ಪ್ರತಿಭಾಕಾರಂಜಿ : ಕುಂಟಾಲಪಲ್ಕೆ ಶಾಲೆಗೆ ವಿವಿಧ ಬಹುಮಾನಗಳು- ಭವಿಷ್ ವಿ.ಗೌಡ ತಾ. ಮಟ್ಟಕ್ಕೆ ಆಯ್ಕೆ
ಬಂದಾರು : ಕಣಿಯೂರು ಪದ್ಮುಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಂದಾರು ಗ್ರಾಮದ ಕುಂಟಾಲಪಲ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು ಪ್ರತಿಭಾ ಕಾರಂಜಿಯ ಕಿರಿಯ ವಿಭಾಗದಲ್ಲಿ 1ನೇ ತರಗತಿ ಭವಿಷ್ ವಿ.ಗೌಡ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಕಿರಿಯ ವಿಭಾಗದಲ್ಲಿ 4ನೇ ತರಗತಿಯ ಅನನ್ಯ ಆಶುಭಾಷಣದಲ್ಲಿ ದ್ವಿತೀಯ ಸ್ಥಾನ ಮತ್ತು ಚಿತ್ರಕಲೆಯಲ್ಲಿ ತೃತೀಯ ಸ್ಥಾನ, 4ನೇ ತರಗತಿಯ ಶ್ರಾವ್ಯ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನ, ಹಾಗೂ 7ನೇ ತರಗತಿಯ ರಕ್ಷಿತಾ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ
ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಾರ್ಗದರ್ಶನದೊಂದಿಗೆ
ತರಬೇತುಗೊಳಿಸಿದ ಶಿಕ್ಷಕಿಯರಿಗೆ ಮುಖ್ಯ ಶಿಕ್ಷಕಿ ಗಾಯತ್ರಿ ಜಯಪ್ರಕಾಶ್ ಕೃತಜ್ಞತೆ ಸಲ್ಲಿಸಿದ್ದಾರೆ.
Post Comment