ಅಕ್ರಮ ಮದ್ಯ ಸಹಿತ ವ್ಯಕ್ತಿ ವಶಕ್ಕೆ
ಬೆಳ್ತಂಗಡಿ : ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ವ್ಯಕ್ತಿಯೋರ್ವನನ್ನು
ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಶೈಲ ಡಿ. ಮುರಗೋಡ ಹಾಗೂ ಸಿಬ್ಬಂದಿಗಳ ತಂಡ ಬುಧವಾರ ದಾಳಿ ನಡೆಸಿ,1,312 ರೂ.ಮೌಲ್ಯದ
90 ಎಂ.ಎಲ್.ಮದ್ಯ ತುಂಬಿದ 32 ಸ್ಯಾಚೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ, ಸ್ಥಳೀಯ ನಿವಾಸಿ ಸತೀಶ್ (40) ಎಂಬಾತನು 1,312 ರೂ.ಮೌಲ್ಯದ
90 ಎಂ.ಎಲ್.ಮದ್ಯ ತುಂಬಿದ 32 ಸ್ಯಾಚೆಟ್ ಗಳನ್ನು ಇರಿಸಿಕೊಂಡು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡರು.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Post Comment