33ನೇ ವರ್ಷದ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಮಾ: 21ಕ್ಕೆ
ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ 33ನೇ ವರ್ಷದ ವೇಣೂರು – ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳವು ಮಾರ್ಚ್ 21-2026ನೇ ಶನಿವಾರ ಅದ್ಧೂರಿಯಾಗಿ ನಡೆಯಲ್ಲಿದ್ದು ಈ ಬಗ್ಗೆ ಕಂಬಳ ಸಂಘಟಕರ ನೇತೃತ್ವದಲ್ಲಿ ಕಂಬಳಾಭಿಮಾನಿಗಳ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆದಿದೆ.
ಪೂರ್ವಭಾವಿ ಸಭೆಯಲ್ಲಿ ವೇಣೂರು – ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿಯ ಸಂಚಾಲಕರಾಗಿ ಉದ್ಯಮಿ ಪ್ರವೀಣ್ ಫೆರ್ನಾಂಡಿಸ್, ಹಳ್ಳಿಮನೆ ಉಜಿರೆ ಇವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷರಾದ ರಕ್ಷಿತ್ ಶಿವರಾಂ, ಅಧ್ಯಕ್ಷರಾದ ನಿತೀಶ್ ಕೋಟ್ಯಾನ್ , ಕಾರ್ಯಾಧ್ಯಕ್ಷರಾದ ಶೇಖರ್ ಕುಕ್ಕೇಡಿ, ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಲಹೆಗಾರರು ಹಾಗೂ ಸ್ಥಳೀಯ ಕಂಬಳ ಪ್ರೇಮಿಗಳು ಉಪಸ್ಥಿತರಿದ್ದರು.













Post Comment