ಕಲ್ಲೇರಿಯಲ್ಲಿ ಎಸ್ ಡಿ ಪಿ ಐ ರಸ್ತೆ ತಡೆ ಪ್ರತಿಭಟನೆ : ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ದುರಸ್ತಿಗೆ ಆಗ್ರಹ

ಕಲ್ಲೇರಿಯಲ್ಲಿ ಎಸ್ ಡಿ ಪಿ ಐ ರಸ್ತೆ ತಡೆ ಪ್ರತಿಭಟನೆ : ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ದುರಸ್ತಿಗೆ ಆಗ್ರಹ

Share
20241115_103316-1024x461 ಕಲ್ಲೇರಿಯಲ್ಲಿ  ಎಸ್ ಡಿ ಪಿ ಐ   ರಸ್ತೆ ತಡೆ ಪ್ರತಿಭಟನೆ :   ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ದುರಸ್ತಿಗೆ ಆಗ್ರಹ
20241115_105825-1024x461 ಕಲ್ಲೇರಿಯಲ್ಲಿ  ಎಸ್ ಡಿ ಪಿ ಐ   ರಸ್ತೆ ತಡೆ ಪ್ರತಿಭಟನೆ :   ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ದುರಸ್ತಿಗೆ ಆಗ್ರಹ

ಬೆಳ್ತಂಗಡಿ : ತೀವ್ರ ಹದಗೆಟ್ಪ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯ ದುರಸ್ತಿಗೆ ಆಗ್ರಹಿಸಿ ಎಸ್ ಡಿಪಿ ಐ ಕಣಿಯೂರು ಬ್ಲಾಕ್ ನೇತೃತ್ವದಲ್ಲಿ ಕಲ್ಲೇರಿಯಲ್ಲಿ ರಸ್ತೆ ತಡೆ ನಿರ್ಮಿಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಯಿತು.
ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ರಸ್ತೆ ತಡೆ ನಿರ್ಮಿಸಿ ಪ್ರತಿಭಟನೆ ನಡೆಸಿದ ಎಸ್ ಡಿ ಪಿ ಐ ಮುಖಂಡರು ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವನ್ನು ಖಂಡಿಸಿದರು. ಹೊಂಡ, ಗುಂಡಿಗಳಿಂದ ಪ್ರಯಾಣಿಕರ ಪಾಲಿಗೆ ನಿತ್ಯ ನರಕ ಯಾತನೆಗೆ ಕಾರಣವಾಗುತ್ತಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಕಲ್ಲೇರಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ,
ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಮುಖಂಡ ನವಾಜ್ ಕಟ್ಟೆ , ಕಣಿಯೂರು ಬ್ಲಾಕ್ ಅಧ್ಯಕ್ಷ ಮುಸ್ತಾಫ ಬಂಗೆರಕಟ್ಟೆ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಟೀಕಿಸಿದರು. ಪ್ರತಿಭಟನಾಕಾರರು ಗ್ರಾಮಪಂಚಾಯತ್ ಕಾರ್ಯದರ್ಶಿ ಮೂಲಕ ತಹಶೀಲ್ದಾರರಿಗೆ ಮನವಿ ನೀಡಿದರು. ಈ ಸಂದರ್ಭ ಪ್ರತಿಭಟನೆ ಗ್ರಾ.ಪಂ.ಸದಸ್ಯ ಅನೀಶ್ ಫೈಜಲ್ ಮೂರುಗೋಳಿ ಬಂಗೇರಕಟ್ಟೆ, ಅಸ್ಫಾಕ್ ಪುಂಜಾಲಕಟ್ಟೆ, ಹನೀಫ್ ಪುಂಜಾಲಕಟ್ಟೆ, ಹನೀಫ್ ಟಿ.ಎಸ್., ನಝೀರ್ ಬಾಜಾರ್, ಅನ್ವರ್ ತೆಕ್ಕಾರು , ಅಶ್ರಫ್ ಕಲ್ಲೇರಿ ಮತ್ತಿತರರು ಉಪಸ್ಥಿತರಿದ್ದರು.

20241115_110304-1024x461 ಕಲ್ಲೇರಿಯಲ್ಲಿ  ಎಸ್ ಡಿ ಪಿ ಐ   ರಸ್ತೆ ತಡೆ ಪ್ರತಿಭಟನೆ :   ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ ದುರಸ್ತಿಗೆ ಆಗ್ರಹ

Post Comment

ಟ್ರೆಂಡಿಂಗ್‌