‘ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ’- ಪ್ರಯುಕ್ತ ಬೆಳ್ತಂಗಡಿಯಲ್ಲಿ ‘ವಿಚಾರ ಸಂಕಿರಣ’ ನವೆಂಬರ್ 17ಕ್ಕೆ
◻️ News ಕೌಂಟರ್
ಬೆಳ್ತಂಗಡಿ : ಕರ್ನಾಟಕ ದಲಿತ ಚಳುವಳಿ- 50ರ ಸಂಭ್ರಮ-2024
ಇದರ ಪ್ರಯುಕ್ತ ಮೊದಲ ಹಂತದ ಕಾರ್ಯಕ್ರಮವಾಗಿ ನವೆಂಬರ್ 17ರಂದು ಮಹತ್ವದ ‘ವಿಚಾರ ಸಂಕಿರಣ’ವನ್ನು ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಚಳುವಳಿ- 50ರ ಸಂಭ್ರಮಾಚರಣಾ ಸಮಿತಿ -2024 ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ 17- 2024ನೇ ಆದಿತ್ಯವಾರ ಬೆಳ್ತಂಗಡಿ ಹೋಲಿ ರೆಡಿಮರ್ ಅಡಿಟೋರಿಯಂ ಚರ್ಚ್ ಹಾಲ್ ನಲ್ಲಿ ಪೂರ್ವಾಹ್ನ ಸಮಯ 10ಕ್ಕೆ ಸರಿಯಾಗಿ ವಿಚಾರ ಸಂಕಿರಣವು ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣಾ ಸಮಿತಿ ಅಧ್ಯಕ್ಷರಾದ ಬಿ.ಕೆ.ವಸಂತ್ ಬೆಳ್ತಂಗಡಿ ಅಧ್ಯಕ್ಷತೆವಹಿಸಲಿದ್ದಾರೆ.
ದಲಿತ ಚಳುವಳಿಯ ಸಾಂಸ್ಕೃತಿಕ ನಾಯಕರಾದ ಗ.ನ. ಅಶ್ವತ್ಥ್
ಚಿಕ್ಕಬಳ್ಳಾಪುರ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿದ್ದಾರೆ.
ದಲಿತ ಚಳುವಳಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸುವ ದೃಷ್ಠಿಯಲ್ಲಿ ವಿಶೇಷವಾಗಿ ಚಳುವಳಿಯನ್ನು ಪ್ರೀತಿಸುವ, ಅಭಿಮಾನಿಸುವ ವಿದ್ಯಾರ್ಥಿ ಸಮೂಹ ಮತ್ತು ವಿದ್ಯಾವಂತ ಯುವಜನತೆಗೂ ಚಳುವಳಿಯ ಇತಿಹಾಸದ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ವಿಚಾರ ಸಂಕಿರಣದಲ್ಲಿ ಚಳುವಳಿಯ ಪ್ರಬುದ್ಧ ಸಂಪನ್ಮೂಲ ವ್ಯಕ್ತಿಗಳಿಂದ 3 ಗೋಷ್ಠಿಗಳಲ್ಲಿ ವಿಚಾರ ಮಂಡನೆ ನಡೆಯಲಿದೆ. ಮಧ್ಯಾಹ್ನದ ಮೊದಲು 2 ಹಾಗೂ ಮಧ್ಯಾಹ್ನ ನಂತರ 1 ಗೋಷ್ಠಿ ಸೇರಿ 3 ಗೋಷ್ಠಿಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರು ಜಾಗೃತ ಕರ್ನಾಟಕ ಹಾಗೂ ಐಎಎಸ್ / ಕೆಎಎಸ್ ತರಬೇತಿದಾರ ಮೋಹನ್ ಕುಮಾರ್ ಮೈಸೂರು ಇವರಿಂದ
“ಪ್ರಾಚೀನ ಇತಿಹಾಸ ಮತ್ತು ಭಾರತದ ಸಮಾಜ ಸುಧಾರಕರು” ಎಂಬ ವಿಚಾರ ಮಂಡನೆ, ದ್ವಿತೀಯ ಗೋಷ್ಠಿಯಲ್ಲಿ ಬೆಂಗಳೂರಿನ
ಕ್ರಿಸ್ಟ್ ಕಾಲೇಜಿನ ಪ್ರಾಧ್ಯಾಪಕ , ಭಾರತೀಯ ಬೌದ್ಧ ಸಮಾಜ ರಾಜ್ಯಾಧ್ಯಕ್ಷ ಡಾ. ಹ.ರಾ. ಮಹೇಶ್ ಅವರಿಂದ “ಕರ್ನಾಟಕ ದಲಿತ ಚಳುವಳಿಯ ಇತಿಹಾಸ ಮತ್ತು ವರ್ತಮಾನದ ಸವಾಲುಗಳು ಎಂಬ ವಿಚಾರ ಮಂಡನೆ, ಮಧ್ಯಾಹ್ನ ಬಳಿಕದ ಮೂರನೇ ಗೋಷ್ಠಿಯಲ್ಲಿ ಹೈಕೋರ್ಟ್ ಹಿರಿಯ ವಕೀಲ, ಸಂವಿಧಾನ ತಜ್ಞ , ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅವರಿಂದ “ಭಾರತೀಯ ಸಂವಿಧಾನದ ಆಶಯ ಮತ್ತು ಒಳ ಮೀಸಲಾತಿ” ಎಂಬ ವಿಚಾರ ಮಂಡನೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೀಜವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿತ್ತಿದವರಲ್ಲಿ
ಮೂಲತ: ಹಾಸನ ಜಿಲ್ಲೆಯವರಾದ ಬಿಲ್ಲವ ಸಮುದಾಯದ ಸೋಮಶೇಖರರವರು ಮೊದಲಿಗರು ಎಂಬ ಇತಿಹಾಸವನ್ನು ಜಿಲ್ಲೆಯ ದಲಿತ ಚಳುವಳಿಗಾರರು ಮರೆಯುವಂತಿಲ್ಲ, ಕರ್ನಾಟಕ ದಲಿತ ಚಳುವಳಿ- 50ರ ಸಂಭ್ರಮ-2024 ಕಾರ್ಯಕ್ರಮದ ಯಶಸ್ವಿಯ ದೃಷ್ಠಿಯಿಂದ ಸಮುದಾಯ ಪಕ್ಷ, ಸಂಘಟನೆಗಳ ಬೇಧವಿವಲ್ಲದೆ ಹೋಬಳಿವಾರು, ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು ಮತ್ತು ಯುವ ಕಾರ್ಯಕರ್ತರನ್ನೊಳಗೊಂಡ
ಪ್ರಧಾನ ಸಮಿತಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಿಕೊಂಡು ತಾಲೂಕಿನಾದ್ಯಂತ ತಂಡೋಪತಂಡಗಳಾಗಿ ತಳಮಟ್ಟದಲ್ಲಿ ಮನೆ ಭೇಟಿ, ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮೊದಲ ಹಂತದಲ್ಲಿ ನವೆಂಬರ್ 17ಕ್ಕೆ ವಿಚಾರ ಸಂಕಿರಣ ನಡೆಯಲಿದೆ. ಎರಡನೇ ಹಂತದಲ್ಲಿ ದಲಿತ ಚಳುವಳಿಯ 50ರ ಸಂಭ್ರಮದ ಪ್ರತೀಕವಾಗಿ ಡಿಸೆಂಬರ್ ತಿಂಗಳಲ್ಲಿ ಬೃಹತ್ ಮೆರವಣಿಗೆ ಸೇರಿ ಐತಿಹಾಸಿಕ ಸಮಾವೇಶದ ಮೂಲಕ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಸಮಿತಿ ತಿಳಿಸಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪರವರ ತ್ಯಾಗ, ಹೋರಾಟಗಳಿಗೆ ಸಾಮೂಹಿಕ ಭೀಮ ನಮನವನ್ನು ಸಲ್ಲಿಸುವ ಮೂಲಕ ಅವರ ಋಣ ತೀರಿಸುವ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಇದೇ ಭಾನುವಾರ ವಿಚಾರ ಸಂಕಿರಣವು ನಡೆಯುತ್ತಿದ್ದು ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ದಲಿತ ಚಳುವಳಿ- 50ರ ಸಂಭ್ರಮಾಚರಣಾ ಸಮಿತಿ ಅಧ್ಯಕ್ಷ ಬಿ.ಕೆ.ವಸಂತ್, ಬೆಳ್ತಂಗಡಿ, ಗೌರವಾಧ್ಯಕ್ಷ ಚೆನ್ನಕೇಶವ,
ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು, ಕೋಶಾಧಿಕಾರಿ, ಶ್ರೀಧರ ಎಸ್ ಕಳೆಂಜ ಕಾರ್ಯಾಧ್ಯಕ್ಷರುಗಳಾದ ಅಣ್ಣು ಸಾಧನ, ಎಸ್. ಬೇಬಿ ಸುವರ್ಣ , ಕೆ.ನೇಮಿರಾಜ್ ಕಿಲ್ಲೂರು, ಶೇಖರ್ ಕುಕ್ಕೇಡಿ, ಸಂಜೀವ ಆರ್, ರಮೇಶ್ ಆರ್. ಜಂಟಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.
Post Comment