ಬೆಳ್ತಂಗಡಿ ಪ್ರವಾಸಿ ಮಂದಿರ ರಸ್ತೆಯಲ್ಲೊಂದು ಅಪಾಯಕಾರಿ ಬಿರುಕು!

ಬೆಳ್ತಂಗಡಿ : ಜನಪ್ರತಿನಿಧಿಗಳ ಅಧಿಕಾರವಧಿ ಮುಗಿದ ಬೆನ್ನಲ್ಲೇ ಆಡಳಿತಾಧಿಕಾರಿ ಮತ್ತು ಮುಖ್ಯಾಧಿಕಾರಿಯ ನಿಯಂತ್ರಣದಲ್ಲಿರುವ ಪಟ್ಟಣಪಂಚಾಯತ್ ಆಡಳಿತವು ಮೂಗುದಾರವೇ ಇಲ್ಲದ ಎತ್ತುಗಳಂತಾಗಿದೆ ; ಎಂಬುದಕ್ಕೆ ಬೆಳ್ತಂಗಡಿ ಪ್ರವಾಸಿ ಮಂದಿರ ರಸ್ತೆಯ ಮಧ್ಯದಲ್ಲೊಂದು ಅಪಾಯಕಾರಿ ಗುಂಡಿಯೇ ಸಾಕ್ಷಿಯಾಗಿದೆ, ದುನನಿತ್ಯ ಆಡಳಿತಾಧಿಕಾರಿ, ಮುಖ್ಯಾಧಿಕಾರಿ ಇದೇ ಅಪಾಯಕಾರಿ ಗುಂಡಿಯನ್ನು ದಾಟಿಕೊಂಡು ಹೋಗುತ್ತಿದ್ದರೂ ಎಷ್ಟು ಗುಂಡಿಗಳು ಬಿದ್ದರೂ ತಮಗೆ ಸಂಬಂಧವೇ ಇಲ್ಲವೆಂಬಂತೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ನಾಗರಿಕರ ಆರೋಪಗಳಿಗೆ ಅರ್ಹರಾಗಿದ್ದಾರೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧಿಕಾರಿಗಳು ವ್ಯಾಪ್ತಿಯ ನಗರದ ಮೂರು ಮಾರ್ಗದಿಂದ
ಪ್ರವಾಸಿಮಂದಿರ, ಪಟ್ಟಣಪಂಚಾಯತ್ ಕಾರ್ಯಾಲಯ, ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆಗೆ ಹೋಗುವ ಪ್ರಮುಖ ರಸ್ತೆಯಲ್ಲಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಎದುರು ಚರಂಡಿಯ ಮೇಲ್ಭಾಗ ಮುರಿದು ಬಿದ್ದು ದೊಡ್ಡದಾದ ಅಪಾಯಕಾರಿ ಗುಂಡಿಯೊಂದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಅಪಘಾತಕ್ಕೆ ಆಹ್ವಾನಿಸುವಂತಿದೆ!
ಪ್ರತಿ ದಿನ ಹತ್ತಾರು ಭಾರಿ ಇದೇ ರಸ್ತೆಯಲ್ಲಿ ಅದೇ ಗುಂಡಿಯನ್ನು ದಾಟಿಕೊಂಡು ತಮ್ಮ ಸರಕಾರಿ ವಾಹನಗಳಲ್ಲಿ ಹೋಗುತ್ತಿರುವ ಪಟ್ಟಣಪಂಚಾಯತ್ ಆಡಳಿತಾಧಿಕಾರಿಗಾಗಲಿ , ಮುಖ್ಯಾಧಿಕಾರಿಗಳಿಗಾಗಲಿ , ಇಂಜಿನಿಯರ್ ಗಾಗಲಿ ಇದರ ಗೊಡವೆಯೇ ಇಲ್ಲವೇ ?
ಅಥವಾ ಏನಾದರೂ ಅನಾಹುತಗಳು ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳಬಹುದೆಂದು ಕಾದು ಕುಳಿತಿದ್ದಾರೆಯೇ?
ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.

ಎರಡು ವರ್ಷಗಳ ಹಿಂದೆ ನಾಗರಿಕರ ಕಾಳಜಿಗಿಂತ ಹೆಚ್ಚಾಗಿ
ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಮಾಲಕರ ಮೇಲೆ ಗುರಿಯಾಗಿಸಿ
ಆ ಕಟ್ಟಡದ ಎದುರಿನ ಮುಚ್ಚಿದ ಚರಂಡಿಯನ್ನು ಅವೈಜ್ಞಾನಿಕವಾಗಿ ಅಗೆದು ಹಾಕಿ ನಾಗರಿಕರಿಗೆ ತೊಂದರೆಪಡುವಂತೆ ತೆರೆದಿಟ್ಟು ಮಹಿಳೆಯೊಬ್ಬರು
ಚರಂಡಿ ದಾಟುವ ವೇಳೆ ಕಾಲ್ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಲು ಕಾರಣವಾಗಿದ್ದ ಪಟ್ಟಣ ಪಂಚಾಯತ್ ಇದೀಗ ಮತ್ತೆ ಅದೇ ಚರಂಡಿಯನ್ನು ಇತ್ತೀಚೆಗೆ ಮುಚ್ಚಿಸಿದೆ! ಅಂದು ಮುಚ್ವಿದ ಚರಂಡಿಯನ್ನು ಅಗೆದಿದ್ದು ಯಾರ ಮೇಲಿನ ದ್ವೇಷಕ್ಕಾಗಿ ಇದೇ ಚರಂಡಿಯನ್ನು ಇದೀಗ ಮುಚ್ಚಿದ್ದು ಯಾರ ಲಾಭಕ್ಕಾಗಿ?
ಅಥವಾ ಅಭಿವೃದ್ಧಿ ಕಾಳಜಿಗಿಂತ ಹೆಚ್ಚಾಗಿ ಕೇವಲ ಕಾಮಗಾರಿ ಸೃಷ್ಟಿಸುವ ಉದ್ದೇಶಕ್ಕಾಗಿ ಮಾತ್ರವೇ?
ಅದೇ ಚರಂಡಿಯನ್ನು ಇದೀಗ ಮುಚ್ಚುವುದಾದರೆ ಮುಚ್ಚಿದ್ದ ಚರಂಡಿಯನ್ನು ಅಂದು ಅಗೆದು ತೆರೆದಿಟ್ಟಿದ್ದಾದರೂ ಯಾಕೆ? ಪಟ್ಟಣ ಪಂಚಾಯತ್ ಹಣವನ್ನು ಪೋಲು ಮಾಡುವುದಕ್ಕಾಗಿಯೇ? ಗುತ್ತಿಗೆದಾರರ ಮೇಲಿನ ವಿಶೇಷ ಕಾಳಜಿಗಾಗಿಯೇ?
ಎಂಬಿತ್ಯಾದಿ ಪ್ರಶ್ನೆಗಳು ನಾಗರಿಕರಿಂದ ಕೇಳಿ ಬರುತ್ತಿದೆ.!

ದೀಪಾವಳಿ ಹಬ್ಬದ ಹೆಸರಿನಲ್ಲಿ ಬಡವರಿಗೆ ಉಡುಗೋರೆಯಾಗಿ ಅಭಿವೃದ್ಧಿ ಯೋಜನೆಗಳನ್ನೋ..
ಸೌಲಭ್ಯಗಳನ್ನೋ.. ಒದಗಿಸಬೇಕಾದ ಬೆಳ್ತಂಗಡಿ
ಪಟ್ಟಣಪಂಚಾಯತ್ ಆಡಳಿತವು ಪ್ರವಾಸಿ ಮಂದಿರದ ಹದಗೆಟ್ಟ ರಸ್ತೆ ಮಧ್ಯದಲ್ಲೇ ಅನಾಹುತಕಾರಿ ಗುಂಡಿಯನ್ನೇ
ದೀಪಾವಳಿ ಉಡುಗೋರೆಯಾಗಿ ನೀಡುತ್ತಿದೆಯೇ…?
ಇಂಥ ಪ್ರಮುಖ ರಸ್ತೆಯ ಅಪಾಯಕಾರಿ ಗುಂಡಿಯನ್ನೇ ದುರಸ್ತಿ ಮಾಡದೆ ನಿರ್ಲಕ್ಷಿಸುತ್ತಿರುವ
ಪಟ್ಟಣಪಂಚಾಯತ್ ನಗರದ ಇತರ ಮೂಲಭೂತ ಸೌಲಭ್ಯಗಳನ್ನು ಹೇಗೆ ನಿಭಾಯಿಸಬಹುದು ಎಂಬ ಪ್ರಶ್ನೆಗಳು ನೊಂದ ನಾಗರಿಕರಿಂದ ವಾಹನ ಸವಾರರಿಂದ ಕೇಳಿ ಬರುತ್ತಿದೆ.



ಪಟ್ಟಣಪಂಚಾಯತ್ ಆಡಳಿತವು ದೀಪಾವಳಿಯ ಪಟಾಕಿ ಸದ್ದಿಗಾದರೂ ಎಚ್ಚೆತ್ತಕೊಂಡು ಐಬಿ ರಸ್ತೆಯ ಇದೇ ಅಪಾಯಕಾರಿ ಗುಂಡಿಯನ್ನೊಮ್ಮೆ ಇಣುಕಿ ನೋಡಲಿ ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.















Post Comment