‘ಪಶ್ಚಿಮಘಟ್ಟ ನಮ್ಮ ನೆರೆ ಮನೆ’ ಪರಿಕಲ್ಪನೆ: ಗುರುವಾಯನಕೆರೆ’ಸಮೃದ್ಧಿ’ ಕಟ್ಟಡ ಲೋಕಾರ್ಪಣೆ ಡಿ.25ಕ್ಕೆ
ಬೆಳ್ತಂಗಡಿ : ಗುರುವಾಯನಕೆರೆಯ ‘ಸಸ್ಯೋದ್ಯಾನದಲ್ಲಿ ನಿಮ್ಮ ಮನೆ,
‘ಪಶ್ಚಿಮಘಟ್ಟ ನಿಮ್ಮ ನೆರೆಮನೆ’ ಎಂಬ ಪರಿಕಲ್ಪನೆಯಲ್ಲಿ
ನಿರ್ಮಾಣಗೊಂಡಿರುವ 8 ಮನೆಗಳ ‘ಸಮೃದ್ಧಿ’ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಡಿಸೆಂಬರ್ 25ನೇ ಬುಧವಾರ ಬೆಳಿಗ್ಗೆ ಗಂಟೆ 10.11ರ ಸುಮುಹೂರ್ತದಲ್ಲಿ ನೆರವೇರಲಿದೆ.
ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ವೇ। ಮೂ। ಮೊಗರ್ನಾಡು ಜನಾರ್ದನ ಭಟ್ 8 ಮನೆಗಳ ‘ಸಮೃದ್ಧಿ’ ಕಟ್ಟಡವನ್ನು ಉದ್ಘಾಟಿಸಲಿರುವವರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಳಾಡಿ ಶುಭಾಶಂಸನೆ ಮಾಡಲಿದ್ದಾರೆ.
ವೇ। ಮೂ। ವಸಂತ ತಂತ್ರಿ ಪಣೆಕಲ ಅವರು ಉದ್ಘಾಟನಾಪೂರ್ವದಲ್ಲಿ ಧಾರ್ಮಿಕವಿಧಿಗಳನ್ನು ನೆರವೇರಿಸಲಿದ್ದಾರೆ ಎಂದು ಕಟ್ಟಡದ ಮಾಲಕರಾದ ಕೆ.ಸೋಮನಾಥ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***********************************************
Post Comment