ಕರ್ನಾಟಕ ದ.ಸಂಸ. (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಬಿ.ಕೆ.ವಸಂತ್ ಪುನರಾಯ್ಕೆ

ಬೆಳ್ತಂಗಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ವಿಭಾಗೀಯ ಸಂಚಾಲಕರಾಗಿ ಬೆಳ್ತಂಗಡಿಯ ಬಿ.ಕೆ.ವಸಂತ್ ಇವರು ಎರಡನೇ ಭಾರಿ ಆಯ್ಕೆಯಾಗಿದ್ದಾರೆ.
ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 4ರಂದು ಮೈಸೂರಿನಲ್ಲಿ ನಡೆದ “ದಲಿತ ಚಳುವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು” ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣ ಮತ್ತು ಮೈಸೂರು ವಿಭಾಗೀಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ
ಕೆ.ದೀಪಕ್ ಅವರು ಉದ್ಘಾಟಿಸಿ ಶುಭಹಾರೈಸಿದರು.
ಅಧ್ಯಕ್ಷತೆವಹಿಸಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್
ಮಾತನಾಡುತ್ತಾ “ಅಂಬೇಡ್ಕರ್ ತೋರಿದ ಸಮಸಮಾಜ ನಿರ್ಮಾಣಕ್ಕೆ ದಲಿತ ಸಂಘಟನೆ ಶ್ರಮಿಸಿದರೆ ಅದರ ವಿರುದ್ದವಾಗಿ ಕೋಮು ಶಕ್ತಿಗಳು ಅಂಬೇಡ್ಕರ್ ವಿಚಾರಧಾರೆಗಳನ್ನು
ನಾಶಮಾಡುತ್ತಿರುವುದು ದೇಶಾದ್ಯಂತ ನಾವು ಕಾಣುತ್ತಿದ್ದೇವೆ ಈ ಬಗ್ಗೆ ಎಚ್ಚರಿಕೆಯಿಂದ ಚಳುವಳಿಯ ನಾಯಕರು ಕಾರ್ಯಕರ್ತರು ವರ್ತಮಾನದ ಸವಾಲುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಲೇ ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಬೇಕು. ಮತ್ತು ಸಂಘಟನೆಯನ್ನು ಬಲಗೊಳಿಸಬೇಕು ಹಾಗೂ ಪ್ರಬುದ್ದ ಭಾರತದ ನಿರ್ಮಾಣದ ಕಡೆಗೆ ನಾವೆಲ್ಲರೂ ಸಾಗಬೇಕಾಗಿದೆ ಎಂದು ಕರೆ ನೀಡಿದರು.
ದಲಿತ ಚಳುವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು ವಿಚಾರವಾಗಿ ವಿಷಯ ಮಂಡನೆಯ ಕುರಿತು
ದಲಿತ ಸಾಹಿತ್ಯ ಪರಿಷತ್ ನ ಸಂಯೋಜಕರಾದ ಡಾ. ಚಂದ್ರಗುಪ್ತ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅಥಿಗಳಾಗಿ ಹಿರಿಯ ದಲಿತ ನಾಯಕ , ವಿಮರ್ಶಕರು, ರಾಜ್ಯ ಮಟ್ಟದ ರಂಗ ಕಲಾವಿದರಾದ ಜನಾರ್ದನ್ ಜನ್ನಿ ಇವರು ಭಾಗವಹಿಸಿ ದಲಿತ ಚಳವಳಿ ನಡೆದು ಬಂದ ಹಾದಿಯನ್ನು ತಿಳಿಸಿ ಯುವ ಪೀಳಿಗೆಯನ್ನು ಸಂಘಟನೆಯ ದಾರಿಗೆ ತರುವಂತೆ ಕರೆ ನೀಡಿದರು. ರಾಜ್ಯ ಸಂಘಟನಾ ಸಂಚಾಲಕರುಗಳಾದ ಈರೇಶ್ ಹೀರೆಹಳ್ಳಿ,
ಸುಂದರ್ ಮಾಸ್ತರ್ ಉಡುಪಿ, ಮಲ್ಲೇಶ್ ಅಂಬುಗ ಹಾಸನ್,
ಸಿದ್ದರಾಜ್ ದೊಡ್ಡಿಂದವಾಡಿ ಚಾಮರಾಜ ನಗರ ಹಾಗೂ ವಿಭಾಗೀಯ ಸಂಘಟನಾ ಸಂಚಾಲಕರಾದ ಬಿ.ಕೆ.ವಸಂತ್ ಬೆಳ್ತಂಗಡಿ, ಮೈಸೂರು ಜಿಲ್ಲಾ ಪ್ರಧಾನ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್, ಮೈಸೂರು ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಧರ್ಮಮ್ಮ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ.ಸಂ.ಸ.ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಮಟ್ಟದ ಸರ್ವ ಸದಸ್ಯ ಸಭೆಯಲ್ಲಿ ಮೈಸೂರು ವಿಭಾಗೀಯ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆಯನ್ನು ಇದೇ ಸಭೆಯಲ್ಲಿ ನಡೆಸಲಾಗಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.
ಮೈಸೂರು ವಿಭಾಗೀಯ ಸಂಚಾಲಕರಾಗಿ ಹಾಲೇಶಪ್ಪ ಶಿವಮೊಗ್ಗ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಎರಡನೇ ಬಾರಿಗೆ ಬಿ.ಕೆ.ವಸಂತ್ ಬೆಳ್ತಂಗಡಿ ಇವರು ಸರ್ವಾನುಮತದಿಂದ
ಆಯ್ಕೆಯಾಗಿದ್ದಾರೆ.
ವಿಭಾಗೀಯ ಸಂಘಟನಾ ಸಂಚಾಲಕರುಗಳಾಗಿ ಬನ್ನಳ್ಳಿ ಸೋಮಣ್ಣ ಮೈಸೂರು, ಶಾಮ್ರಾಜ್ ಭಿರ್ತಿ ಉಡುಪಿ, ಲಕ್ಷ್ಮಣ್ ಬೇಲೂರು,
ವೀರ ಕುಮಾರ್. ಕೆ. ಧರ್ಮೇಶ್ ಕುಪ್ಪೆ ಚಾಮರಾಜ್ ನಗರ,
(ಕೋಶಾಧಿಕಾರಿ) , ವಿಭಾಗೀಯ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಗಳನ್ನು ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ನೆ ರವೇರಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
Post Comment