ಓಡಿಲ್ನಾಳ ಸುತ್ತಮುತ್ತ ಗಾಳಿ ಮಳೆ : ಮರ ಬಿದ್ದು ಮನೆಗೆ ಹಾನಿ

ಬೆಳ್ತಂಗಡಿ : ಮಂಗಳವಾರ ಸಂಜೆ ಸುರಿದ ಗಾಳಿ ಮಳೆಯ ಪರಿಣಾಮ ಓಡಿಲ್ನಾಳ ಗ್ರಾಮದ ಚಿಮುಳ್ಳು ಎಂಬಲ್ಲಿನ ನಿವಾಸಿ ಪರಿಶಿಷ್ಟ ಜಾತಿಯ ಸುಂದರಿ ನಲ್ಕೆ ಎಂಬವರ ಮನೆಯ ಮೇಲೆ ಮರಗಳು ಕುಸಿದು ಬಿದ್ದು ಹಾನಿಯಾಗಿದೆ.
ಬೆಳ್ತಂಗಡಿ ತಾಲೂಕಿನ. ಮರಗಳು ಓಡಿಲ್ನಾಳ ಗ್ರಾಮದ ಚಿಮುಳ್ಳು ಎಂಬಲ್ಲಿನ ನಿವಾಸಿ ಪರಿಶಿಷ್ಟ ಜಾತಿಯ ಸುಂದರಿ ನಲ್ಕೆ ಎಂಬವರ ಮನೆಗೆ ಮನೆಯ ಸಮೀಪದ ಮರಗಳು ಕುಸಿದು ಮುರಿದು ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಬಡ ಕುಟುಂಬ ಅಪಾಯದಿಂದ ಪಾರಾಗಿದೆ, ಆದರೆ ಮನೆಯ ಛಾವಣಿಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಸ್ಥಳೀಯವಾಗಿ ಮನೆಗಳಿರುವ ಪ್ರದೇಶದಲ್ಲಿ ಮರಗಳು ಕುಸಿದು ಮತ್ತು ಮುರಿದು ಬಿದ್ದಿದ್ದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮನೆಗಳಿಗೆ ಕುಸಿದು ಅಥವಾ ಮುರಿದು ಬೀಳುವ ಅಪಾಯದಲ್ಲಿರುವ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಹಲವು ಭಾರಿ ಲಿಖಿತ ಮನವಿ ಕೊಡಲಾಗಿದ್ದರೂ ಇಲಾಖಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದೇ ಘಟನೆಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
Post Comment