ಬಂಗಾಡಿ; ತ್ರಿಶಲ ಜೈನ್ ಗೆ ಭಾರತ್ ಸ್ಕೌಟ್ ಏಂಡ್ ಗೈಡ್ ALT ಅರ್ಹತೆ

ಬೆಳ್ತಂಗಡಿ : ಸ. ಉ. ಪ್ರಾ. ಶಾಲೆ ಬಂಗಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ತ್ರಿಶಲ ಜೈನ್ ರವರು ಭಾರತ್ ಸ್ಕೌಟ್ ಏಂಡ್ ಗೈಡ್ ಇದರ ಗೈಡ್ ಕ್ಯಾಪ್ಟನ್ ರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ರಾಷ್ಟ್ರೀಯ ತರಬೇತಿ ಕೇಂದ್ರ ಪಚಿಮರಿ ಮಧ್ಯಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ 65ನೇ ಸಹಾಯಕ ಲೀಡರ್ ಎ ಎಲ್ ಟಿ ತರಬೇತಿದಾರರ ತರಬೇತಿಯಲ್ಲಿ ಭಾಗವಹಿಸಿ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿಯಲ್ಲಿ ಇವರಿಗೆ ಎಎಲ್ ಟಿ
ಪದವಿಯ ಪ್ರಮಾಣ ಪತ್ರ ಹಾಗೂ ಪ್ಯಾಚ್ಮೆಂಟ್ ನೀಡಿ ಗೌರವಿಸಲಾಗಿದೆ.
ಸುಮಾರು 25 ವರ್ಷಗಳಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂದಿನ ಜ.30 ರಿಂದ ಫೆ 1 ವರೆಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯುವ ರಾಜ್ಯಮಟ್ಟದ LT/ALT ತರಬೇತಿದಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭಾರತ್ ಸ್ಕೌಟ್ಸ್& ಗೈಡ್ಸ್ ನ ತರಬೇತಿಯಾದ ಬೇಸಿಕ್ 2001ರಲ್ಲಿ ಪಿಲಿಕುಳ ಮಂಗಳೂರು,
ಎಡ್ವಾನ್ಸ್ 2005 ರಲ್ಲಿ ಸಿ.ಎಸ್.ಐ ಬಾಲಿಕಾಶ್ರಮ ಮುಲ್ಕಿ,
ಹೆಚ್ ಡಬ್ಲ್ಯು ಬಿ 2005ರಲ್ಲಿ ಕೊಂಡಜ್ಜಿ ದಾವಣಗೆರೆ, ಪ್ರಿ ಎ.ಎಲ್.ಟಿ 2018 ರಲ್ಲಿ ದೊಡ್ಡಬಳ್ಳಾಪುರ, 2025ರಲ್ಲಿ ALT ರಾಷ್ಟ್ರೀಯ ತರಬೇತಿ ಕೇಂದ್ರ ಪಚಿಮರಿ ಮಧ್ಯಪ್ರದೇಶದಲ್ಲಿ ಪಡೆದುಕೊಂಡಿರುತ್ತಾರೆ.
ಇವರ ಪತಿ ಜಯರಾಜ್ ಜೈನ್ ಅವರು ಸ.ಉ.ಹಿ.ಪ್ರಾ. ಶಾಲೆ ಓಡಿಲ್ನಾಳದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ತಾ. ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.















Post Comment