ಧರ್ಮಸ್ಥಳ;ಕೆ.ಎಸ್ಆ.ರ್.ಟಿ.ಸಿ ಮಹಿ ಸ್ವಚ್ಛತಾ ಸಿಬ್ಬಂದಿಗೆ ವಿದ್ಯುತ್ ಆಘಾತ: ಆಸ್ಪತ್ರೆಗೆ ದಾಖಲಿಸದೆ ಅಮಾನವೀಯತೆ ಮೆರೆದ ಅಧಿಕಾರಿಗಳು

ಧರ್ಮಸ್ಥಳ;ಕೆ.ಎಸ್ಆ.ರ್.ಟಿ.ಸಿ ಮಹಿ ಸ್ವಚ್ಛತಾ ಸಿಬ್ಬಂದಿಗೆ ವಿದ್ಯುತ್ ಆಘಾತ: ಆಸ್ಪತ್ರೆಗೆ ದಾಖಲಿಸದೆ ಅಮಾನವೀಯತೆ ಮೆರೆದ ಅಧಿಕಾರಿಗಳು

Share

IMG_20260425_094249 ಧರ್ಮಸ್ಥಳ;ಕೆ.ಎಸ್ಆ.ರ್.ಟಿ.ಸಿ ಮಹಿ ಸ್ವಚ್ಛತಾ ಸಿಬ್ಬಂದಿಗೆ ವಿದ್ಯುತ್ ಆಘಾತ: ಆಸ್ಪತ್ರೆಗೆ ದಾಖಲಿಸದೆ  ಅಮಾನವೀಯತೆ ಮೆರೆದ  ಅಧಿಕಾರಿಗಳು

ಕೊರಗ ಸಮುದಾಯದ ಮಹಿಳೆ ಜೀವದ ಜೊತೆ ಚೆಲ್ಲಾಟ

“ಅಣ್ಣಪ್ಪನ ಜಾಗದಲ್ಲಿ ನಿನ್ನನ್ನು ಕೂರಿಸಬೇಕು ಎಂದು ಮಹಿಳೆಗೆ ವ್ಯಂಗ್ಯವಾಡಿದ ಕೆ.ಎಸ್. ಆರ್. ಟಿ.ಸಿ. ಅಧಿಕಾರಿ!

ಬೆಳ್ತಂಗಡಿ : ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದು
ಹಾಸನ ಮೂಲದ ಗಣೇಶ್ ಎಂಬ ಹೋಟೆಲ್ ಕಾರ್ಮಿಕ ಮೃತಪಟ್ಟ ವ್ಯಕ್ತಿಯನ್ನು ಅಂಗಡಿಯೊಂದರ ಪಕ್ಕ ನಿಂತು ನೋಡುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಸ್ವಚ್ಛತಾ ಮಹಿಳಾ ಸಿಬ್ಬಂದಿಗೆ ವಿದ್ಯುತ್ ಆಘಾತಕ್ಕೊಳಗಾಗಿ ಕೈಕಾಲು ಮರಗಟ್ಟಿದಂತಾದ ಘಟನೆ
ಧರ್ಮಸ್ಥಳ ಕೆಎಸ್ ಆರ್ ಟಿ ಸಿ ಡಿಪೋದಲ್ಲಿ ಗುರುವಾರ ನಡೆದಿದೆ.
ಬೆಳ್ತಂಗಡಿ ತಾಲೂಕು
ಉಜಿರೆ ಗ್ರಾಮದ ಕೊರಗರ ಕಾಲೋನಿಯ ನಿವಾಸಿ , ಧರ್ಮಸ್ಥಳ ಕೆಎಸ್ಆರ್ ಟಿ ಸಿ ಡಿಪೋದ ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಎಂಬವರು ವಿದ್ಯುತ್
ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧರ್ಮಸ್ಥಳದಲ್ಲಿ ಹೋಟೆಲ್ ಕಾರ್ಮಿಕನಾಗಿದ್ದ
ಹಾಸನ ಮೂಲದ ಗಣೇಶ್ ಎಂಬವರು ವಿದ್ಯುತ್ ಆಘಾತದಿಂದ ಬಿದ್ದು ಮೃತಪಟ್ಟಿದ್ದು ಇದನ್ನು ನೋಡಲು ಹೋಗುತ್ತಿದ್ದಾಗ ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಎಂಬವರು
ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಕರ್ತವ್ಯದ ವೇಳೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ
ಕೈ, ಕಾಲುಗಳು ಮರಗಟ್ಟಿದಂತಾಗಿ ಕೆಲಸ ಮಾಡಲು ಆಗದಿದ್ದಾಗ ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ
ಕೆ.ಎಸ್ .ಆರ್.ಟಿ.ಸಿ ಟಿಸಿಗಳಲ್ಲಿ “ನನಗೆ ಕೈಕಾಲು ಮರಗಟ್ಟಿದಂತಾಗುತ್ತದೆ, ನನಗೆ ಇನ್ನು ಕೆಲಸ ಮಾಡಲು ಆಗುತ್ತಿಲ್ಲ ನಾನು ಆಸ್ಪತ್ರೆಗೆ ಹೋಗುವುದಾಗಿ ಅನುಮತಿ ಕೇಳಿದಾಗ ಸಂಬಂಧಪಟ್ಟ ಧರ್ಮಸ್ಥಳ
ಟಿ ಸಿ ಮತ್ತಿತರ ಮೇಲಾಧಿಕಾರಿಗಳಾದ
ಗಣೇಶ ಭಟ್ ಮತ್ತು ಜೋಸೆಫ್ ಎಂಬವರು
ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಅವರಿಗೆ
ವಿದ್ಯುತ್ ಆಘಾತಕ್ಕೊಳಗಾಗಿ ಮರಗಟ್ಟಿದ ಕೈಕಾಲುಗಳಿಗೆ
ಯಾವುದೇ ಚಿಕಿತ್ಸೆ ಕೊಡಿಸದೆ ಸ್ವಚ್ಛತಾ ತಾವಾಗಿ ಆಸ್ಪತ್ರೆಗೆ ದಾಖಲಿಸದೆ ಇಬ್ಬರು ಅಧಿಕಾರಿಗಳು ಸೇರಿ ಬಾಯಿಗೆ ಬಂದಂತೆ
ಹಿಯಾಳಿಸಿ ಬೈಯ್ದಿದ್ದಾರೆ.
ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಟಿಸಿ ಕಚೇರಿಗೆ ಹೋಗಿ ತನಗಾದ ವಿದ್ಯುತ್ ಆಘಾತದ ಬಗ್ಗೆ ಹೇಳಿ
ಆ ಕಡೆ ಯಾರೂ ಹೋಗದಂತೆ ತಿಳಿಸಿದಾಗ
ಮೇಲಾಧಿಕಾರಿ ಜೊಸೆಫ್ ಎಂಬವರು ಇನ್ನು ಮುಂದೆ “ಅಣ್ಣಪ್ಪನನ್ನು ಇಳಿಸಿ
ಆ ಜಾಗದಲ್ಲಿ ನಿನ್ನನ್ನು‌ ಕೂರಿಸುತ್ತೇವೆ..” ಎಂದು ವ್ಯಂಗ್ಯವಾಗಿ ಮಾತನಾಡಿ ಕೊರಗ ಸಮುದಾಯದ ಅಮಾಯಕ ಮಹಿಳೆಯನ್ನು ಅವಮಾನಿಸಿದ್ದಾರೆ.
ಕೈ, ಕಾಲು ನೋವಿದ್ದರೂ ಕೆಲಸಕ್ಕೆ ಬರಲೇಬೇಕೆಂದು ಮತ್ತು ರಜೆ ಮಾಡಲೇ ಬಾರದೆಂದು ಒತ್ತಾಯಿಸಿ ಪೀಡಿಸಿ ಬಡ ಮಹಿಳೆಯ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ.
ಆಘಾತದ ಪರಿಣಾಮ
ಕೈಕಾಲು ಮರಗಟ್ಟಿ ನೋವು ಸಹಿಸಲಾಗದೆ ಚಂದ್ರಾವತಿ ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ
“ನಾನು ಶುಕ್ರವಾರ ಸಂಜೆ ಬೆಳ್ತಂಗಡಿ ಸಾರ್ವಜನಿಕ
ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು,
” ನೀನು ಯಾಕೆ ಆಸ್ಪತ್ರೆಗೆ ದಾಖಲಾಗಿದ್ದಿಯಾ, ಇನ್ನು ನೀನು ಕೆಲಸಕ್ಕೆ ಬರುವುದು ಬೇಡ, ನಿನ್ನನ್ನು ಕೆಲಸದಿಂದ ತೆಗೆಯುತ್ತೇವೆ… ” ಎಂದು ಬೆದರಿಸಿದ್ದಾರೆ ಎಂದು ನೊಂದ ಸ್ವಚ್ಛತಾ ಸಿಬ್ಬಂದಿ ಚಂದ್ರಾವತಿ ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕಾಂಗ್ರೆಸ್ ಮುಖಂಡ ಉಜಿರೆಯ ಪ್ರವೀಣ್ ಹಳ್ಳಿಮನೆ ಅವರು ಸಂಬಂಧಪಟ್ಟ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ಕೊರಗ ಸಮುದಾಯದ ಬಡ ಸ್ವಚ್ಚತಾ ಸಿಬ್ಬಂದಿಗೆ ಯಾಕೆ ಕಿರುಕುಳ ಕೊಡುತ್ತಿರಿ, ವಿದ್ಯುತ್ ಆಘಾತಕ್ಕೊಳಗಾಗಿದ್ದರೂ ನೀವೇ ಯಾಕೆ ಚಿಕಿತ್ಸೆ ಕೊಡಿಸಿಲ್ಲ ಆಸ್ಪತ್ರೆಗೆ ದಾಖಲಿಸಿಲ್ಲ? ಬಡವರ ಜೀವ ಅಂದ್ರೆ ಯಾಕೆ ಇಷ್ಟೊಂದು ನಿರ್ಲಕ್ಷ್ಯ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕೃಷ್ಣ
ಬಡೆಗೊಟ್ಟು ಅವರು ಚಂದ್ರಾವತಿ ಅವರನ್ನು
ಆಸ್ಪತ್ರೆಗೆ ದಾಖಲಿಸುವಲ್ಲಿ
ಸಹಕರಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!