ಸಮೂಹ ಸಮಾಧಿ ಪ್ರಕರಣ: ಬಂಧಿತ ಸಾಕ್ಷಿ ದೂರುದಾರ ಮಂಡ್ಯದ ಸಿ.ಎನ್. ಚಿನ್ನಯ್ಯ ಎಸ್ಐಟಿ ಕಸ್ಟಡಿಗೆ!

ಸಮೂಹ ಸಮಾಧಿ ಪ್ರಕರಣ: ಬಂಧಿತ ಸಾಕ್ಷಿ ದೂರುದಾರ ಮಂಡ್ಯದ ಸಿ.ಎನ್. ಚಿನ್ನಯ್ಯ ಎಸ್ಐಟಿ ಕಸ್ಟಡಿಗೆ!

Share
IMG_20250823_140550 ಸಮೂಹ ಸಮಾಧಿ ಪ್ರಕರಣ: ಬಂಧಿತ ಸಾಕ್ಷಿ ದೂರುದಾರ ಮಂಡ್ಯದ ಸಿ.ಎನ್. ಚಿನ್ನಯ್ಯ ಎಸ್ಐಟಿ ಕಸ್ಟಡಿಗೆ!

ಬೆಳ್ತಂಗಡಿ : ಧರ್ಮಸ್ಥಳ ಭಾಗದಲ್ಲಿ ನೂರಾರು ಮೃತದೇಹಗಳನ್ನು
ಹೂತು ಹಾಕಿದ ಪ್ರಕರಣದ ಸಾಕ್ಷಿ ದೂರುದಾರ ಎಂದು ಪರಿಗಣಿಸಲಾಗಿದ್ದ ಮಾಧ್ಯಮಗಳಿಂದ ‘ಭೀಮ’ ಎಂದು ಕರೆಯಲ್ಪಡುತ್ತಿದ್ದ ಮಂಡ್ಯ ಜಿಲ್ಲೆಯ ಸಿ.ಎನ್.ಚಿನ್ನಯ್ಯ ಯಾನೆ ಚೆನ್ನ ಎಂಬಾತನನ್ನು ಎಸ್.ಐ.ಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಆ.22 ರಂದು ಮಂಗಳೂರು ಸಕ್ಷಮ ಪ್ರಾಧಿಕಾರದಿಂದ ಪ್ರೊಟೆಕ್ಷನ್ ಕಾಯ್ದೆಯನ್ನು ರದ್ದುಗೊಳಿಸಿದ ಎಸ್.ಐ.ಟಿ. ಅಧಿಕಾರಿಗಳು ಈತನನ್ನು ಬೆಳಗ್ಗೆ ಬಂಧಿಸಿ 10 ಗಂಟೆಗೆ
ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ್ದು ಬಳಿಕ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಅವರ ಮುಂದೆ ‌ಹಾಜರುಪಡಿಸಲಾಗಿದೆ.
ನ್ಯಾಯಾಲಯವು ಈತನನ್ನು ಹತ್ತು ದಿಗಳ ಕಾಲ ಎಸ್ ಐ ಟಿ ಕಸ್ಟಡಿಗೆ ಒಪ್ಪಿಸಿದೆ. ಒಟ್ಟಿನಲ್ಲಿ ಇಡೀ ಪ್ರಕರಣವು ಸಿನಿಮೀಯ ತಿರುವು ಪಡೆದುಕೊಂಡಂತಾಗಿದ್ದು ಕುತೂಹಲ ಮೂಡಿಸಿದೆ.

Previous post

ಸಮೂಹ ಸಮಾಧಿ ಪ್ರಕರಣ: ಬಂಧಿತ ಸಾಕ್ಷಿ ದೂರುದಾರ ಸಿ.ಎನ್. ಚಿನ್ನಯ್ಯ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್ ಐಟಿ

Next post

ಬಿ.ಎಲ್. ಸಂತೋಷ್ ಅವಹೇಳನ ಪ್ರಕರಣ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿಗೆ ಮಂಜೂರಾದ ಜಾಮೀನು

Post Comment

ಟ್ರೆಂಡಿಂಗ್‌

error: Content is protected !!