ನಾಳೆ; 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ‌ ಬಂದಾರು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ

ನಾಳೆ; 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ‌ ಬಂದಾರು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ

Share
IMG-20260814-WA0002 ನಾಳೆ; 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ‌ ಬಂದಾರು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ

ಬೆಳ್ತಂಗಡಿ : “ಬದುಕು ಕಟ್ಟೋಣ ಬನ್ನಿ” ಸೇವಾ ಟ್ರಸ್ಟ್‌ (ರಿ.) ಉಜಿರೆ,ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟು, ರೋಟರಿ ಕ್ಲಬ್‌ ಬೆಳ್ತಂಗಡಿ , ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ “ವ್ಯಸನಮುಕ್ತ ಸಮಾಜದ ಸಂಕಲ್ಪ” ಧ್ಯೇಯದೊಂದಿಗೆ 80ನೇ ಸ್ವಾಂತ್ರೋತ್ಸವ ಸಂಭ್ರಮದ ಸಾಕ್ಷಿಯಾಗಿ ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರ ಕಾರ್ಯಕ್ರಮವು ನೆರವೇರಲಿದೆ.

IMG-20260804-WA0025-14-683x1024 ನಾಳೆ; 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ‌ ಬಂದಾರು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ


ಬಂದಾರು ಶಾಲಾ ಮಕ್ಕಳಿಗೆ ಕೇವಲ ಶಿಕ್ಷಣವಲ್ಲ, ಅವರ ಉಜ್ವಲ ಭವಿಷ್ಯಕ್ಕಾಗಿ ಪೂರ್ಣ ಒಂದು ವರ್ಷ ಬೇಕಾಗುವ ಎಲ್ಲಾ ತರಬೇತಿ ಮತ್ತು ವಿಶೇಷ ಶೈಕ್ಷಣಿಕ ಕಾರ್ಯಕ್ರಮದ ಬೃಹತ್ ಯೋಜನೆಗೆ “ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕ ಮೋಹನ್ ‌ ಕುಮಾರ್ ಅವರು ಚಾಲನೆ ನೀಡಿ ಶುಭ ಹಾರೈಸಲಿದ್ದಾರೆ.

ಈ ಚಾರಿತ್ರಿಕ ಶೈಕ್ಷಣಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು, ವಿದ್ಯಾಭಿಮಾನಿಗಳು, ಊರವರು , ಶಾಲಾಹಿತಚಿಂತಕರು ಭಾಗವಹಿಸುವಂತೆ ಆಯೋಜಕರು ವಿನಂತಿಸಿಕೊಂಡಿದ್ದಾರೆ.

IMG-20260615-WA0021-19 ನಾಳೆ; 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ‌ ಬಂದಾರು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ

Post Comment

ಟ್ರೆಂಡಿಂಗ್‌

error: Content is protected !!