ಬಾಲ್ಯವಿವಾಹಕ್ಕೆ ಮಕ್ಕಳ ಕಲ್ಯಾಣ ಸಮಿತಿಯಿಂದ ತಡೆ

ಬಾಲ್ಯವಿವಾಹಕ್ಕೆ ಮಕ್ಕಳ ಕಲ್ಯಾಣ ಸಮಿತಿಯಿಂದ ತಡೆ

Share

ಅಪ್ರಾಪ್ತೆ ಮದುವೆ ಮಾಡಲಿದ್ದ ಹೆತ್ತವರ ಮನವೊಲಿಸಿದ ಅಧಿಕಾರಿಗಳು

ಬೆಳ್ತಂಗಡಿ : ಬಾಲ್ಯ ವಿವಾಹವನ್ನು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣ ಇಲಾಖೆಯ ನೇತೃತ್ವದಲ್ಲಿ ತಡೆದ ಘಟನೆ
ಕಳಿಯ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಮಸೀದಿಯ ವತಿಯಿಂದ ಪ್ರತೀ ವರ್ಷ ಬಡ ಕುಟುಂಬಗಳ ವಧೂ-ವರರನ್ನು ಗುರುತಿಸಿ ಸರಳ ವಾರ್ಷಿಕ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು ಪ್ರತಿ ವರ್ಷದಂತೆ ವಿವಾಹ ಪೂರ್ವದಲ್ಲಿ ಹೆಸರು ನೋಂದಣಿ ಮಾಡಿಕೊಂಡ ವಧುವೊಬ್ಬಳು ಅಪ್ರಾಪ್ತ ವಯಸ್ಕಳು ಎಂಬ ಮಾಹಿತಿ ಸ್ಥಳೀಯರಿಂದ ಮಕ್ಕಳ ರಕ್ಷಣಾ ಸಮಿತಿಗೆ ತಲುಪಿದೆ.
ಮಾಹಿತಿ ದೊರೆತ ಕೂಡಲೇ ಕಳಿಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ತಡೆಯಲು ಮುಂದಾದರು. ಮಕ್ಕಳ ಕಲ್ಯಾಣ ಸಮಿತಿ ವಧು-ವರರ ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿ ಪ್ರಾಪ್ತ ವಯಸ್ಕಳಾಗಲು ಇನ್ನೂ 3 ತಿಂಗಳು ಬಾಕಿ ಇರುವ ವಿಚಾರ ದೃಢಪಟ್ಟಿತು.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದ ಎರಡೂ ಮದುವೆ ಮನೆಯವರ ಮನವೊಲಿಸಿ ಮುಂದಿನ ಮೂರು ತಿಂಗಳ ಬಳಿಕ ಅಥವಾ ಕಾನೂನು ಪ್ರಕಾರ ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಿಸುವಂತೆ ಸೂಚಿಸಿದ್ದು ಸಂಭಾವ್ಯ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!