ಮಾ:15ಕ್ಕೆ ಬಂದಾರು ಪಾಣೆಕಲ್ಲಿನಲ್ಲಿ ‘ಕೋಳಿಅಂಕ’ ಅಭಿಮಾನಿಗಳ ಸಮಾಲೋಚನಾ ಸಭೆ

ಮಾ:15ಕ್ಕೆ ಬಂದಾರು ಪಾಣೆಕಲ್ಲಿನಲ್ಲಿ ‘ಕೋಳಿಅಂಕ’ ಅಭಿಮಾನಿಗಳ ಸಮಾಲೋಚನಾ ಸಭೆ

Share

ಬೆಳ್ತಂಗಡಿ : ನಂಬಿಕೆ, ಸಂಪ್ರದಾಯಗಳ ಭಾಗವಾಗಿ ಆಡು, ಕುರಿ,ಕೋಳಿ,ಹಂದಿ ಕೊಯ್ದು ಬಲಿ ಕೊಡುವ ಸಾಂಪ್ರದಾಯಿಕ ಆಚರಣೆಗಳು ರಾಜರ ಕಾಲದಿಂದಲೂ ಇತ್ತು. ಸಮಾಜದಲ್ಲಿ ನಡೆಯುತ್ತಿದ್ದ ರಕ್ತಪಾತ , ಅಶಾಂತಿಗಳಿಂದ ಭೂಮಿಗೆ ಬೀಳುವುದನ್ನು ತಪ್ಪಿಸಲು ಪ್ರಾಣಿ ಬಲಿಯಿಂದ ಭೂಮಿಗೆ ರಕ್ತ ಬಿದ್ದರೆ ಒಳ್ಳೆಯದೆಂಬ ನಂಬಿಕೆಯಿಂದ ಜಾತ್ರೆ, ಉತ್ಸವಗಳು ಮುಗಿದ ನಂತರ ಅಗೋಚರ ದುಷ್ಟ ಶಕ್ತಿಗಳಿಗೆ ಬಲಿ ಕೊಡಲಾಗುತ್ತಿತ್ತು.
ಇಂಥ ಸಾಂಪ್ರದಾಯಿಕ ಆಚರಣೆಗಳು ಉಳಿಯಬೇಕು, ರೈತರ ಗ್ರಾಮೀಣ ಸಾಂಪ್ರದಾಯಿಕ ಕ್ರೀಡೆಯಾಗಿರುವ ಜೂಜು ರಹಿತ ಕೋಳಿ ಅಂಕಕ್ಕೆ ಯಾವುದೇ ರೀತಿಯಾದ ಅಡ್ಡಿಪಡಿಸದೆ ವಿಶೇಷ
ಅವಕಾಶ ನೀಡಬೇಕು ಎಂದು ಸಾಂಪ್ರದಾಯಿಕ ಆಚರಣೆಗಳ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಶಿವಣ್ಣ ಗೌಡ ಒತ್ತಾಯಿಸಿದ್ದಾರೆ.

ಅವರು ಬುಧವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಯಕ್ಷಗಾನಕ್ಕೂ ಕಾಲಮಿತಿ ಬಂದಿದೆ, ತುಳುನಾಡಿನ ನಂಬಿಕೆ ಮತ್ತು ಸಾಂಸ್ಕೃತಿಕ ಭಾಗವಾಗಿರುವ ರೈತರ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿ ಆತಂಕಗಳು ಎದುರಾಗಿವೆ, ಇಂಥ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಜೂಜುರಹಿತ ಕೋಳಿ ಅಂಕಗಳಿಗೆ ಷರತ್ತು ವಿಧಿಸಿ‌ ಅನುಮತಿ ಅವಕಾಶಗಳನ್ನು ಕೊಡಬೇಕು ಎಂದು ಹೇಳಿದರು.
ರೈತರ ಬಡವರ ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಕಾನೂನಿನ ಹೆಸರಿನಲ್ಲಿ ಅಡ್ಡಿಪಡಿಸಲಾಗುತ್ತಿದೆ ಶ್ರೀಮಂತರ ಕುದುರೆ ರೇಸ್, ಕ್ಲಬ್ ಗಳಿಗೆ ಆನ್ ಲೈನ್ ಇಸ್ಪೀಟು, ಜೂಜು, ಮೋಜುಗಳಿಗೆ ಇಲ್ಲದ ಅಡ್ಡಿ ರೈತರ ಸಾಂಪ್ರದಾಯಕ ಆಚರಣೆಗಳಿಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ‌ ಕಂಬಳವನ್ನು ಸಂಘಟಿಸಿ ಯಶಸ್ವಿಯಾಗಿರುವ
ಪುತ್ತೂರು ಶಾಸಕ ಅಶೋಕ ರೈ ಸೇರಿದಂತೆ 13 ಮಂದಿ ಶಾಸಕರುಗಳನ್ನು ಸಂಪರ್ಕಿಸಿ ಹೋರಾಟದ ಬಗ್ಗೆ ಚರ್ಚಿಸಲಾಗಿದ್ದು ಬಹುತೇಕ ಎಲ್ಲಾ ಶಾಸಕರು ಹೋರಾಟಕ್ಕೆ ಧ್ವನಿಗೂಡಿಸುವುದಾಗಿ ಭರವಸೆ ನೀಡಿದ್ದಾರೆ. ಶಾಸಕ ಅಶೋಕ ರೈ ಅವರ ನೈತಿಕ ಬೆಂಬಲದೊಂದಿಗೆ ಅವರ ಮಾರ್ಗದರ್ಶನ ಪಡೆದು ಹೋರಾಟ ರೂಪಿಸಲಾಗುತ್ತಿದೆ.

ಸಾಂಪ್ರದಾಯಿಕ ಜೂಜು ರಹಿತ ಕೋಳಿ ಅಂಕಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ನಮ್ಮ ಹೋರಾಟಕ್ಕೆ ಕೋಳಿ ಅಂಕದ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು “ಮಾಡು ಇಲ್ಲವೇ ಮಡಿ” ಎಂಬ ಅಚಲ ನಿಲುವಿನಲ್ಲಿ ಜಯ ಸಿಗುವವರೆಗೂ ಬಿಡುವುದೇ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಾಂಪ್ರದಾಯಿಕ ಆಚರಣೆಗಳ ಹಿತರಕ್ಷಣಾ ವೇದಿಕೆ ದ.ಕ. ಜಿಲ್ಲಾಧ್ಯಕ್ಷ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಇಡೀ ವರ್ಷ ಕೋಳಿ ಅಂಕ ಇರುವುದಿಲ್ಲ, ನವೆಂಬರ್ ನಿಂದ ಏಪ್ರಿಲ್ ತಿಂಗಳವರೆಗೆ ಮಾತ್ರ ಅವಕಾಶ ಇರುತ್ತದೆ, ಇದು ರೈತರ ಮನರಂಜನೆಗಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಸುವ ಆಚರಣೆಯಾಗಿದೆ ಇದರಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಮಾರಕವಾಗಿಲ್ಲ ಎಂದರು.

ತುಳುನಾಡಿಗೆ ಇಲ್ಲಿಯದ್ದೇ ಆದ ಭಾಷೆ, ಆಚಾರ ವಿಚಾರಗಳು, ಪ್ರಾಚೀನ ಸಂಪ್ರದಾಯಗಳ ಹಿನ್ನೆಲೆ ಇದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿಯ ವಿಶೇಷ ಆಚರಣೆಗಳಿವೆ.
ಇಲ್ಲಿನ ಪ್ರಾಚೀನ ಕ್ರೀಡೆಗಳು ಜಾತ್ರೆ, ನೇಮೋತ್ಸವ, ಕೃಷಿ ಮುಂತಾದ ವಿಚಾರಗಳಿಗೆ ಹೊಂದಿಕೊಂಡಿದೆ.
ತುಳುನಾಡಿನ ಕ್ರೀಡೆಗಳಲ್ಲಿ ಕಂಬಳದಷ್ಟೇ ಮುಂಚೂಣಿಯಲ್ಲಿರುವ ಒಂದು ಕ್ರೀಡೆ ‘ಕೋಳಿ ಅಂಕ’ ಇದನ್ನು ಕ್ರೀಡೆ ಎನ್ನುವುದಕ್ಕಿಂತ ನಂಬಿಕೆ ಎಂದು ನಂಬುವವರೇ ಹೆಚ್ಚು. ಕೋಳಿ ಅಂಕವನ್ನು ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರಲಾಗಿದ್ದು ಇದು ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಯುತ್ತದೆ. ಸಂಪ್ರದಾಯದ ಪ್ರಕಾರ ಕೋಳಿ ಅಂಕವು ದೈವಗಳ ನೇಮೋತ್ಸವದ ಮೊದಲು ನಡೆದರೆ, ಇನ್ನು ಕೆಲವು ಕಡೆ ದೈವನರ್ತನದ ಸಂದರ್ಭ ನಡೆಯುತ್ತದೆ, ಮತ್ತೆ ಕೆಲವು ಕಡೆಗಳಲ್ಲಿ ನೇಮೋತ್ಸವ ಮುಗಿದ ನಂತರ ನಡೆಯುತ್ತದೆ ಎಂದು ಅವರು ತಿಳಿಸಿದರು.
ದೈವದ ಗೊನೆ ಮುಹೂರ್ತದ ನಂತರ ಕೋಳಿಗೂಟ ವಾಡಿಕೆಯಲ್ಲಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕೋಳಿ ಅಂಕಕ್ಕೆ ಜೂಜು ಮಸ್ತಿ ಅನ್ನುವ ಹಣೆಪಟ್ಟಿ ಕಟ್ಟಿ ಸರಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮುಖಾಂತರ ನಾಡಿನ ಜನತೆಯ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಕಂಬಳಕ್ಕೆ ನಿರ್ಬಂಧ ಹೇರಿದ್ದು ಅದು ಕೂಡ ಸಾಂಪ್ರದಾಯಿಕವಾಗಿ ನಡೆಯುತ್ತಿಲ್ಲ ಎನ್ನುವ ಬೇಸರ ನಾಡಿನ ಜನತೆಗೆ ಇದೆ. ಹಾಗೆ ತೆಂಗಿನಕಾಯಿ ಕುಟ್ಟುವುದೂ ಒಂದು ಸಾಂಪ್ರದಾಯಿಕ ಕ್ರೀಡೆ ಇದು ವರ್ಷದ ಒಂದು ಶುಭದಿನದಂದು ಆಚರಿಸಲಾಗುತ್ತದೆ.
ಈ ನಾಡಿಗೆ ಇಲ್ಲಿಯದ್ದೇ ಆದ ಭಾಷೆ, ಆಚಾರ ವಿಚಾರಗಳು, ಪ್ರಾಚೀನ ಸಂಪ್ರದಾಯಗಳು ಇವೆ.
ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿಯ ವಿಶೇಷ ಆಚರಣೆಗಳು, ಮುಂತಾದವುಗಳು ಈ ಮಣ್ಣಿನ ವಿಶೇಷತೆ.
ಇಲ್ಲಿ ಹಲವಾರು ಪ್ರಾಚೀನ ಕ್ರೀಡೆಗಳಿದ್ದು ಇವುಗಳು ಜಾತ್ರೆ, ನೇಮೋತ್ಸವ, ಕೃಷಿ ಮುಂತಾದ ವಿಚಾರಗಳಿಗೆ ಹೊಂದಿಕೊಂಡಿದೆ.
ತುಳುನಾಡಿನ ಕ್ರೀಡೆಗಳಲ್ಲಿ ಕಂಬಳದಷ್ಟೇ ಮುಂಚೂಣಿಯಲ್ಲಿರುವ ಒಂದು ಕ್ರೀಡೆ.
‘ಕೋಳಿ ಅಂಕ’ವನ್ನು ಕ್ರೀಡೆ ಅನ್ನುವುದಕ್ಕಿಂತ ನಂಬಿಕೆ ಅಂತ ನಂಬುವವರೇ ಹೆಚ್ಚು. ಕೋಳಿ ಅಂಕ ಅನ್ನುವುದು ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬಂದಿದ್ದು ಇದು ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಯುತ್ತದೆ. ಇದು ಇಲ್ಲಿನ ದೈವಾರಾಧನೆ ಪ್ರಮುಖ ಅಂಗ ಎಂದು ವಿವರಿಸಿದರು.

ಪ್ರಾಚೀನ ಸಂಪ್ರದಾಯದ ಪ್ರಕಾರ ಕೋಳಿ ಅಂಕವು ದೈವಗಳ ನೇಮೋತ್ಸವದ ಮೊದಲು ನಡೆದರೆ, ಇನ್ನು ಕೆಲವು ಕಡೆ ದೈವನರ್ತನದ ಸಂದರ್ಭ ನಡೆಯುತ್ತದೆ, ಮತ್ತೆ ಕೆಲವು ಕಡೆಗಳಲ್ಲಿ ನೇಮೋತ್ಸವ ಮುಗಿದ ನಂತರ ನಡೆಯುತ್ತದೆ. ಹಾಗೆಯೇ ದೈವದ ಗೊನೆಮುಹೂರ್ತದ ನಂತರ ಕೋಳಿಗೂಟ ವಾಡಿಕೆಯಲ್ಲಿ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಕೋಳಿ ಅಂಕಕ್ಕೆ ಜೂಜು ಮಸ್ತಿ ಅನ್ನುವ ಹಣೆಪಟ್ಟಿ ಕಟ್ಟಿ ಸರಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮುಖಾಂತರ ಈ ನಾಡಿನ ಜನತೆಯ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ.
ಅದಲ್ಲದೆ ಈ ಮೊದಲು ಕಂಬಳಕ್ಕೆ ನಿರ್ಬಂಧ ಹೇರಿ ಈಗ ಅದು ಕೂಡ ಸಾಂಪ್ರದಾಯಿಕವಾಗಿ ನಡೆಯುತ್ತಿಲ್ಲ ಅನ್ನುವ ಬೇಸರ ನಾಡಿನ ಜನತೆಗೆ ಇದೆ. ಹಾಗೆ ಇನ್ನು ತೆಂಗಿನಕಾಯಿ ಕುಟ್ಟುವುದೂ ಒಂದು ಸಾಂಪ್ರದಾಯಿಕ ಕ್ರೀಡೆ. ಇದು ವರ್ಷದ ಒಂದು ಶುಭದಿನದಂದು ಆಚರಿಸಲಾಗುತ್ತದೆ. ಆದುದರಿಂದ ಮುಂದಿನ ದಿನಗಳಲ್ಲಿ ಈ ಎಲ್ಲಾ ಆಚರಣೆಗಳನ್ನು ಮುಂದುವರಿಸಲು ನಾವೆಲ್ಲರೂ ಒಂದಾಗಿ ಒಟ್ಟಾಗಿ ಸೇರಿ ಸಮಾಲೊಚನಾ ಸಭೆ ನಡೆಸಲಿದ್ದೇವೆ ಎಂದು ಜಿಲ್ಲಾ ಸಮಿತಿ ಸದಸ್ಯ ಗೋಪಿನಾಥ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲೆಯ ವಿವಿಧೆಡೆ ಅಸಂಘಟಿತರಾಗಿರುವ
ಕೋಳಿ ಅಂಕದ ಅಭಿಮಾನಿಗಳನ್ನು ಸಂಘಟಿಸುವ ದೃಷ್ಟಿಯಿಂದ
ಪುತ್ತೂರು, ಆಲಂಕಾರು ಮುಂತಾದೆಡೆಗಳಲ್ಲಿ ಸ್ಥಳೀಯ ಪ್ರಮುಖರ ಬೆಂಬಲದೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಿದ್ದೇವೆ, ಇದರ ಮುಂದುವರಿದ ಭಾಗವಾಗಿ ಮಾ:15ನೇ ಇದೇ ಬರುವ ಭಾನುವಾರ
ಬೆಳಿಗ್ಗೆ ಬಂದಾರು ಪಾಣೆಕಲ್ಲು ದೇವಸ್ಥಾನದ ವಠಾರದಲ್ಲಿ ಮಹತ್ವದ ಸಭೆಯನ್ನು ಆಯೋಜಿಸಲಾಗಿದ್ದು ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೋಳಿ ಅಂಕದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲಿಸುವಂತೆ
ಸಾಂಪ್ರಾದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯ ಪ್ರಮುಖರು ಕರೆ ನೀಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ವೇದಿಕೆಯ ತಾಲೂಕು ಮುಖಂಡರಾದ ದಿನೇಶ್ ಖಂಡಿಗ , ಶೀನಪ್ಪ ಕೊಯ್ಯೂರು ಇದ್ದರು.

Post Comment

ಟ್ರೆಂಡಿಂಗ್‌

error: Content is protected !!