ಎಸ್ಎಸ್ಎಲ್ ಸಿ. ವಾರ್ಷಿಕ ಪರೀಕ್ಷೆ : ಪೆರ್ಲಬೈಪಾಡಿ ಪ್ರೌಢ ಶಾಲೆಗೆ 100% ಫಲಿತಾಂಶ
ಬೆಳ್ತಂಗಡಿ : 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂದಾರು ಗ್ರಾಮದ ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು 100% ಫಲಿತಾಂಶ ಪಡೆಯುವ ಮೂಲಕ ಮತ್ತೊಮ್ಮೆ ಸಾಧನೆಗೈದಿದ್ದಾರೆ.
ಪೆರ್ಲ ಬೈಪಾಡಿ ಶಾಲೆಯಿಂದ ಒಟ್ಟು 49 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದು 13 ಮಂದಿ ಡಿಸ್ಟಿಂಕ್ಷನ್ , 29 ಮಂದಿ
ಪ್ರಥಮ ಶ್ರೇಣಿ , 4 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಹಾಗೂ 3 ಮಂದಿ ತೇರ್ಗಡೆ ಶ್ರೇಣಿಯಲ್ಲಿದ್ದಾರೆ.
ಶಾಲೆಗೆ ಪ್ರಥಮ ಸ್ಥಾನವನ್ನು ಕು. ಧೃತಿ (599), ದ್ವಿತೀಯ ಸ್ಥಾನವನ್ನು ಕು.ಧನ್ಯ (589), ಹಾಗೂ ತೃತೀಯ ಸ್ಥಾನವನ್ನು ಕು. ಯಶ್ವಿ (580) ಪಡೆದುಕೊಂಡಿದ್ದಾರೆ.
100% ಫಲಿತಾಂಶದ ಜೊತೆಗೆ ವಿವಿಧ ಶ್ರೇಣಿಗಳ ಸಾಧನೆಯ ಮೂಲಕ ಶಾಲೆಗೆ ಶಿಕ್ಷಕ ವೃಂದಕ್ಕೆ, ಪೋಷಕರಿಗೆ ಹಾಗೂ ಊರಿಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದ ಅಭಿನಂದಿಸಿದೆ.












Post Comment