ನಕ್ಸಲ್ ನಾಯಕ ವಿಕ್ರಮ ಗೌಡ ಸಂಶಯಾಸ್ಪದ ಎನ್ ಕೌಂಟರ್ ನ್ಯಾಯಾಂಗ ತನಿಖೆ ನಡೆಯಲಿ : ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಒತ್ತಾಯ

ನಕ್ಸಲ್ ನಾಯಕ ವಿಕ್ರಮ ಗೌಡ ಸಂಶಯಾಸ್ಪದ ಎನ್ ಕೌಂಟರ್ ನ್ಯಾಯಾಂಗ ತನಿಖೆ ನಡೆಯಲಿ : ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಒತ್ತಾಯ

Share
IMG-20241121-WA0001 ನಕ್ಸಲ್ ನಾಯಕ ವಿಕ್ರಮ ಗೌಡ ಸಂಶಯಾಸ್ಪದ ಎನ್ ಕೌಂಟರ್ ನ್ಯಾಯಾಂಗ ತನಿಖೆ ನಡೆಯಲಿ : ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಒತ್ತಾಯ
IMG-20241121-WA0000 ನಕ್ಸಲ್ ನಾಯಕ ವಿಕ್ರಮ ಗೌಡ ಸಂಶಯಾಸ್ಪದ ಎನ್ ಕೌಂಟರ್ ನ್ಯಾಯಾಂಗ ತನಿಖೆ ನಡೆಯಲಿ : ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಒತ್ತಾಯ

ಬೆಳ್ತಂಗಡಿ : ನಕ್ಸಲ್ ನಾಯಕ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಘಟನೆ ಸಂಶಯವನ್ನು ಹುಟ್ಟುಹಾಕಿದೆ. ರಾಜ್ಯ ಸರ್ಕಾರ ತಕ್ಷಣ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬೆಳ್ತಂಗಡಿಯ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 21 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಈದುವಿನಲ್ಲಿ ನಡೆದ ಎನ್ ಕೌಂಟರ್ ಬಳಿಕ ಹತ್ತಾರು ನಕ್ಸಲ್
ಎನ್ ಕೌಂಟರ್ ನಡೆದಿದೆ. ಯಾವುದೇ ಎನ್ ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್ ಕೌಂಟರ್ ನಲ್ಲಿ ಮಾತ್ರ ಎನ್ ಕೌಂಟರ್ ಗೆ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್ ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ ಎಂದು ಬೆಳ್ತಂಗಡಿಯ ಸಾಮಾಜಿಕ ಹೋರಾಟಗಾರ ಸಂಶಯ ವ್ಯಕ್ತಪಡಿಸಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳಕ್ಕೆ ಪತ್ರಿಕೆ , ಟಿವಿ ಮಾದ್ಯಮದವರಿಗೆ ಪ್ರವೇಶ ನಿರಾಕರಿಸಿ, ಶವವನ್ನು ನೋಡಲು ಅವಕಾಶ ನೀಡದೆ ನಕ್ಸಲ್ ನಿಗ್ರಹ ದಳ ಅಸಂವಿಧಾನಿಕವಾಗಿ ನಡೆದುಕೊಂಡಿದೆ. ಮನೆಯೊಂದರಲ್ಲಿ ಎನ್ ಕೌಂಟರ್ ನಡೆದಿದೆ ಎನ್ನುವ ಪೋಲಿಸ್ ಇಲಾಖೆಯ ಹೇಳಿಕೆಯೇ ಇನ್ನೊಂದು ರೀತಿಯ ಸಂಶಯಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಶೇಖರ್ ,
ನಕ್ಸಲರು ನಡೆಸಿದ ಪ್ರತಿದಾಳಿಯಲ್ಲಿ ಪೋಲಿಸರಿಗೆ ಯಾಕೆ ಗಾಯವಾಗಿಲ್ಲ. ನಕ್ಸಲರ ಪ್ರತಿದಾಳಿಯ ಗುಂಡು ಎಲ್ಲಿಗೆ , ಯಾವುದಕ್ಕೆ ತಗುಲಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಎನ್ ಕೌಂಟರ್ ನಡೆಯುವ ಮೊದಲು ಕೇಂದ್ರ ಸಶಸ್ತ್ರ ಪಡೆಗಳನ್ನು ಕರೆಸಿಕೊಂಡಿದ್ದು ಏಕೆ ? ರಾಜ್ಯದ ನಕ್ಸಲ್ ನಿಗ್ರಹ ದಳ ಅಷ್ಟು ಕೆಟ್ಟು ಹೋಗಿದೆಯೇ ? ಎಂಬಿತ್ಯಾದಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಎನ್ ಕೌಂಟರ್ ನಡೆಸಿದ್ದು ನಕ್ಸಲ್ ನಿಗ್ರಹ ದಳವೋ? ಅಥವಾ ಕೇಂದ್ರ ಸಶಸ್ತ್ರ ಪಡೆಯೋ ? ಎಂಬ ಅನುಮಾನದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು
ಶೇಖರ್ ಲಾಯಿಲ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Previous post

ಬಂದಾರು ಪೆರ್ಲಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನ‌ರ್ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ : ಸಮಾಲೋಚನಾ ಸಭೆ

Next post

ಹರಿದ ರೀತಿ ಡಿಸೈನ್ ಪ್ಯಾಂಟ್ ಧರಿಸಿ ಬಂದ ಯುವಕನ ಮೇಲೆ ವಿಕೃತಿ ಮೆರೆದ ‘ಚಾಲಿಪೋಲಿ’ಗಳು : ಮನ ನೊಂದ ಯುವಕ ಆತ್ಮಹತ್ಯೆ ಯತ್ನ!

Post Comment

ಟ್ರೆಂಡಿಂಗ್‌