ಇಂದು ಬೆಳ್ತಂಗಡಿಯಲ್ಲಿ ಪಣಕಜೆ ಟೋಲ್ ಗೇಟ್ ವಿರೋಧಿ ಹೋರಾಟದ ಬಗ್ಗೆ ಮಹತ್ವದ ಸಭೆ

ಇಂದು ಬೆಳ್ತಂಗಡಿಯಲ್ಲಿ ಪಣಕಜೆ ಟೋಲ್ ಗೇಟ್ ವಿರೋಧಿ ಹೋರಾಟದ ಬಗ್ಗೆ ಮಹತ್ವದ ಸಭೆ

Share

ಮಾಜಿ ಸಚಿವ ಬಿ.ರಮಾನಾಥ ರೈ, ಸಿಪಿ(ಐ)ಎಂ ಮುಖಂಡ ಮುನೀರ್ ಕಾಟಿಪಳ್ಳ ಭಾಗಿ

ಬೆಳ್ತಂಗಡಿ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವಂತೆ ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ಅಂತರ ನಿಯಮ ಉಲ್ಲಂಘಿಸಿ
ನಿರ್ಮಿಸಲು ಉದ್ದೇಶಿಸಿರುವ ಹೊಸ ಟೋಲ್ ಗೇಟ್ ವಿರೋಧಿಸಿ ಹಾಗೂ ಕಾನೂನು ಬಾಹಿರ ಬ್ರಹ್ಮರಕೊಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಎಪ್ರಿಲ್ 28ರಂದು ಬಿ.ಸಿ. ರೋಡ್ ಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೊಟ್ಲು ಟೋಲ್ ಗೇಟ್ ತನಕ ನಡೆಯುವ ಬೃಹತ್ ಜನಾಂದೋಲನ ನಡಿಗೆಗೆ ಸಂಬಂಧಿಸಿದ ಸಭೆಯು ಏಪ್ರಿಲ್ 27-2026ನೇ ಇಂದು ಸೋಮವಾರ ಬೆಳಗ್ಗೆ 10 ಘಂಟೆಗೆ ಸರಿಯಾಗಿ ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ನಡೆಯಲಿದೆ.
ಈ ಮಹತ್ವದ ಸಭೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ,
ಹಿರಿಯ ಹೋರಾಟಗಾರ , ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸೇರಿದಂತೆ ಟೋಲ್ ಗೇಟ್ ವಿರೋಧಿ ಹೋರಾಟಗಾರರು ಭಾಗವಹಿಸಲಿದ್ದಾರೆ‌.
ಈ ಸಂದರ್ಭದಲ್ಲಿ ಟೋಲ್ ವಿರೋಧಿ ಹೋರಾಟಗಾರರು ಭಾಗಹಿಸುವಂತೆ ಸಾಮಾಜಿಕ ಹೋರಾಟಗಾರ ಶೇಖರ್ ಎಲ್ ಲಾಯಿಲ ತಿಳಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!