ಹೊಕ್ಕಾಡಿಗೋಳಿ ವೀರ -ವಿಕ್ರಮ ಜೋಡುಕರೆ ಕಂಬಳ: ಸ್ಥಳೀಯ ಸಂಘ ಸಂಸ್ಥೆಗಳಿಂದ ಶ್ರಮದಾನ

ಬೆಳ್ತಂಗಡಿ : ಡಿಸೆಂಬರ್ 21ರಂದು ಜರಗಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ -ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆಯು ಭಾನುವಾರ ಬಿಡುಗಡೆಗೊಂಡಿದ್ದು ಕಂಬಳ ಕರೆ ಸಜ್ಜುಗೊಳಿಸುವ ಶ್ರಮದಾನ ಕಾರ್ಯದಲ್ಲಿ ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳು ಭಾಗಿಯಾಗುತ್ತಿದ್ದಾರೆ.
ಕರೆ ಮುಹೂರ್ತ ದಿನದಿಂದ ಇದುವರೆಗೂ ಗ್ರಾಮಸ್ಥರು , ಸುತ್ತಮುತ್ತಲಿನ ಗ್ರಾಮಗಳ ಕಂಬಳಾಭಿಮಾನಿಗಳು ಕಂಬಳ ಕರೆ ವಠಾರದಲ್ಲಿ ವಿವಿಧ ಶ್ರಮದಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಂಬಳ ಕರೆ ಪರಿಸರದಲ್ಲಿ ಹಂತ ಹಂತದ ವಿವಿಧ ಕೆಲಸ ಕಾರ್ಯಗಳ
ಶ್ರಮದಾನ ಮುಂದುವರಿದಿದ್ದು ಪ್ರಮುಖವಾಗಿ ಶ್ರೀ ಮಹಿಷಮರ್ಧಿನಿ ಭಜನಾ ಮಂಡಳಿ ಪೂಂಜ, ಜೈ ಭಾರತ್ ಮಾತಾ ಭಜನಾ ಮಂಡಳಿ ಉಪ್ಪಿರ, ಶ್ರೀ ಗಣೇಶ್ ಹನ್ನೆರಡುಕವಲು, ಪಂಚದುರ್ಗಾ ಫ್ರೆಂಡ್ಸ್ ಹೊಕ್ಕಾಡಿಗೋಳಿ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಾಣಿಮೇರು ಮುಂತಾದ ಸಂಘ -ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳುವ ಮೂಲಕ ತಮ್ಮ ಕಂಬಳಾಭಿಮಾನವನ್ನು ಉತ್ಸಾಹದಿಂದ ಮೆರೆಯುತ್ತಿದ್ದಾರೆ.
ಶ್ರಮದಾನದ ಸಂದರ್ಭ ಸಂಘದ ಸಂಸ್ಥೆಗಳ ಪ್ರಮುಖರು ಮತ್ತು
ಕಂಬಳ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ನೋಣಾಲುಗುತ್ತು ಮತ್ತಿತರ ಪದಾಧಿಕಾರಿಗಳು, ಸದಸ್ಯರು ಸ್ಥಳದಾನಿಗಳು ಕಂಬಳದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
















Post Comment