ಪಡ್ನೂರು; ಮಹಿಳೆಯ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಹೋದ ‘ಹೊಯ್ಸಳ’ ಪೊಲೀಸರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ!

ಪುತ್ತೂರು : ಇಲ್ಲಿನ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಹೆಚ್ ಸಿ ಮಧು ಹಾಗೂ ಸಿಪಿಸಿ ಭೀಮನ ಗೌಡ ಎಮ್ ಬಿರಾದರ್ ಎಂಬವರುಗಳು ಸಪ್ಟೆಂಬರ್ 4-2026ನೇ ಶುಕ್ರವಾರದಂದು ರಾತ್ರಿ ವೇಳೆ ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದಾಗ ಬಂದ ದೂರನ್ನು ಸ್ವೀಕರಿಸಿಕೊಂಡು ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಮುಂಡಾಜೆ ಎಂಬಲ್ಲಿಗೆ ತೆರಳಿರುತ್ತಾರೆ.
ಬಂದ ತುರ್ತು ದೂರಿಗೆ ಸಂಬಂಧಿಸಿ ಸ್ಥಳಕ್ಕೆ ತೆರಳಿದಾಗ ಮಹಿಳೆಯೋರ್ವರು ತನ್ನ ಗಂಡ ತನಗೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದು ಈ ಬಗ್ಗೆ ನವೀನ್ ಎಂಬಾತನ ಬಳಿ ವಿಚಾರಿಸಿದಾಗ ಪೊಲೀಸರ ಮುಂದೆಯೇ ಕೋಪಗೊಂಡ ಆತ ತನ್ನ ಪತ್ನಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.

ಈ ಸಂದರ್ಭ ಘಟನಾ ಸ್ಥಳದಲ್ಲಿದ್ದು ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಗಳಿಗೆ ನವೀನ್, ಆತನ ತಾಯಿ ಮತ್ತು ಸಹೋದರ ಸೇರಿ ಅವ್ಯಾಚವಾಗಿ ಬೈಯ್ದು ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 107/2026, ಕಲಂ :352,132,121(1) ,ಜೊತೆಗೆ 3(5) ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಯುತ್ತಿದೆ.
ಪ್ರಕರಣದ ಆರೋಪಿತ ನವೀನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನು ಚಿಕಿತ್ಸೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.















Post Comment