ಬೆಳ್ತಂಗಡಿಮೂರು ಮಾರ್ಗದಲ್ಲಿ ಅನಾಗರಿಕ ಪಾರ್ಕಿಂಗ್ !
ಬೆಳ್ತಂಗಡಿ : ವಾಹನ ಸವಾರರಿಗೆ ಬಕ ಪಕ್ಷಿಗಳಂತೆ ಹೊಂಚು ಹಾಕಿ ನಿಲ್ಲುವ ಸಂಚಾರಿ ಪೊಲೀಸರಿಗೆ ನಗರದ ಮೂರು ಮಾರ್ಗದ ಬಾವಿ ಬಳಿ ಅಡ್ಡಾದಿಡ್ಡಿಯಾಗಿ ರಸ್ತೆ ಮಧ್ಯಯೇ ನಿಲ್ಲಿಸಿ ಹೋಗುವ ಕಾರುಗಳು ಕಾಣಿಸುವುದೇ ಇಲ್ಲ. ಇದು ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿಯ ಬಾವಿ ವೃತ್ತದ ಸುತ್ತಲಿರುವ ರಸ್ತೆಯಲ್ಲಿ ನಿಲ್ಲಿಸಿ ಹೋದ ಎರಡು ಕಾರುಗಳು.!
ಬೇರೆ ವಾಹನಗಳ ಸಂಚಾರಕ್ಜೆ ಅಡಚಣೆಯಾಗುತ್ತದೆ ಎಂವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲೇ ನಿಲ್ಲಿಸಿ ಹೋಗಿದ್ದಾರೆ. ರಸ್ತೆಯಲ್ಲಿ ಪಾರ್ಕಿಂಗ್ ಮಾಡಿರುವ ಕಾರುಗಳ ಮಧ್ಯೆ ಒಂದು ಅಟೋ ಹೋಗುವಷ್ಟು ಜಾಗವಿದ್ದು ಈ ಅಂತರದಲ್ಲಿ ಕಾರುಗಳು ಹೊಕ್ಕಲು ಅವಕಾಶವಿಲ್ಲದ ರೀತಿಯಲ್ಲಿ ಅನಾಗರಿಕರಂತೆ ಪಾರ್ಕಿಂಗ್ ಮಾಡಿ ಹೋಗಿದ್ದಾರೆ ಎಂಬ ಆರೋಪಗಳು ನಾಗರಿಕರಿಂದ ಕೇಳಿ ಬಂತು.











Post Comment