ಅಂಡಿಂಜೆಯಲ್ಲಿ ಪವರ್ ಮ್ಯಾನ್ ಅಸಹಜ ಸಾವು : ರಸ್ತೆ ಬದಿ ಬಿದ್ದ ಸ್ಥಿತಿಯಲ್ಲಿ ಪತ್ತೆ


ಬೆಳ್ತಂಗಡಿ : ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಪವರ್ ಮ್ಯಾನ್ ಸುಧಾಕರ (50) ಅಸಹಜವಾಗಿ ಸಾವನ್ನಪ್ಪಿದ ಘಟನೆ ಮಾ.26ರಂದು ನಡೆದಿದೆ.
ಕರ್ತವ್ಯದಲ್ಲಿದಲ್ಲಿದ್ದ ಪವರ್ ಮ್ಯಾನ್ ಸುಧಾಕರ ಅವರು ಅಂಡಿಜೆಯಲ್ಲಿ ರಸ್ತೆ ಬದಿ ಬಿದ್ದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಗಮನಿಸಿದ ಸ್ಥಳೀಯರು ತಕ್ಷಣ ಇವರನ್ನು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು. ಈ ವೇಳೆ ಅವರು ಸಾವನ್ನಪ್ಪಿದ್ದಾರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದರು. ಮೈಮೇಲೆ ಯಾವುದೇ ಗಾಯದ ಕುರುಹುಗಳು ಕಂಡುಬಂದಿಲ್ಲ.
ಆದರೆ ಯಾವ ಕಾರಣದಿಂದ ಈತ ಮೃತಪಟ್ಟರೆಂಬ ಸಂಗತಿ
ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಬೇಕಿದೆ.
Post Comment