ಧರ್ಮಸ್ಥಳ- ಮಂಗಳೂರು ಕೆ.ಎಸ್‌.ಆರ್.ಟಿ‌.ಸಿ. ಬಸ್ಸಲ್ಲಿ ‘ಚಿಲ್ಲರೆ’ ಜಗಳ: ನೈಂಟಿ ನೆತ್ತಿಗೇರಿದ ಪ್ರಯಾಣಿಕನಿಂದ ಕಂಡಕ್ಟರ್ ಗೆ ಹಲ್ಲೆ !

ಧರ್ಮಸ್ಥಳ- ಮಂಗಳೂರು ಕೆ.ಎಸ್‌.ಆರ್.ಟಿ‌.ಸಿ. ಬಸ್ಸಲ್ಲಿ ‘ಚಿಲ್ಲರೆ’ ಜಗಳ: ನೈಂಟಿ ನೆತ್ತಿಗೇರಿದ ಪ್ರಯಾಣಿಕನಿಂದ ಕಂಡಕ್ಟರ್ ಗೆ ಹಲ್ಲೆ !

Share

ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದ ಡ್ರೈವರ್..!!

ಬೆಳ್ತಂಗಡಿ : ಪಾನಮತ್ತ ಪ್ರಯಾಣಿಕರಿಬ್ಬರು 10 ರೂಪಾಯಿ ವಿಚಾರದಲ್ಲಿ ಜಗಳಕ್ಕಿಳಿದು ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್
ಹಲ್ಲೆಗೈದ ಘಟನೆ ಧರ್ಮಸ್ಥಳ- ಮಂಗಳೂರು ಬಸ್ಸಿನಲ್ಲಿ ನಡೆದಿದ್ದು ಮದ್ಯ ವ್ಯಸನಿಗೆ ಖಾಕಿ ರುಚಿ ತೋರಿಸಲು ಕಂಡಕ್ಟರ್ ಸೂಚನೆಯಂತೆ ಚಾಲಕ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆ ಬಳಿ ಚಲಾಯಿಸಿಕೊಂಡು ಬಂದ ಘಟನೆ ಶನಿವಾರ ಮಧ್ಯಾಹ್ನ‌ ನಡೆದಿದೆ.
ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುವ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರು ಪಾನಮತ್ತರಾಗಿ ಪ್ರಯಾಣಿಸುತ್ತಿದ್ದು ಈ ಪೈಕಿ ಒಬ್ಬ ಪಾನಮತ್ತ ಪ್ರಯಾಣಿಕ ಟಿಕೆಟ್ ಪಡೆದುಕೊಳ್ಳುವ ಸಂದರ್ಭ 10 ರೂಪಾಯಿ ವಿಚಾರದಲ್ಲಿ ಕಂಡಕ್ಟರ್ ಜೊತೆ ಜಗಳಕ್ಕಿಳಿದಿದ್ದು ಈ ಸಂದರ್ಭ ಇನ್ನೋರ್ವ ಪ್ರಯಾಣಿಕ ಪಾನಮತ್ತ ವ್ಯಕ್ತಿಯನ್ನು ಬೆಂಬಲಿಸಿ ಜಗಳಕ್ಕಿಳಿದು ಬಸ್ ಚಲಿಸುತ್ತಿರುವಾಗಲೇ ಕರ್ತವ್ಯ ನಿರತ ಕಂಡಕ್ಟರ್ ಮೇಲೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಇದೇ ಸಂದರ್ಭ ಎಚ್ಚೆತ್ತ ಕಂಡಕ್ಟರ್ ಪಾನಮತ್ತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಬೆಳ್ತಂಗಡಿ ತಲುಪಿದಾಗ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಯತ್ತ ತಿರುಗಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ಚಾಲಕ ನೇರವಾಗಿ ಬಸ್ಸನ್ನು‌ ಬೆಳ್ತಂಗಡಿ ಪೊಲೀಸ್ ಠಾಣೆಯ ಗೇಟ್ ಬಳಿ ಕೊಂಡೊಯ್ದು ಮಿನಿ ವಿಧಾನ ಸೌಧದ ಎದುರು ನಿಲ್ಲಿಸಿದ್ದು ಈ ಸಂದರ್ಭ ಕಂಡಕ್ಟರ್ ಬಸ್ಸಿನಿಂದ ಇಳಿದು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು‌ ಕರೆ ತಂದಿದ್ದಾರೆ.

IMG_20260521_012305 ಧರ್ಮಸ್ಥಳ- ಮಂಗಳೂರು ಕೆ.ಎಸ್‌.ಆರ್.ಟಿ‌.ಸಿ. ಬಸ್ಸಲ್ಲಿ 'ಚಿಲ್ಲರೆ' ಜಗಳ:             ನೈಂಟಿ ನೆತ್ತಿಗೇರಿದ ಪ್ರಯಾಣಿಕನಿಂದ ಕಂಡಕ್ಟರ್ ಗೆ ಹಲ್ಲೆ !


ಈ ಮಧ್ಯೆ ಹಲ್ಲೆಗೈದ ಒಬ್ಬ ಪ್ರಯಾಣಿಕ ಎಲ್ಲೋ ಇಳಿದುಕೊಂಡು ತಪ್ಪಿಸಿಕೊಂಡಿದ್ದು ನೈಂಟಿ ನೆತ್ತಿಗೇರಿದ ಓರ್ವ ಬಸ್ಸಲ್ಲೇ ಕುಳಿತಿದ್ದು ಪೊಲೀಸರು ಬಸ್ ಹತ್ತುವವರೆಗೂ ವಿಷಯದ ಗಂಭೀರತೆ ಗೊತ್ತೆ ಆಗಲಿಲ್ಲ. ದೂರಿನ ಹಿನ್ನೆಲೆಯಲ್ಲಿ ಬಸ್ ಹತ್ತಿದ ಪೊಲೀಸರು ಪಾನಮತ್ತನಾಗಿ ಕಂಡಕ್ಟರ್ ಹಲ್ಲೆ ನಡೆಸಿ ಸಹ ಪ್ರಯಾಣಿಕರಿಗೆ ತೊಂದರೆ ಮಾಡಿದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಲೇರಿದಾಗ ಪಾನಮತ್ತ ವ್ಯಕ್ತಿಯ ನೆತ್ತಿಗೇರಿದ್ದ ನೈಂಟಿ, ತರ್ಟಿಗೆ ಇಳಿದಿರಬೇಕು…! ಠಾಣೆಯಲ್ಲಿ ಸುತ್ತಲೂ ಖಾಕಿ ನೋಡಿದ ಕುಡುಕನ ಮೈತುಂಬಾ ಅಮಲು ಇಳಿದು ಬೆವರು ಮಾತ್ರ ಉಳಿದಿತ್ತು.

Post Comment

ಟ್ರೆಂಡಿಂಗ್‌

error: Content is protected !!