ಬಂದಾರು ಪೆರ್ಲಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನ‌ರ್ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ : ಸಮಾಲೋಚನಾ ಸಭೆ

ಬಂದಾರು ಪೆರ್ಲಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನ‌ರ್ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ : ಸಮಾಲೋಚನಾ ಸಭೆ

Share
20241119_115245-1024x461 ಬಂದಾರು ಪೆರ್ಲಬೈಪಾಡಿ       ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನ‌ರ್ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ :  ಸಮಾಲೋಚನಾ ಸಭೆ
20241119_122709-1024x492 ಬಂದಾರು ಪೆರ್ಲಬೈಪಾಡಿ       ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನ‌ರ್ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ :  ಸಮಾಲೋಚನಾ ಸಭೆ

ಬೆಳ್ತಂಗಡಿ : 2025ರ ಜ:7ರಿಂದ 12ರವರೆಗೆ ನಡೆಯಲಿರುವ ಬಂದಾರು ಗ್ರಾಮದ ಪೆರ್ಲಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನ‌ರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವತಯಾರಿ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ವಿವಿಧ ಉಪಸಮಿತಿಗಳ ಸಂಚಾಲಕರ, ಸಹಸಂಚಾಲಕರ ಮತ್ತು ಸದಸ್ಯರ ಸಮಾಲೋಚನಾ ಸಭೆಯು ಕೊಯ್ಯೂರು ದೇವಸ್ಥಾನದ ಪ್ರಧಾನ ಅರ್ಚಕ , ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಸದಸ್ಯ ಅಶೋಕ್ ಕುಮಾರ್ ಅಗ್ರಸಾಲೆ ಅವರ ಅಧ್ಯಕ್ಷತೆಯಲ್ಲಿ ನ:19ನೇ ಮಂಗಳವಾರ ನಡೆಯಿತು.
ಸಮಾಲೋಚನಾ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ
ಗೌರವಾಧ್ಯಕ್ಷ, ಶಾಸಕ ಹರೀಶ್ ಪೂಂಜ ಮಾತನಾಡುತ್ತಾ ಬ್ರಹ್ಮಕಲಶೋತ್ಸವದ ಖರ್ಚು ವೆಚ್ಚದ ಬಾಬ್ತು ಹಣ ಕ್ರೋಢೀಕರಣ, ಹೊರೆಕಾಣಿಕೆ ಇತ್ಯಾದಿಗಳ ಬಗ್ಗೆ ಉದಾಹರಣೆಗಳ ಸಹಿತ ಮಾರ್ಗದರ್ಶನ ನೀಡುತ್ತಾ ಶ್ರದ್ಧಾಭಕ್ತಿಯಿಂದ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸೋಣ ಎಂದರು.
ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ರೂ. 25 ಲಕ್ಷ ಅನುದಾನ ಒದಗಿಸಲಾಗಿದೆ, ಇನ್ನು ರೂ.10 ಲಕ್ಷ ಒಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಭಿವೃದ್ಧಿ ಕಾರ್ಯಗಳನ್ನು ನೆನಪಿಸುವುದಾದರೆ ಈ ಭಾಗದ ರಸ್ತೆಗಳ ಅಭಿವೃದ್ಧಿ ಜೊತೆಗೆ ಮೈಪಾಲ ಸೇತುವೆಯಿಂದ ಸೌತಡ್ಡ ದೇವಸ್ಥಾನ ಹತ್ತಿರವಾಗಲಿದೆ, ಪುತ್ತಿಲ, ಬಾರ್ಯ ಪ್ರದೇಶದ ಜನರಿಗೆ ಕೊಕ್ಕಡ ಪ್ರಯಾಣ ಸುಲಭವಾಗಲಿದೆ, ರೈತರ ಭೂಮಿಗೆ ಇನ್ನಷ್ಟು ಮೌಲ್ಯ ಹೆಚ್ಚಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಈ ಸ‌ಂದರ್ಭ ದೇವಸ್ಥಾನದ ಬಳಿ ಅಭಿವೃದ್ಧಿಯಾಗದೆ ಬಾಕಿ ಇರುವ ರಸ್ತೆಯ ಅಭಿವೃದ್ಧಿ ಕುರಿತ ‌ಊರವರ ಬೇಡಿಕೆ ಪ್ರತಿಕ್ರಿಯಿಸಿದ ಶಾಸಕ ಹರೀಶ್ ಪೂಂಜ ದುರಸ್ತಿ ಕಾರ್ಯಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಡಾ। ಪ್ರದೀಪ್ ಕುಮಾರ್ ನಾವೂರು ಮಾತನಾಡಿ ಬ್ರಹ್ಮಕಲಶೋತ್ಸವದ ಯಶಸ್ವಿಯಲ್ಲಿ ಗ್ರಾಮಸ್ಥರ ಪಾತ್ರ ಮತ್ತು ಪಾಲ್ಗೊಳ್ಳುವಿಕೆ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿ‌ಗಳಾಗಿ ಎಸ್.ಕೆ.ಡಿ.ಆರ್.ಡಿ.ಪಿ. ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಮಾತನಾಡಿ ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬೆಂಗಳೂರಿನ ಖ್ಯಾತ ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಮಾತನಾಡಿ ಬ್ರಹ್ಮಕಲಶೋತ್ಸವದಂಥ ಪವಿತ್ರ ಕಾರ್ಯಗಳ ಮೂಲಕ ಹಿಂದೂ ಧಾರ್ಮಿಕ ಸಂಸ್ಕೃತಿ ಜಾಗೃತಿಗೊಳ್ಳಬೇಕಾಗಿದೆ. ಧರ್ಮ ರಕ್ಷಣೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ದುಡಿಯಬೇಕು, ಆಗ ದೇವರು ನಮಗೆ ಪುಣ್ಯ ಕಾರ್ಯಗಳಲ್ಲಿ ತೊಡಗುವ ಭಾಗ್ಯ ಒದಗಿಸುತ್ತಾರೆ, ನಾವೆಲ್ಲರೂ ಒಂದಾಗಿ ಉತ್ಸಾಹದಿಂದ ಶ್ರಮಿಸಿದಾಗ ಶ್ರೀ ಸಿದ್ಧಿವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗ ಮುಖ್ಯಸ್ಥ , ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ಪೂಜಾರಿ ಪ್ರಸ್ತಾವನೆಗೈದು, ನಮ್ಮ ಊರಿನ ಹೆಮ್ಮೆಯ ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರು ಬ್ರಹ್ಮಕಲಶೋತ್ಸವಕ್ಕೆ ರೂ.5 ಲಕ್ಷ ದೇಣಿಗೆ ನೀಡುವ ವಾಗ್ದಾನ ನೀಡಿರುವುದಾಗಿ ಸಭೆಗೆ ಪ್ರಕಟಿಸಿ ಅಭಿನಂದನೆ ಸಲ್ಲಿಸಿದರು. ಹಿಂದಿನ ಬ್ರಹ್ಮಕಲಶೋತ್ಸವದಲ್ಲಿ 4,000 ಆಳುಗಳ ಶ್ರಮದಾನ ಆಗಿತ್ತು. ಈ ಸಲ 1,000 ಆಳುಗಳ ಶ್ರಮದಾನ ಸಾಕು, ಇನ್ನು 3,000 ಆಳುಗಳ ಶ್ರಮದಾನ ಧನ ಸಂಗ್ರಹಕ್ಕೆ ಬಳಕೆಯಾಗಲಿ, ಎಚ್ಚರಿಕೆವಹಿಸಬೇಕಾಗಿರುವುದು ಬ್ರಹ್ಮಕಲಶೋತ್ಸವದಲ್ಲಿ ನಷ್ಟವಾಗಬಾರದು , ಏಕೆಂದರೆ ನಷ್ಟವಾದರೆ ಕೈಯಿಂದ ಹಣ ಹಾಕುವ ಸಾಮರ್ಥ್ಯದವರು ಇಲ್ಲಿ ಯಾರೂ ಇಲ್ಲ ಎಂದು ಹೇಳಿದರು.
ಸುಮಾರು 100 ಸಭೆ ನಡೆಸಿದ್ದೇವೆ , ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು, ಕನ್ಯಾಡಿ ಶ್ರೀಗಳನ್ನು ಭೇಟಿ ಮಾಡಿದ್ದೇವೆ, ಸಂಸದ, ಶಾಸಕರೂ ಸೇರಿದಂತೆ ವಿವಿಧ ಜನಪ್ರತಿನಿಧಿಗಳನ್ನು ಭೇಟಿಯಾಗಿದ್ದೇವೆ ಸಮಿತಿಯವರು ಹಗುರವಾಗಿ ತೆಗೆದುಕೊಳ್ಳಬೇಡಿ ಬ್ರಹ್ಮಕಲಶೋತ್ಸವದ ಒಟ್ಟು ಖರ್ಚು 90 ಲಕ್ಷ. 60.ಲಕ್ಷ ಸಂಗ್ರಹ ಗುರಿ ಇದೆ, ಬ್ರಹ್ಮಕಲಶೋತ್ಸವದಲ್ಲಿ ಭಕ್ತರಿಗೆ , ಉತ್ತಮ ಗುಣಮಟ್ಟದ ಭೋಜನ ವ್ಯವಸ್ಥೆ ಬಗ್ಗೆ ಚಿಂತಿಸಿದ್ದೇವೆ, ಆಮಂತ್ರಣ ಬಂದ ತಕ್ಷಣದಿಂದ ಅವಿರತವಾಗಿ ಕೆಲಸ ಮಾಡಬೇಕಾಗಿದೆ, ಇನ್ನು ಕೇವಲ 49 ದಿನ ಇದೆ , ಎಲ್ಲರೂ ಒಗ್ಗಟ್ಟಾಗಿ ಜಾತಿ,ಬೇಧ, ರಾಜಕೀಯ ಹೊರಗಿಟ್ಟು ಬಂದು ದೇವಸ್ಥಾನದ
ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಬೇಕಾಗಿದೆ ಎಂದು ಸಮಿತಿ ಪದಾಧಿಕಾರಿಗಳಿಗೆ ಮತ್ತು ಗ್ರಾಮಸ್ಥರಿಗೆ ಕರೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಗೌಡ ಸ್ವಾಗತಿಸುತ್ತಾ ಮಾತನಾಡಿ ಬ್ರಹ್ಮ ಕಲಶೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆ, ಚಟುವಟಿಕೆ, ಸಮಾಲೋಚನೆ, ಚಿಂತನೆಗಳನ್ನು ಪ್ರಸ್ತಾಪಿಸಿದರು. ಹಾಗೂ ಮುಂದೆ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರ , ದಾನಿಗಳ ಧನ ಸಹಾಯ, ಸಹಕಾರಗಳನ್ನು ಯಾಚಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕುಕ್ಕಪ್ಪ ಗೌಡ, ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಮಹಿಳಾ ಸಮಿತಿ ಅಧ್ಯಕ್ಷೆ ಶ್ವೇತಾ ಹಾರ್ತ್ಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಕೆ.ಡಿ.ಆರ್.ಡಿ.ಪಿ. ವಲಯ ನಿರ್ದೇಶಕ ಸುರೇಂದ್ರ ಕುಮಾರ್, ಕೊಯ್ಯೂರು ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ, ಉಜಿರೆ ಎಸ್.ಡಿ.ಎಂ. ಕಾಲೇಜು ಉಪನ್ಯಾಸ ಡಾ.ದಿವಾ ಕೊಕ್ಕಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ, ಕಾರ್ಯದರ್ಶಿ ಸಂಪತ್ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಗೌಡ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿ , ಸಮಿತಿ ಕಾರ್ಯದರ್ಶಿ ಉಮೇಶ್ ಅಂಗಡಿ ಮಜಲು ವಾದಿಸಿದರು.

ಙ‍

Post Comment

ಟ್ರೆಂಡಿಂಗ್‌