ಏಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವಿವಾದದ ಹಿಂದೆ ಬಂಟ್ವಾಳದ ಮಾಜಿ ಸಚಿವರ ‘ಕೈ’ಚಳಕವೇ?
ಬಂಟ್ವಾಳ : ಪ್ರಭಾವೀ ರಾಜಕೀಯ ವ್ಯಕ್ತಿಯೋರ್ವರ ಕಾಣದ ‘ಕೈ’ಚಳಕ ಮತ್ತು ಬೆಂಬಲದ ಪರಿಣಾಮ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಆಯೋಜಿಸಿದ ಅನಧಿಕೃತ ಖಾಸಗಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಯನ್ನು ಅತಿಥಿಯಾಗಿ ಆಹ್ವಾನಿಸಿದ ಕಾರ್ಯಕ್ರಮ ಆಯೋಜಕರ ಮತ್ತು ಸಹಕರಿಸಿದವರ ವಿರುದ್ಧ ನೆಟ್ನಮುಡ್ನೂರು ಗ್ರಾಮದ ಸರ್ಕಾರಿ ನೋಂದಾಯಿತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾದೇವಿ ಭಜನಾ ಮಂದಿರ ಟ್ರಸ್ಟ್
ನ್ಯಾಯಾಂಗ ನಿಂದನಾ ದೂರು ದಾಖಲಿಸಿದ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಏಮಾಜೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾದೇವಿ ಭಜನಾ ಮಂದಿರಕ್ಕೆ 1960ನೇ ಇಸವಿಯಲ್ಲೇ ಸರ್ಕಾರ ಮೀಸಲಿರಿಸಿದ್ದ ಸರ್ವೇ ನಂಬರ್ 147/4ಪಿ2ರಲ್ಲಿ 65ಸೆಂಟ್ಸ್ ಡಿಸಿಡಿಆರ್ ಸ್ಥಳದಲ್ಲಿ ಏಮಾಜೆಯ ಜ್ಯೋತಿಷಿ ಡೊಂಬಯ್ಯ ಪಂಡಿತ ಎಂಬವರು ಯಾರಿಂದಲೂ ದೇಣಿಗೆ, ವಂತಿಗೆಯನ್ನು ಪಡೆದುಕೊಳ್ಳದೆ ತನ್ನ ಕೃಷಿ ದುಡಿಮೆಯ ಸ್ವಂತ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅನಾದಿಕಾಲದಿಂದಲೂ ಪಾಳು ಬಿದ್ದಿದ್ದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾದೇವಿ ಭಜನಾ ಮಂದಿರವನ್ನು ತನ್ನ ಅಧ್ಯಕ್ಷತೆಯ
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾದೇವಿ ಭಜನಾ ಮಂದಿರ ಸಮಿತಿ ಏ ಮಾಜೆ (ರಿ) ಎಂಬ ಹೆಸರಿನ ಸರ್ಕಾರಿ ನೋಂದಾಯಿತವಾದ ಆಡಳಿತ ಸಮಿತಿಯ ಮೂಲಕ 2006/07ರಲ್ಲಿ ಜೀರ್ಣೋದ್ಧಾರಗೊಳಿಸಿ ಬ್ರಹ್ಮ ಕಲಶ, ನಾಗ ಪ್ರತಿಷ್ಠಾಪನೆ ಮಾಡಿ ಸಮೀಪ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಲೋಕಾರ್ಪಣೆಗೊಳಿಸಿ ವೈದಿಕರಿಂದ ನಿತ್ಯ ಪೂಜೆ, ಭಜನಾದಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಆದರೆ ಸ್ಥಳೀಯರಾದ ತುಳುನಾಡಿನ ದೈವಾರಾಧನೆಯ ಸಂಪ್ರದಾಯವನ್ನು ಮೀರಿ ಕಳೆದ ವರ್ಷ ಬೆಂಗಳೂರಿನಲ್ಲಿ ಕೊರಗಜ್ಜ ದೈವದ ಕೋಲ ಕಟ್ಟಲು ಮುಂದಾಗಿ ತುಳುನಾಡಿನೆಲ್ಲೆಡೆಯಿಂದ ವಿವಾದಕ್ಕೊಳಗಾಗಿ ದೈವ ನರ್ತಕರಿಂದ, ದೈವಾರಾಧಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕುಪ್ಪೆಪದವಿನ ಕೆಲೆಂಜಾರು ನಿವಾಸಿ ಜನ್ನಯಾನೆ ಜನಾರ್ದನ ನಲಿಕೆ, ಚಂದ್ರಶೇಖರ ನಲಿಕೆ, ನೀಲಯ್ಯ ನಲಿಕೆ ಮುಂತಾದವರ ಗುಂಪು ಡೊಂಬಯ್ಯ ಪಂಡಿತರವರು ಜೀರ್ಣೋದ್ಧಾರಗೊಳಿಸುತ್ತಿದ್ದ ದೇವಸ್ಥಾನ ಮತ್ತು ಭಜನಾ ಮಂದಿರಕ್ಕೆ ಅಡ್ಡಿಪಡಿಸಿ ದೇವಸ್ಥಾನದ ಸುತ್ತ ಹಾಕಿದ್ದ ಕಲ್ಲಿನ ಕಂಬ,ತಂತಿ ಬೇಲಿಗಳನ್ನು ಕಿತ್ತೆಸೆದು ದೇವಸ್ಥಾನದ ವಠಾರದಲ್ಲೇ ಅಕ್ರಮ ಗುಡಿಸಲುಗಳನ್ನು ನಿರ್ಮಿಸಿ ಪೂಜಾದಿಕಾರ್ಯ ಗಳಿಗೆ ಅಡ್ಡಿಪಡಿಸತೊಡಗಿದ್ದರು.
ಈ ಬಗ್ಗೆ ದೇವಸ್ಥಾನದ ಅಧ್ಯಕ್ಷ ಜ್ಯೋತಿಷಿ ಡೊಂಬಯ್ಯ ಪಂಡಿತರವರು ಸ್ಥಳೀಯ ಗ್ರಾಮಪಂಚಾಯತ್ ಹಾಗೂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿ ಬಂಟ್ವಾಳ ನ್ಯಾಯಾಲಯದಲ್ಲೂ ದಾವೆ ಹೂಡಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ತೆರವುಗೊಳಿಸಿದ್ದರಲ್ಲದೆ, ಮುಂದೆ ವಿವಾದ,ಗೊಂದಲ ಸೃಷ್ಠಿಸದಂತೆ
ಶಾಶ್ವತ ತಡೆಯಾಜ್ಞೆ ತಂದಿದ್ದರು. ಈ ಬೆಳವಣಿಗೆಯ ಬಳಿಕ ಇದೇ ಗುಂಪು ರಾಜಕೀಯ ಬೆಂಬಲದಿಂದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕೆಲವು ಸಮಯಗಳ ಹಿಂದೆ ಮತ್ತೆ ಇದೇ ದೇವಸ್ಥಾನದ ವಠಾರದೊಳಗೆ ಅಕ್ರಮ ಶೆಡ್ಡು ನಿರ್ಮಿಸಿ ದೇವಸ್ಥಾನದ ಜಾಗವನ್ನು ಅಕ್ರಮವಾಗಿ ಅಗೆದು ಚರಸ್ವತ್ತುಗಳನ್ನು ನಾಶಗೊಳಿಸಿ ಕಳೆದ ಫೆಬ್ರವರಿ 11ರಂದು ಸ್ಥಳೀಯ ಪಂಚಾಯತ್, ಪೋಲಿಸ್ ಠಾಣೆ ಹಾಗೂ ಸಂಬಂಧಪಟ್ಟ ಯಾವುದೇ ಇಲಾಖೆಗಳ ಅನುಮತಿ, ಪರವಾನಿಗೆ ಪಡೆದುಕೊಳ್ಳದೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅನಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯವಾಗಿ ಗೊಂದಲ, ವಿವಾದಕ್ಕೆ ಕಾರಣರಾಗಿದ್ದರು.
ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ಸ್ ನಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರನ್ನು ಅವಾಚ್ಯವಾಗಿಯೂ ಅಶ್ಲೀಲ ಪದಗಳಿಂದಲೂ ನಿಂದಿಸಿ ಸಾರ್ವಜನಿಕವಾಗಿ ಬೆದರಿಸಿ ಧಿಕ್ಕಾರ ಕೂಗಿದ್ದಾರೆ ಎಂಬ ಆರೋಪವಿದೆ.
ಇದೇ ವೇಳೆ ಘಟನೆಯ ಬಗ್ಗೆ ಮೊಬೈಲ್ ನಲ್ಲಿ ಚಿತ್ರಿಕರಿಸಲು ಸ್ಥಳಕ್ಕೆ ತೆರಳಿದ್ದ ಟ್ರಸ್ಟ್ ಅಧ್ಯಕ್ಷರ ಕುಟುಂಬದವರ ಮೇಲೂ ಇದೇ ತಂಡ ಹಲ್ಲೆಗೆ ಯತ್ನಿಸಿದ್ದಲ್ಲದೆ ಮಕ್ಕಳ ಕೈಯಲ್ಲಿದ್ದ ಮೊಬೈಲ್ಗಳನ್ನು ಕಿತ್ತೆಸೆದು, ಹೆಣ್ಣು ಮಕ್ಕಳ ಮುಂದೆ ನಿಂತು ಅಶ್ಲೀಲವಾಗಿ ವರ್ತಿಸಿ ದೊಣ್ಣೆ ಹಿಡಿದು ಬೆದರಿಸಿದ ಘಟನೆಯೂ ನಡೆದಿದೆ ಎಂದು ಸ್ಥಳೀಯರು ವಿವರಿಸುತ್ತಾರೆ.
ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರು ಸ್ಥಳೀಯ ಗ್ರಾಮಪಂಚಾಯತ್,
ವಿಟ್ಲ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಆಡಿಯೋ ವಿಡಿಯೋ ದೃಶ್ಯಾವಳಿ ಸಹಿತ ದೂರು ನೀಡಿದ್ದಾರೆ. ಈ ಮಧ್ಯೆ ಅನಧಿಕೃತ ಶೆಡ್ ಅನ್ನು ತೆರವುಗೊಳಿಸಲು ನ್ಯಾಯಾಲಯದಿಂದ ಅಮಿಲ್ಜಾರಿಯಾಗಿದ್ದರೂ ಕಾನೂನನ್ನು ಗೌರವಿಸಿ ತೆರವುಗೊಳಿಸದೆ ಮತ್ತೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂಬ ಆರೋಪಗಳಿವೆ.
ಸ್ಥಳೀಯ ಪಂಚಾಯತ್, ಪೊಲೀಸ್ ಠಾಣೆ ಹಾಗೂ ಸಂಬಂಧಿತ ಯಾವುದೇ ಇಲಾಖೆಗಳಿಂದ ಅನುಮತಿ, ಪರವಾನಿಗೆ ಪಡೆದುಕೊಳ್ಳದೆ ಮತ್ತೆ ಕಳೆದ ಫೆಬ್ರವರಿ 24,25ರಂದು 2 ದಿನಗಳ ಕಾಲ ಅನಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸಿ, ಅನಧಿಕೃತ ಕಾರ್ಯಕ್ರಮಕ್ಕೆ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ, ಒಪ್ಪಿಗೆ ಇಲ್ಲದೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನು ಮುದ್ರಿಸಿ, ವಿವಾದದಲ್ಲಿ ಸಿಲುಕಿಸಲು
ಯತ್ನಿಸಿ ಮುಜುಗರ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.ತಡೆಯಾಜ್ಞೆ ಜಾರಿಯಲ್ಲಿರುವ ವಿವಾದಿತ ಸ್ಥಳದಲ್ಲಿ ಆಯೋಜಿಸಲಾದಕಾರ್ಯಕ್ರಮದಲ್ಲಿ ಅನೇಕ ಗಣ್ಯರೂ ಸೇರಿದಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಯಾಗಿ ಪಾಲ್ಗೊಂಡಿದ್ದರು.
ಅಕ್ರಮವಾಗಿ ಅಳವಡಿಸಿದ ಡಿಜೆ, ಲೈಟಿಂಗ್ಸ್, ಪೆಂಡಾಲ್ ಗಳ ದೃಶ್ಯಾವಳಿಯನ್ನು ತಮ್ಮ ಮೊಬೈಲ್ ಗಳಲ್ಲಿ ಅಧ್ಯಕ್ಷರ ಮೊಮ್ಮಕ್ಕಳು ಚಿತ್ರಿಸುತ್ತಿದ್ದ ವೇಳೆ ಇದೇ ಎದುರಿದಾರರು ಮತ್ತೆ ಅಡ್ಡಿಪಡಿಸಿದ್ದರಲ್ಲದೆ ದೃಶ್ಯಾವಳಿಯನ್ನು ಚಿತ್ರೀಕರಿಸುತ್ತಿದ್ದ ಬಾಲಕಿಯೊಬ್ಬಳ ಮುಂದೆ ನಿಂತು ಬಟ್ಟೆ ಬಿಚ್ಚಿ ಅಶ್ಲೀಲ ಭಂಗಿ ಪ್ರದರ್ಶಿಸಿದ್ದು
ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರು ದೃಶ್ಯಾವಳಿಗಳ ಸಹಿತ ಸಂಬಂಧ ಪಟ್ಟವರಿಗೆ ಹಾಗೂ ನ್ಯಾಯಾಲಯಕ್ಕೆ ಮತ್ತೆ ದೂರು ನೀಡಿದ್ದಾರೆ.
ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅನಧಿಕೃತವಾಗಿ ಆಯೋಜಿಸಿದ ವಿವಾದಿತ ಈ ಕಾರ್ಯಕ್ರಮದ ಬೆಂಬಲವಾಗಿ ಹಾಗೂ ಡೊಂಬಯ್ಯ ಪಂಡಿತರವರ ವಿರುದ್ಧವಾಗಿ ಬಂಟ್ವಾಳದ ಮಾಜಿ ಶಾಸಕ, ಸಚಿವ ರಮಾನಾಥ ರೈ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರ ಕುಮ್ಮಕ್ಕಿನಲ್ಲೇ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದ್ದು ಸ್ಥಳೀಯ ಪೊಲೀಸ್ ಒಬ್ಬರಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ವಿವಾದಿತ ಕಾರ್ಯಕ್ರಮವನ್ನು ಕೂಡಲೇ ತಡೆದು ಶಾಂತಿ ಕಾಪಾಡಬೇಕೆಂದು ದೂರವಾಣಿ ಮೂಲಕ ವಿನಂತಿಸಿಕೊಂಡಿದ್ದು ಸ್ಥಳೀಯ ಪೊಲೀಸರೊಬ್ಬರು ಮಾತನಾಡುತ್ತಾ “ರಮಾನಾಥ ರೈಗಳ ಕಾಲ್ ಬರುತ್ತಿದೆ, ಒತ್ತಡವಿದೆ”ಎಂದು ಹೇಳಿರುವ ಆಡಿಯೋ ಒಂದು ಇದೀಗ ವೈರಲ್ ಆಗಿದೆ.
ಅಂದು ಅನಧಿಕೃತ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಹಿತ ರಕ್ಷಣಾ ಸಮಿತಿಯ ರಾಜ್ಯ ಸಂಚಾಲಕರಾದ ಶಿವಾನಂದ ಆನೇಕಲ್ ಅವರು ಸಂಪರ್ಕಿಸಿದಾಗಲೂ ಕಾರ್ಯಕ್ರಮ ನಿಲ್ಲಿಸದಂತೆ ರಮಾನಾಥ ರೈಗಳ ಒತ್ತಡವಿದೆ ಎಂದು ತಮ್ಮ ಅಸಹಾಯಕತೆಯನ್ನು ಪೊಲೀಸರೇ ಹೇಳಿಕೊಂಡಿರುವುದು ಇದೀಗ ಬಯಲಾಗಿದೆ.22 ವರ್ಷಗಳ ಹಿಂದೆ ನಡೆದ ಇಂದಿಗೂ ಅಪರಾಧಿಗಳು ಪತ್ತೆಯಾಗದ
ವಗ್ಗದ ದಲಿತ ಮುಖಂಡ ಶಿವಪ್ಪ ಬಂಗೇರ ಅವರ ಕೊಲೆ ಪ್ರಕರಣದ ತನಿಖೆಯನ್ನು ಮುಚ್ಚಿ ಹಾಕಿದ ಬಂಟ್ವಾಳದ ಕಾಣದ ‘ಕೈ’ಗಳ ಬಗ್ಗೆಯೂ ಈ ವಿವಾದದ ಜೊತೆ ಆರೋಪವೂ ಮತ್ತೆ ಕೇಳಿ ಬಂದಿದೆ.
ಈ ಬಗ್ಗೆ ಟ್ರಸ್ಟ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇಡೀ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಟ್ರಸ್ಟ್ ದಾವೆಗೆ ಸಂಬಂಧಿಸಿ
ಮಾನ್ಯ ನ್ಯಾಯಾಲಯವು ಅಮೀಲ್ಜಾರಿ ಮಾಡಿದ್ದು ಸದ್ಯದಲ್ಲೇ ಸುಖಾಂತ್ಯಗೊಳಿಸುವ ನಿರೀಕ್ಷೆ ಇದೆ ಎಂದು ಟ್ರಸ್ಟ್ ಮುಖ್ಯಸ್ಥರು, ದೇವಸ್ಥಾನದ ಭಕ್ತಾದಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
Post Comment