ಚಿರತೆ ದಾಳಿಯಿಂದ ವ್ಯಕ್ತಿ ಗಾಯಗೊಂಡಿದ್ದ ಮನೆಯಲ್ಲಿ ಬೆಂಕಿ ಅವಘಡ : ಮಹಿಳೆ ಮೃತ್ಯು

ಚಿರತೆ ದಾಳಿಯಿಂದ ವ್ಯಕ್ತಿ ಗಾಯಗೊಂಡಿದ್ದ ಮನೆಯಲ್ಲಿ ಬೆಂಕಿ ಅವಘಡ : ಮಹಿಳೆ ಮೃತ್ಯು

Share

ಬೆಳ್ತಂಗಡಿ : ಬಚ್ಚಲು ಕೊಟ್ಟಿಗೆಯ ಒಲೆಗೆ ಬೆಂಕಿ ಹಚ್ಚುವ ವೇಳೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕು ನಡ ಗ್ರಾಮದ ಕನ್ಯಾಡಿ ನಿವಾಸಿ ಮಂಜಪ್ಪ ನಾಯ್ಕ ಎಂಬವರ ಪತ್ನಿ ಮೀನಾಕ್ಷಿ (63) ಎಂಬವರು ಬೆಂಕಿ ಅವಘಡದಲ್ಲಿ‌ ಗಂಭೀರ ಗಾಯಗೊಂಡು ಇದೀಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟ ಮಹಿಳೆ.
ಮೀನಾಕ್ಷಿ ಅವರು ಕಳೆದ ಶನಿವಾರ ಮನೆಯ ಬಚ್ಚಲು ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚುತ್ತಿದ್ದ ವೇಳೆ ಆಕಸ್ಮಿಕವಾಗಿ ಮೈಮೇಲಿನ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಬೆಂಕಿಯಿಂದ ಬೆಂದು ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ
ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದುನವರೆಗೂ ಚಿಕಿತ್ಸೆ ಪಡೆಯುತ್ತಿದ್ದ ಇವರು ಇದೀಗ ಮೃತಪಟ್ಟಿದ್ದಾರೆ.
ಇತ್ತೀಚೆಗಷ್ಟೆ ಚಿರತೆ ದಾಳಿಗೊಳಗಾಗಿ ಪವಾಡ ಸದೃಶ ಪಾರಾಗಿ ಜೀವ ಉಳಿಸಿಕೊಂಡು ಚೇತರಿಸಿಕೊಂಡ ಬೆನ್ನಲ್ಲೇ ಇದೇ ಮನೆಯಲ್ಲಿ ಇದೀಗ ಬೆಂಕಿ ಅವಘಡದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comment

ಟ್ರೆಂಡಿಂಗ್‌

error: Content is protected !!