ಶಾಸಕ ಹರೀಶ್ ಪೂಂಜ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದವಿಶೇಷ ಪೂಜೆ

ಬಂದಾರು : ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜ ಅವರ ಜನುಮದಿನದ ಅಂಗವಾಗಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ ಬಂದಾರು ಗ್ರಾಮದ ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶಾಶ್ವತ ಪೂಜೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಶಾಸಕರಿಗೆ ದೀರ್ಘಾಯುಷ್ಯ, ಆಯುರಾರೋಗ್ಯ, ಸಂಪತ್ತು, ಪ್ರಾಪ್ತಿಯಾಗಲಿ, ಕ್ಷೇತ್ರದಲ್ಲಿ ಮೂರನೇ ಭಾರಿ ಶಾಸಕರಾಗಿ, ಸಚಿವ ಸ್ಥಾನ ಲಭಿಸಲಿ ಎಂದೂ ಅಭಿಮಾನಿಗಳು ಶಾಶ್ವತ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರಿಸಲಾಯಿತು.
ಈ ಸಂದರ್ಭ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕ ಲೋಕ್ಷತ್ ಗೌಡ , ಪೆರ್ಲ -ಬೈಪಾಡಿ ಬೂತ್ ಸಮಿತಿ ಕಾರ್ಯದರ್ಶಿ ಲೋಹಿತ್ ಗೌಡ ಸೋನಕುಮೇರು, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಆಡಳಿತ ಮೊಕ್ತೇಸರರಾದ ಹರೀಶ್ ಗೌಡ ಕೊಡಿಮಜಲು ಲಕ್ಷ್ಮೀಕಾಂತ ಗೌಡ ಕೀಲಾರ್, ನಾರಾಯಣ ಗೌಡ ಪಯ್ಯೋಡಿ, ದೇವಪ್ಪ ಪರ್ಲಾರ್, ಪವನ್ ಒಲಕ್ಕುಡೆ , ಕೇಶವ ಏಕ, ರಂಜಿತ್ ಬಲಿಪೆ, ತೀವರ್ಲೆಸ್ ಬಲಿಪೆ, ಭರತ್ ಕುಕ್ಕಿಲ, ದೀಪಕ್ ಕೀಲಾರ್ ಹಾಗೂ ಇನ್ನಿತರ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.















Post Comment