‌ಬಸ್ ಕಿಟಕಿಯಿಂದ ಹಾರಿದ ವಯೋವೃದ್ಧ ವ್ಯಕ್ತಿ ಮೃತ್ಯು

‌ಬಸ್ ಕಿಟಕಿಯಿಂದ ಹಾರಿದ ವಯೋವೃದ್ಧ ವ್ಯಕ್ತಿ ಮೃತ್ಯು

Share

WhatsApp-Image-2024-03-19-at-8.07.43-AM-215x300 ‌ಬಸ್  ಕಿಟಕಿಯಿಂದ  ಹಾರಿದ ವಯೋವೃದ್ಧ ವ್ಯಕ್ತಿ ಮೃತ್ಯು

ಬೆಳ್ತಂಗಡಿ : ಬಸ್ಸಿನ ಕಿಟಕಿಯಿಂದ ಇಳಿಯಲು ಯತ್ನಿಸಿದ ವಯೋವೃದ್ಧ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಧರ್ಮಸ್ಥಳ ಬಸ್‌ ನಿಲ್ದಾಣದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ ಬಸ್ಸಿನಲ್ಲಿ ಬಂದಿದ್ದ ಸುಮಾರು 60 ವರ್ಷದ ಅಪರಿಚಿತ ವಯೋವೃದ್ಧರೋರ್ವರು ಇಳಿಯುವ ತುರ್ತಲ್ಲಿ ಬಸ್‌ ತಂಗುದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿರುವ ಸಮಯ ಕಿಟಕಿಯ ಮೂಲಕ ಇಳಿಯಲು ಪ್ರಯತ್ನದಲ್ಲಿ ಹಾರಿದ್ದು ಈ ವೇಳೆ ಆಯ ತಪ್ಪಿ ರಸ್ತೆಗೆ ಬಿದ್ದಿದ್ದರು.
ಈ ಸಂದರ್ಭ ತಲೆಗೆ ಗಂಭೀರ ಏಟು ಬಿದ್ದ ಈತನನ್ನು ಕೂಡಲೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಬಸ್ ನಿರ್ವಾಹಕ ಧರ್ಮಸ್ಥಳ ಠಾಣೆಗೆ ನೀಡಿದ ದೂರನಂತೆ ಪ್ರಕರಣ ದಾಖಲಾಗಿದೆ.
ಮೃತ ಅಪರಿಚಿತ ವ್ಯಕ್ತಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಧರ್ಮಸ್ಥಳ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!