ಜನಮೆಚ್ಚಿದ ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ ಸಮರ್ಥ ನಾಯಕತ್ವಕ್ಕೆ ಹತ್ತನೇ ವರ್ಷ

ಜನಮೆಚ್ಚಿದ ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ ಸಮರ್ಥ ನಾಯಕತ್ವಕ್ಕೆ ಹತ್ತನೇ ವರ್ಷ

Share

ಕಂಬಳದ ‘ಕರೆ’ಗೆ ಓಗೊಟ್ಟು ಬರುವ ಕಂಬಳ ಪ್ರೇಮಿಗಳು…

ವೇಣೂರು : ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ- ವಿಕ್ರಮ ಕಂಬಳ ಸಂಘಟಿಸುವ ಸಂಘಟನಾ ಚತುರ ರಶ್ಮಿತ್ ಶೆಟ್ಟಿ ಅವರ ಸಮರ್ಥ ನಾಯಕತ್ವದಲ್ಲಿ ಈ ಭಾರಿ ಹತ್ತನೇ ವರ್ಷದ ಕಂಬಳ ಎಂದಿನ ಸಂಭ್ರಮದೊಂದಿಗೆ ಜರಗಲಿದೆ.
ಕಂಬಳ ಸಂಘಟಿಸುವ ನಾಯಕತ್ವ ವಹಿಸಿಕೊಂಡ ಯುವ ನಾಯಕನೊಬ್ಬ ಜಾತಿ, ಪಕ್ಷ ಪ್ರತಿಷ್ಠೆ ಮತ್ತಿತರ ಲೆಕ್ಕಾಚಾರಗಳ ಅಡೆತಡೆ , ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಯಾವುದೇ ವಿವಾದಗಳಿಗೆ ಆಸ್ಪದ ಕೊಡದಂತೆ ಕಳೆದ ಒಂಬತ್ತು ವರ್ಷಗಳಿಂದ ಹೊಕ್ಕಾಡಿಗೋಳಿ ಕಂಬಳವನ್ನು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಸಂಭ್ರಮದೊಂದಿಗೆ ಯಶಸ್ವಿಯಾಗಿ ಸಂಘಟಿಸುತ್ತಾ ಬರುತ್ತಿರುವುದನ್ನು ಗ್ರಾಮದ ಕಂಬಳಾಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇದೇ ಕಾರಣದಿಂದ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಯುವ ಕಂಬಳ ಪ್ರೇಮಿಗಳು ಹೊಕ್ಕಾಡಿಗೋಳಿ ಕಂಬಳ ಕರೆ ಮುಹೂರ್ತದಿಂದ ಹಿಡಿದು ಕಂಬಳದವರೆಗೆ ಮಾತ್ರವಲ್ಲ ಕಂಬಳದ ಮರುದಿನದವರೆಗೂ ಸಕ್ರೀಯವಾಗಿ ಎಲ್ಲಾ ಕೆಲಸ, ಕಾರ್ಯಗಳಲ್ಲಿ ಕಂಬಳದ ‘ಕರೆ’ಗೆ ಓಗೊಟ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಕೊರೋನಾ ಹುಟ್ಟಿಸಿದ ಕಿರಿಕಿರಿ ಸವಾಲುಗಳ ಆತಂಕಕಾರಿ ಸಮಯದಲ್ಲೂ ಇತರೆ ಕೆಲವು ಕಂಬಳ ಕೂಟಗಳು ಕಂಬಳ ಆಯೋಜನೆಗೆ ಹಿಂಜರಿದಿದ್ದ ಪರಿಸ್ಥಿತಿಯಲ್ಲೂ ಅಲ್ಪಾವಧಿಯಲ್ಲಿ ಯುವಕರನ್ನು ಸಂಘಟಿಸಿ ಕರೆ ಸಿದ್ಧಪಡಿಸಿ ಕಂಬಳ ಆಯೋಜಿಸಿ ಯಶಸ್ವಿಯಾಗಿ ಇತರ ಕಂಬಳ ಸಂಘಟಕರ ಗಮನ ಸೆಳೆದವರು ರಶ್ಮಿತಣ್ಣ…” ಎನ್ನುತ್ತಾರೆ ಸ್ಥಳೀಯ ಕಂಬಳ ಪ್ರೇಮಿಗಳು.
ಅಚ್ಚುಕಟ್ಟಾದ ಕರೆನಿರ್ಮಾಣ, ವ್ಯವಸ್ಥಿತ ನಿರ್ವಹಣೆ, ಕೋಣಗಳ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಳ, ಸಮರ್ಥ ಯುವಕ ದಂಡು, ಶಿಸ್ತುಬಧ್ಧ ಕಂಬಳ ಆಯೋಜನೆ ರಶ್ಮಿತ್ ಶೆಟ್ಟರ ಸಮರ್ಥ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಂಬಳ ಸಂಘಟಕ ರಶ್ಮಿತ್ ಶೆಟ್ಟರ ಮುಂದಾಳತ್ವದಲ್ಲಿ ಹತ್ತನೇ ವರ್ಷದ ಹೊಕ್ಕಾಡಿಗೋಳಿ ಕಂಬಳ ಆಯೋಜನೆಯ ಮೆರುಗು ಹೆಚ್ಚುವಂತೆ ಮಾಡಿದ್ದು ಅವರ ಸಮರ್ಥ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂಬ ಮೆಚ್ಚುಗೆಯ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!