‘ಅಮೃತ ಮಹೋತ್ಸವ’ ಸಂಭ್ರಮದಲ್ಲಿ ಮೈರೋಳ್ತಡ್ಕ ಸರಕಾರಿ ಶಾಲೆ

‘ಅಮೃತ ಮಹೋತ್ಸವ’ ಸಂಭ್ರಮದಲ್ಲಿ ಮೈರೋಳ್ತಡ್ಕ ಸರಕಾರಿ ಶಾಲೆ

Share

ಡಿ:13ಕ್ಕೆ ಪ್ರತಿಭಾ ಪುರಸ್ಕಾರ
ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಬೆಳ್ತಂಗಡಿ : ಬಂದಾರು ಗ್ರಾಮದ ದ.ಕ.ಜಿ.ಪಂ. ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಮೈರೋಳಡ್ಕ ಇದರ ಅಮೃತ ಮಹೋತ್ಸವ ಸಂಭ್ರಮ ವರ್ಷ ಪ್ರಯುಕ್ತ ಆಯೋಜಿಸಲಾಗಿರುವ ಸರಣಿ ಕಾರ್ಯಕ್ರಮಗಳ ಭಾಗವಾಗಿ ಡಿಸೆಂಬರ್ 13ರಂದು ಪ್ರತಿಭಾ ಪುರಸ್ಕಾರ ಮತ್ತು ಹಳೆ ವಿದ್ಯಾರ್ಥಿ ಸಮ್ಮಿಲನ ಕಾರ್ಯಕ್ರಮವು ಜರಗಲಿದೆ ಎಂದು ಎಸ್ ಡಿ ಎಂ ಸಿ , ಅಮೃತ ಮಹೋತ್ಸವ ಸಮಿತಿ ಹಾಗೂ ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘ (ರಿ), ತಿಳಿಸಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ 2025ನೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 75 ವರ್ಷಗಳು ತುಂಬಿ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು 1950ರಿಂದ 2025ರವರೆಗೆ ಸುಮಾರು ಏಳೂವರೆ ದಶಕದ ನಡುವೆ ಈ ಶಾಲೆಯಲ್ಲಿ ಕಲಿತು ಹೋದ ಸಾವಿರಾರು ವಿದ್ಯಾರ್ಥಿಗಳು ‘ಅಮೃತ’ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಶಾಲಾ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಎಂಬ ವಿಶೇಷ ಭಾವನಾತ್ಮಕ ಕಾರ್ಯಕ್ರಮ ನಡೆಯಲಿದ್ದು ಈ ಶಾಲೆಯಲ್ಲಿ ಕಲಿತು ವಿವಿಧ ವೃತ್ತಿ, ಪ್ರವೃತ್ತಿಗಳ ಕಾರಣಕ್ಕಾಗಿ ಅಥವಾ ಬೇರೆ ಕಾರಣಗಳಿಗಾಗಿ ಬೇರೆ ಬೇರೆ ಊರುಗಳಲ್ಲಿ ಗುರುತಿಸಿಕೊಂಡ ಸಾವಿರಾರು ಹಳೆ ವಿದ್ಯಾರ್ಥಿಗಳು ಅವರು ಮರೆಯಲಾಗದ ಪ್ರೀತಿಯ ಶಾಲೆಗೊಮ್ಮೆ ಎಷ್ಟೋ ವರ್ಷಗಳ ನಂತರ ಮತ್ತೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ ಶಾಲಾ ಋಣ ತೀರಿಸುವ ಭಾಗ್ಯವು ಒದಗಿ ಬಂದಿದೆ.
ಅಮೃತ ಮಹೋತ್ಸವಕ್ಕೆ ಮೆರುಗು ನೀಡಲು ಡಿಸೆಂಬರ್ 13ನೇಪರ ಶನಿವಾರ ಬೆಳಿಗ್ಗೆ ಸಮಯ ಗಂಟೆ 10:30ಕ್ಕೆ ವಿದ್ಯಾದೇಗುಲದಲ್ಲಿ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳು , ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು , ಮನ, ಧನಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮೈರೋಳ್ತಡ್ಕ ಶಾಲಾ ಎಸ್ ಡಿ ಎಂ ಸಿ , ಶಿಕ್ಷಕ ವೃಂದ, ಅಮೃತ ಮಹೋತ್ಸವ ಸಮಿತಿ ಹಾಗೂ ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘ, ಪೋಷಕ ವೃಂದ ವಿನಂತಿಸಿಕೊಂಡಿದೆ.
ಇದೇ ದಿನ ಮಧ್ಯಾಹ್ನ ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಗ್ಗಜಗ್ಗಾಟ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!