋಕೋಪಯೋಗಿ‌ ಇಲಾಖಾಧಿಕಾರಿಗಳಿಗೆ
ನುಂಗಲಾರದ ತುತ್ತಾಗಿದೆ.

ಬೆಳ್ತಂಗಡಿ ಸರಕಾರಿ ಪ್ರವಾಸಿ ಮಂದಿರದಲ್ಲಿ ಹಗಲು ಪಾಳಿಯಲ್ಲಿ ಒಬ್ಬರು ರಾತ್ರಿ ಪಾಳಿಯಲ್ಲಿ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇನ್ನೊಂದೆಡೆ ಸುಮಾರು
10 ತಿಂಗಳ ಹಿಂದೆ ನೂತನ ಪ್ರವಾಸಿ ಮಂದಿರದ ಸ್ವಚ್ಛತಾ ಕೆಲಸಕ್ಕಾಗಿ ಹೊರ ಗುತ್ತಿಗೆ ಆಧಾರದಲ್ಲಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಈ ನೇಮಕಾತಿಯನ್ನು ಟೆಂಡರ್ ಮೂಲಕ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರು ಮಾಡಿಕೊಂಡಿರುವ ಸಂಗತಿ ಇದೀಗ ಬಯಲಾಗಿದೆ.
ಬಡ್ಡಿ ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯನ್ನು ಐಬಿ ಸ್ವಚ್ಛತಾ ಸಿಬ್ಬಂದಿಯಾಗಿ ಯಾವ ಅರ್ಹತೆ ಮತ್ತು ಮಾನದಂಡದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆ ಒಂದೆಡೆಯಾದರೆ ಅನೇಕ
ಪೊಲೀಸರು, ವ್ಯಾಪಾರಿಗಳು ಸಣ್ಣ ಪುಟ್ಟ ಉದ್ಯಮಿಗಳು ಈತನ ಬಡ್ಡಿ ದಂಧೆಯ ಸಂತ್ರಸ್ತರು ಎಂಬ ವಿಚಾರ ರಹಸ್ಯವಾಗಿ ಉಳಿದಿಲ್ಲ.

ಸಂಗತಿ ಇದಲ್ಲ
ಈ ವ್ಯಕ್ತಿ ಪ್ರವಾಸಿ ಮಂದಿರದ ಸ್ವಚ್ಛತಾ ಸಿಬ್ಬಂದಿಯಾಗಿ ಹೊರಗುತ್ತಿಗೆಯಲ್ಲಿ ನೇಮಕಗೊಂಡಿರುವ ಸಂಗತಿ ಹೊರ ಜಗತ್ತಿಗೆ ಯಾರಿಗೂ ತಿಳಿದಿಲ್ಲ;
ಈ ಸ್ವಾರಸ್ಯಕರ ಸಂಗತಿ ತಿಳಿದರೆ ತಾಲೂಕಿನ ಜನತೆಯೇ ಅಚ್ಚರಿ ಪಡಬಹುದು..!
ಏಕೆಂದರೆ ಊರಿಗೆಲ್ಲಾ ಬಡ್ಡಿಗೆ ಹಣ ಚೆಲ್ಲುವ ಇಂಥ ಬಡ್ಡಿ ವಸೂಲಿಕೋರನಿಗೇಕೆ
ಐಬಿ ಗುಡಿಸುವ ಕೆಲಸ? ಲೋಕೋಪಯೋಗಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಬೇರೆ ಅರ್ಹರು ಇಲ್ಲವೇ? ಈತನದ್ದು ಇಲಾಖೆ ಬೇನಾಮಿ‌ ಹುದ್ದೆಯಲ್ಲಿ ಸಂಬಳ ಪಡೆಯಲು ಇದೊಂದು ಡಮ್ಮಿ ನೇಮಕಾತಿಯೇ?
ಈ ವ್ಯಕ್ತಿ ಪಡೆಯುವ ಸಂಬಳಕ್ಕೆ ಯಾರೆಲ್ಲ ಪಾಲುದಾರರಿದ್ದಾರೆ?
ಎಂಬಿತ್ಯಾದಿ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಉತ್ತರಿಸಬೇಕಾಗಿದೆ.

ಮೊದಲೇ ಪ್ರವಾಸಿ ಮಂದಿರದಲ್ಲಿ‌ ರಾತ್ರಿ ಪಾಳಿಯ ಇಬ್ಬರು ಸಿಬ್ಬಂದಿಗಳು ವಾರದಲ್ಲಿ ಮತ್ತು ತಿಂಗಳಲ್ಲಿ ಎಷ್ಟು ದಿನ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎನ್ನುವುದೇ ನಿಗೂಢ! ಆದರೆ ಸಂಬಳ ಮಾತ್ರ ಭರ್ಜರಿಯಾಗಿ ಖಾತೆ ಸೇರುತ್ತಿದೆ.
ಮೊದಲೇ ಹೀಗಿರುವಾಗ ಹೊರಗೆ ‘ಭವ್ಯ’ ಒಳಗೆ ದಿವ್ಯ ನಿರ್ಲಕ್ಷ್ಯ ಎಂಬಂತಿರುವ ಮತ್ತು ಲೋಕಾಯುಕ್ತ ತನಿಖೆ ಎದುರಿಸಿದ
ಹೊಸ ಪ್ರವಾಸಿ ಮಂದಿರಕ್ಕೆ ಪ್ರತ್ಯೇಕ ಬೇನಾಮಿ ಸಿಬ್ಬಂದಿ ನೇಮಕಾತಿ ಮಾಡುವ ಅನಿವಾರ್ಯ ಏನಿತ್ತು ಎಂಬ ಪ್ರಶ್ನೆಗೆ ಆ ‘ನಾರಾಯಣ’ನೇ ಉತ್ತರಿಸಬೇಕು!
ಮೇಲಾಧಿಕಾರಿಗಳು ಕೆಲಸ ಕೊಟ್ಟರೆ ಈತನಿಗೆ ಫೈಲ್ ಗಳನ್ನು ಹಿಡಿದುಕೊಂಡು ಹೋಗುವುದು ಮತ್ತು ಶಾಸಕರನ್ನೊಳಗೊಂಡು ಸ್ಥಳೀಯ ಅಧಿಕಾರಿಗಳು ಗಣ್ಯರು ಐಬಿ‌ಗೆ ಬಂದ್ರೆ ಶಿಷ್ಟಾಚಾರದಲ್ಲಿ
ಸತ್ಕರಿಸುವುದು
ಈತ ಐಬಿಯ ಸ್ವಚ್ಛತಾ ಸಿಬ್ಬಂದಿ ಎಂದು ಬಂದವರಿಗೆ ಗೊತ್ತಾಗುವುದು
ನಾಚಿಕೆಯಂತೆ!
ಈತನ ಹೆಸರು ನಾರಾಯಣ ಯಾನೆ ಬಡ್ಡಿ ನಾರಾಯಣ !

ಹೊಸ ಐಬಿಗೆ ಅತಿಥಿಗಳು ಬಂದಾಗ ಅಲ್ಲಿದ್ದು ಸೇವೆ ಕೊಡಬೇಕಾದ ಈತ
ಬಂದವರಿಗೆ ಯಾರಿಗೂ ಕಾಣಿಸಿಕೊಳ್ಳದೆ
ತಾನೇ ಗೆಸ್ಟ್ ಗಳಂತೆ ಹೊಸ ಐಬಿಯ ಕೋಣೆಯಲ್ಲಿ ಹೆಬ್ಬಾವಿನಂತೆ ಮಲಗಿರುತ್ತಾನೆ.

ಐಬಿ ಕೆಲಸಕ್ಕಿಂತ ಆಸಕ್ತಿಯಿಂದ ಮತ್ತು ಮೇಲಾಧಿಕಾರಿ ಹೇಳಿದ ಕೆಲಸಕ್ಕಿಂತ ಹೆಚ್ಚಾಗಿ
ಪಿಡಬ್ಲ್ಯುಡಿ ಕಚೇರಿಯಲ್ಲಿ
ಕಂಪ್ಯೂಟರ್ ಕೋಣೆಗೆ ಸಾಂಬಾರ್, ಫ್ರೈ, ಜ್ಯೂಸ್ ಇತ್ಯಾದಿ ಪಾರ್ಸೆಲ್ ಸಪ್ಲೈ ಕೆಲಸಕ್ಕೆ ನೇಮಿಸಿದಂತೆ ಈತನ ಚುರುಕು ಚಲನವಲನವನ್ನು ನೋಡಬಹುದು.
ಕಂಪ್ಯೂಟರ್‌ ಸೆಕ್ಷನ್ ನಲ್ಲಿ‌
ಗೆಜ್ಜೆ ಹೆಜ್ಜೆ ಸದ್ದು ,
ಫ್ಯಾರನ್ ಲವ್ಲೀ ಘಮಘಮ, ಕಾಲಹರಣ ಚಕ್ಕಂದ ಈತನ ಫುಲ್ ಟೈಮ್ ಡ್ಯೂಟಿ !
ಮೇಲಾಧಿಕಾರಿ ಕಚೇರಿಯಲ್ಲಿ
ಇದ್ರೆ ಕಂಪ್ಯೂಟರ್ ಕೋಣೆ ಬಿಟ್ಟು ಬಿಸಿಲಿನ ಏಟಿಗೆ ಬಾಡಿ ಟ್ರಾಫಿಕ್ ಡ್ಯೂಟಿ ಮಾಡುವ ಲೇಡಿ ಪೊಲೀಸರ ಜೊತೆಗೂ ಟೈಮ್ ಪಾಸ್ ಪಟ್ಟಾಂಗ. ಒಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೆಲಸ ಮಾಡದೆ ಸಂಬಳ ಪಡೆಯುವ ನಿರುಪಯೋಗಿ
ಸೋಮಾರಿ ಸಿಬ್ಬಂದಿ‌!
ನಿನಗೆ ಇಲ್ಲೇನಪ್ಪಾ ಕೆಲಸ?
ಬಕಪ್ಪ ಅವರು ಎಷ್ಟೋ ಸಲ ಕಿವಿ ಹಿಂಡಿದರೂ ಈತನ ವಕ್ರ ವರ್ತನೆ ನೆಟ್ಟಗಾಗಿಲ್ಲವಂತೆ!
ಇನ್ನೊಂದೆಡೆ ಪತ್ರಿಕಾ ಗೋಷ್ಠಿ ಅಥವಾ ವಿಶೇಷ ಸಭೆಗಳನ್ನು ನಡೆಸಲು ಶಾಸಕರು ಐಬಿಯಲ್ಲಿದ್ದರೆ,
ಅಥವಾ ಪರಿಚಯದ ಸ್ಥಳೀಯ ಗಣ್ಯರು ಐಬಿಗೆ ಬಂದ್ರೆ ಹೊಸ ಐಬಿಯಲ್ಲಿ ಅಥವಾ ಹಳೆ ಐಬಿ‌ ಕಿಚನ್ ನಲ್ಲಿ ಅಡಗಿ ಕೂರೋದು ಈತನ ಜಾಯಮಾನ!

ನಾರಾಯಣ ಎಂಬಾತನ ನೇಮಕಾತಿಯ ಹಿಂದೆ ಏನೋ ಕಿತಾಪತಿ ನಡೆದಿದೆ ಎಂಬುದಕ್ಕೆ ಈತನ ಸೋಮಾರಿತನದ ವರ್ತನೆಯೇ ಸಾಕ್ಷಿ. ಶಾಸಕರು ಐಬಿಯಲ್ಲಿದ್ದರೆ ಅವರ ಮುಂದೆ ಕಾಣಿಸುವುದೇ ಇಲ್ಲ ಇದಕ್ಕೆ ಕಾರಣವೇನೆಂಬುದು ತನಿಖೆಯಾಗಬೇಕಾಗಿದೆ. ಹೊಸ ಐಬಿಯ ಸ್ವಚ್ಛತಾ ಸಿಬ್ಬಂದಿಯಾಗಿ ಈ ವ್ಯಕ್ತಿ ನೇಮಕಗೊಂಡಿದ್ದರೂ ಈತನ ಸೋಮಾರಿತನದಿಂದಾಗಿ ಕೆಲವು ಸಮಯಗಳಿಂದ
ಐಬಿ ಗುಡಿಸುವ ಕೆಲಸಕ್ಕಾಗಿ ಮಹಿಳೆಯೊಬ್ಬರನ್ನು ಗೊತ್ತುಪಡಿಸಲಾಗಿದ್ದು ಹಾಗಾದರೆ ಖೋಖೋ ಗೂಟದಂತಿರುವ ಈ ಸಿಬ್ಬಂದಿಗೇನು ಐಬಿಯಲ್ಲಿ ‘ಕಲೆಂಗ್’ ಹೊಡೆಯೋ ಕೆಲಸ? ಎನ್ನುವುದೇ ಪ್ರಶ್ನೆ!

ನಾರಾಯಣ ಎಂಬವರನ್ನು ಗುತ್ತಿಗೆ ಆಧಾರದಲ್ಲಿ ಸೇರಿಸಿಕೊಂಡಿದ್ದು ಬೇರೆಯೇ ಕಥೆ. ಲೋಕೋಪಯೋಗಿ ಇಲಾಖೆಯ AEE ಬಕಪ್ಪ ಸಾಹೇಬ್ರು ಐಬಿ ಸೇವೆಗಾಗಿ ಒಬ್ಬನ ನೇಮಕಾತಿ ಅಗತ್ಯವೆನಿಸಿದಾಗ ಏನೂ ಕಷ್ಟಪಡದೆ ತಮ್ಮ ಸಾಕ್ಷಾತ್ ಪುತ್ರ ರತ್ನ ಪ್ರೇಮ್ ಕುಮಾರ್ ಹೊಸಮನಿ ಎಂಬಾತನನ್ನೇ ನೇಮಕಾತಿ ಮಾಡಿಸಿಕೊಂಡಿದ್ದರು. ಇಂಜಿನಿಯರ್ ಬಕಪ್ಪ ಅವರ ಪುತ್ರ ಪ್ರೇಮ್ ಕುಮಾರ್ ಹೊಸಮನಿ
ಮಹಾ ಸೋಮಾರಿ, ಕಾಟಾಚಾರಕ್ಕೆ ಐಬಿ ಸಿಬ್ಬಂದಿಯಾಗಿ,
ಯಾವ ಕೆಲಸವನ್ನೂ ಮಾಡದೆ ಐಬಿ ವಠಾರದಲ್ಲಿ ಯಾವತ್ತಾದರೊಮ್ಮೆ ಪಡ್ಡೆ ಹುಡುಗನಂತೆ ಕಾಣಿಸಿಕೊಂಡು ಸುಮಾರು 10 ತಿಂಗಳಲ್ಲಿ ಸಂಬಳ ಪಡೆದುಕೊಂಡಿದ್ದು
ಈ ಬಗ್ಗೆ ಇಲಾಖೆಯೊಳಗೆ ಆರೋಪಗಳು ಕೇಳಿ ‌ಬಂದ ಬೆನ್ನಲ್ಲೇ ಮೊದಲೇ
ಇಲಾಖೆಯಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು
ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದ
ಬಕಪ್ಪ ಅವರಿಗೆ ಮಗನನ್ನೇ ಕಾನೂನುಬಾಹಿರವಾಗಿ ನೇಮಕಾತಿ ಮಾಡಿಕೊಂಡ ಆರೋಪದಲ್ಲಿ
ಲೋಕಾಯುಕ್ತ ಕಂಟಕ ಎದುರಾಯಿತು.
ಲೋಕಾಯುಕ್ತ ತನಿಖಾ ಹಂತದಲ್ಲಿ ‍ಬಕಪ್ಪ ಪುತ್ರನಾದ
ಪ್ರೇಮ್ ಕುಮಾರ್ ಐಬಿ ಸಿಬ್ಬಂದಿಯಾಗಿ ಪಡೆದ ಸಂಬಳವನ್ನು ಸರಕಾರಕ್ಕೆ ಮರುಪಾವತಿ ಮಾಡಿಸಿಕೊಳ್ಳಲಾಯಿತು.
ಪ್ರೇಮ್ ಕುಮಾರ್ ಹೊಸಮನಿ ಐಬಿ ಸಿಬ್ಬಂದಿ ಹುದ್ದೆಯಿಂದ ತೆರವಾದಾಗ
ಗುತ್ತಿಗೆದಾರನ ಮೂಲಕ ನುಸುಳಿಕೊಂಡಿದ್ದು
‘ಬಡ್ಡಿ’ಕೋರ ನಾರಾಯಣ.


ಈತನನ್ನು‌ ಗುತ್ತಿಗೆ ಆಧಾರದಲ್ಲಿ ಸೇರಿಸಿಕೊಂಡಿದ್ದು ಹೇಗೆಂದರೆ ….. ಬಕಪ್ಪ ಸಾಹೇಬ್ರು ಐಬಿ ಸೇವೆಗಾಗಿ ಒಬ್ಬನ ನೇಮಕಾತಿ ಅಗತ್ಯವೆನಿಸಿದಾಗ ಏನೂ ಕಷ್ಟಪಡದೆ ತಮ್ಮ ಸಾಕ್ಷಾತ್ ಪುತ್ರ ರತ್ನ ಪ್ರೇಮ್ ಕುಮಾರ್ ಹೊಸಮನಿ ಎಂಬಾತನನ್ನು ನೇಮಕಾತಿ ಮಾಡಿಸಿಕೊಂಡಿದ್ದರು. ಬಕಪ್ಪ ಅವರ ಪುತ್ರ
ಮಹಾ ಸೋಮಾರಿ, ಕಾಟಾಚಾರಕ್ಕೆ ಐಬಿ ಸಿಬ್ಬಂದಿಯಾಗಿ,
ಯಾವ ಕೆಲಸವನ್ನೂ ಮಾಡದೆ ಐಬಿ ವಠಾರದಲ್ಲಿ ಯಾವತ್ತಾದರೊಮ್ಮೆ ಪಡ್ಡೆ ಹುಡುಗನಂತೆ ಕಾಣಿಸಿಕೊಂಡು ಸುಮಾರು 10 ತಿಂಗಳಲ್ಲಿ ಸಂಬಳ ಪಡೆದುಕೊಂಡಿದ್ದರು.
ಈ ಬಗ್ಗೆ ಇಲಾಖೆಯೊಳಗೆ ಆರೋಪಗಳು ಕೇಳಿ ‌ಬಂದ ಬೆನ್ನಲ್ಲೇ ಮೊದಲೇ
ಇಲಾಖೆಯಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು
ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದ
ಬಕಪ್ಪ ಅವರಿಗೆ ಮಗನನ್ನೇ ಕಾನೂನುಬಾಹಿರವಾಗಿ ನೇಮಕಾತಿ ಮಾಡಿಕೊಂಡ ಆರೋಪದಲ್ಲಿ
ಲೋಕಾಯುಕ್ತ ಕಂಟಕ ಎದುರಾಯಿತು.
ಲೋಕಾಯುಕ್ತ ತನಿಖಾ ಹಂತದಲ್ಲಿ ‍ಬಕಪ್ಪ ಪುತ್ರನಾದ
ಪ್ರೇಮ್ ಕುಮಾರ್ ಐಬಿ ಸಿಬ್ಬಂದಿಯಾಗಿ ಪಡೆದ ಸಂಬಳವನ್ನು
ವಾಪಾಸು ವಸೂಲಿ ಮಾಡಿಕೊಳ್ಳಲಾಯಿತು.

Post Comment

ಟ್ರೆಂಡಿಂಗ್‌

error: Content is protected !!