ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಶರೀಫ್ ಉರೂಸ್ ಮುಂದೂಡಿಕೆ:

ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಶರೀಫ್ ಉರೂಸ್ ಮುಂದೂಡಿಕೆ:

Share

ಮೇ 3-12ಕ್ಕೆ ನಿಗದಿ

WhatsApp-Image-2024-03-20-at-3.10.57-PM ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಶರೀಫ್ ಉರೂಸ್ ಮುಂದೂಡಿಕೆ:

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸಮನ್ವಯ ಕ್ಷೇತ್ರ ಕಾಜೂರು ಮಖಾಂ ಶರೀಫ್ ಉರೂಸ್ ದಿನಾಂಕವನ್ನು ದೇಶದ ಮಹಾ ಚುನಾವಣೆಯ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದೆ.

oors ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಶರೀಫ್ ಉರೂಸ್ ಮುಂದೂಡಿಕೆ:


ಏಪ್ರಿಲ್ 19 ರಿಂದ 28 ರ ವರೆಗೆ ನಡೆಯಬೇಕಿದ್ದ ಉರೂಸ್ ಕಾರ್ಯಕ್ರಮವನ್ನು ಮೇ 03 ರಿಂದ 12 ರ ತನಕ ನಡೆಸಲು ತಿರ್ಮಾನಿಸಲಾಗಿದೆ.
ಲೋಕಸಭಾ ಚುನಾವಣೆ ಎಪ್ರಿಲ್ 26 ರಂದು ನಿಗದಿಯಾಗಿರುವುದನ್ನು ಮನಗಂಡು ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್ ನಿರ್ದೇಶನದ ಮೇರೆಗೆ ಉರೂಸ್ ಸಮಿತಿ ತುರ್ತು ಸಭೆ ನಡೆಸಿ ದಿನಾಂಕ ಬದಲಾವಣೆಗೊಳಿಸಲಾಯಿತು. ದ‌.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದ ಉರೂಸ್ ಸಮಿತಿ ಪದಾಧಿಕಾರಿಗಳು ಈ ಮಹತ್ವದ ನಿರ್ಧಾರ ಪ್ರಕಟಿಸಿದರು.

Post Comment

ಟ್ರೆಂಡಿಂಗ್‌

error: Content is protected !!