ಅಪರಾಧ
ಕರಾವಳಿ
ಕರ್ನಾಟಕ
ದೇಶ / ವಿದೇಶ
ಪತ್ರಿಕಾ ಪ್ರಕಟಣೆ
ಪ್ರಮುಖ ಸುದ್ದಿ
ಸ್ಥಳೀಯ
ನ್ಯೂಸ್ ಕೌಂಟರ್
7 minutes ago
0 Comments
ಸೌಜನ್ಯ ಪ್ರಕರಣದ ನಿರ್ದೋಷಿ ಸಂತೋಷ್ ರಾವ್ ವಿರುದ್ಧಸುಳ್ಳು ಸುದ್ದಿ, ಅಪಪ್ರಚಾರ ಮಾಡದಂತೆ ಕಾನೂನು ಎಚ್ಚರಿಕೆ

ಬೆಳ್ತಂಗಡಿ : ಮಾನ್ಯ ಸುಪ್ರೀಂ ಕೋರ್ಟ್ Spl.leave petition (Criminal) No. 5763 ಮತ್ತು Judgement Spl.CC.No. 203/2016, ದಿನಾಂಕ :- 16.06.2023 ಮತ್ತು 2026ರ ಆದೇಶದಂತೆ ಸಂತೋಷ್ ರಾವ್ ಅವರಿಗೆ ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಸಂಪೂರ್ಣ ಕಾನೂನಾತ್ಮಕ ರಕ್ಷಣೆ ನೀಡಿದೆ.
ಸಂತೋಷ್ ರಾವ್ ವಿರುದ್ಧ ಯಾವುದೇ ರೀತಿಯ ಆಧಾರ ರಹಿತ ಆರೋಪಗಳು, ನಿಂದನೆಗಳು, ಮಾನಹಾನಿಕರ ಹೇಳಿಕೆಗಳು ಅಥವಾ ಸುಳ್ಳು ಸುದ್ದಿಗಳನ್ನು ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ, ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕವಾಗಿ ಹರಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇದನ್ನು ಮೀರಿ ಯಾರಾದರೂ ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಅಪಪ್ರಚಾರ ಮಾಡಿದರೆ, ಅವರ ವಿರುದ್ಧ ಯಾವುದೇ ಮುನ್ಸೂಚನೆ ನೀಡದೆ ತಕ್ಷಣವೇ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ಸೇರಿದಂತೆ ಕಠಿಣ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂತೋಷ್ ರಾವ್ ಪರ ವಕೀಲರಾದ ಮೋಹಿತ್ ಕುಮಾರ್ ಕೆ ಅವರು ಬಿಡುಗಡೆಗೊಳಿಸಿದ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ತಕ್ಷಣವೇ ಇಂತಹ ಕೃತ್ಯಗಳಿಂದ ದೂರವಿರಲು ವಿನಂತಿಸಲಾಗಿದೆ.

















Post Comment