ಫೆ.22ಕ್ಕೆ ಬಂದಾರು ಶ್ರೀರಾಮನಗರದಲ್ಲಿ ‘ಕುಂಭಾ ಸಮಾಗಮ’

ಫೆ.22ಕ್ಕೆ ಬಂದಾರು ಶ್ರೀರಾಮನಗರದಲ್ಲಿ ‘ಕುಂಭಾ ಸಮಾಗಮ’

Share
IMG-20250220-WA0017-1024x460 ಫೆ.22ಕ್ಕೆ ಬಂದಾರು ಶ್ರೀರಾಮನಗರದಲ್ಲಿ        'ಕುಂಭಾ ಸಮಾಗಮ'
20250220_162023-1024x783 ಫೆ.22ಕ್ಕೆ ಬಂದಾರು ಶ್ರೀರಾಮನಗರದಲ್ಲಿ        'ಕುಂಭಾ ಸಮಾಗಮ'

ಬೆಳ್ತಂಗಡಿ : ಮಣ್ಣಿನ ಮಕ್ಕಳಾದ ಕುಂಬಾರರ ಬಗ್ಗೆ ನಮ್ಮ ಪುರಾತನ ಕಾವ್ಯಗಳಲ್ಲಿ ಅನೇಕ ಉಲ್ಲೇಖಗಳಿವೆ, ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳಿಗೆ ಕುಂಬಾರ ಸಮುದಾಯವು ಮಹತ್ವದ ಕೊಡುಗೆಗಳನ್ನು ನೀಡಿದೆ. ನಾಗರೀಕ ಸಮಾಜಕ್ಕೆ ಆಹಾರ ಬೇಯಿಸಿ ತಿನ್ನಲು ಬೇಕಾಗುವ ಮಡಿಕೆ-ಕುಡಿಕೆಗಳನ್ನು ನೀಡಿರುವ ಹೆಗ್ಗಳಿಕೆ ಕುಂಬಾರ ಸಮುದಾಯದಾಗಿರುತ್ತದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿರುವ ಕುಂಬಾರ ಹಿನ್ನಲೆಯನ್ನು ಹೊಂದಿದೆ.ಇಂಥ ಸಾಂಸ್ಕೃತಿಕ ವೈವಿಧ್ಯತೆ ಹೊಂದಿರುವ ಕುಂಬಾರ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಹಾಗೂ ಕುಂಬಾರ ಸಮುದಾಯದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶ ಹಾಗೂ ಸಮುದಾಯದ ಜನರಿಗೆ ವಿವಿಧ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ಕುಂಬಾರರಿಗೆ ರಾಜಕೀಯ ಸ್ಥಾನಮಾನ, ಕುಲವೃತ್ತಿ ಕುಂಬಾರಿಕೆಯನ್ನು ಉಳಿಸಿ ಬೆಳೆಸಲು ಸರಕಾರದಿಂದ ವಿಶೇಷ ಸೌಲಭ್ಯಗಳಿಗೆ ಒತ್ತಾಯಿಸಿ ದ.ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ‘ಕುಂಬಾರ ಸಮಾಗಮ’ ಸಮಾಜದ ವಿವಿಧ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ವೈವಿಧ್ಯ ಹಾಗೂ ಸ್ವಜಾತಿ ಬಾಂಧವರ ಹೊನಲು ಬೆಳಕಿನ ಪಾಲಿಬಾಲ್ ಪಂದ್ಯಾಟವು ಬಂದಾರು ಗ್ರಾಮದ ಶ್ರೀರಾಮ ನಗರದಲ್ಲಿ ಫೆ22ನೇ ಶನಿವಾರದಂದು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕುಂಬಾರರ ಸಂಘದ ಅಧ್ಯಕ್ಷ ಕೆಂಚಪ್ಪ ಕುಂಬಾರ , ನ್ಯಾಯವಾದಿ, ಕುಂಬಾರರ ಸಮಾವೇಶ ಮತ್ತು ಕ್ರೀಡಾಕೂಟದ ಕಾರ್ಯಾಧ್ಯಕ್ಷ ಉದಯ ಕುಮಾರ್ ಬಿ.ಕೆ. ಮಾಹಿತಿ ನೀಡಿದರು.
ಕುಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್, ರಾಜೀವ ಗಾಂಧಿ ವಿ.ವಿ. ಸೆನೆಟ್ ಸದಸ್ಯ ಶ್ರೀನಿವಾಸ ಮೇಲು, ಯುವ ಉದ್ಯಮಿ ಕಿರಣ್ ಚಂದ್ರ ಡಿ. , ಸಮುದಾಯದ ಹಿರಿಯ ನಾಯಕ ಡಾ| ಅಣ್ಣಯ್ಯ ಕುಲಾಲ್, ಹಿರಿಯರಾದ ಪದ್ಮಕುಮಾರ್, ಭಾಸ್ಕರ ಪೆರುವಾಯಿ ಹಾಗೂ ಸಮುದಾಯದ ವಿವಿಧ ಗುರಿಕಾರರು, ನಾಯಕರು, ಪ್ರಮುಖರು ಸಮುದಾಯದ ಯುವ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂದಾರು ಕುಂಬಾರರ ಸೇವಾ ಸಂಘದ ಅಧ್ಯಕ್ಷ ಕೆಂಚಪ್ಪ ಕುಂಬಾರ, ಕಾರ್ಯದರ್ಶಿ ಮಾಜಿ ಅಧ್ಯಕ್ಷ ರಮೇಶ್ ಕುಂಬಾರ, ಕಾರ್ಯದರ್ಶಿ ಪ್ರಕಾಶ್ ಕೆ, ಜೈ ಶ್ರೀರಾಮ್ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಬಿ.ಕೆ. ಇದ್ದರು.

Previous post

ದಶಕದ ಹಿಂದೆ ನೆರಿಯಾದಲ್ಲಿ ದಲಿತನ ಕೈಬೆರಳು ಕತ್ತರಿಸಿದ ಪ್ರಕರಣ : ನಾಲ್ವರು ಆರೋಪಿಗಳ ಅಪರಾಧ ಸಾಬೀತು ; ಶಿಕ್ಷೆ ಪ್ರಕಟ

Next post

ಅಂಡಿಂಜೆ ಸರಕಾರಿ ಗೇರು ನೆಡುತೋಪಿಗೆ ಕಾಡ್ಗಿಚ್ಚು; ಮೂರು ದಿನಗಳಿಂದ ಬೆಂಕಿ ನಂದಿಸಲು ಹರಸಾಹಸ

Post Comment

ಟ್ರೆಂಡಿಂಗ್‌