ಧರ್ಮಸ್ಥಳ-ಮಂಗಳೂರು ಮಧ್ಯೆ ಹೆಚ್ಚುವರಿ ವೇಗದೂತ ಬಸ್ಸು ಬೇಡಿಕೆ ; ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಬೆಳ್ತಂಗಡಿ ಎಸ್‌ಡಿಪಿಐ ನಿಯೋಗ ಮನವಿ
ಬೆಳ್ತಂಗಡಿ : ದಿನಂಪ್ರತಿ ಮಂಗಳೂರು ಉದ್ಯೋಗಕ್ಕೆ ಹೋಗುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅವಶ್ಯಕತೆ ತಕ್ಕಷ್ಟು ಬಸ್ಸುಗಳ ಸೌಕರ್ಯವಿಲ್ಲದೆ ದಿನ ನಿತ್ಯ ಪರದಾಡುತ್ತಿರುವುದನ್ನು ಮನಗಂಡ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ಪದಾಧಿಕಾರಿಗಳ ನಿಯೋಗ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕೆಎಸ್ಆರ್ ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ನೀಡಿದೆ.
‘ಎಕ್ಸ್ ಪ್ರೆಸ್’ ನಾಮಫಲಕದಲ್ಲಿ ಧರ್ಮಸ್ಥಳದಿಂದ ಹೊರಡುವ
ಕೆಎಸ್ ಆರ್ ಟಿಸಿ ಬಸ್ಸುಗಳು ಬಿ.ಸಿ.ರೋಡ್ ಬಿಟ್ಟರೆ ಮಂಗಳೂರು ಮಾತ್ರ ನಿಲುಗಡೆಯಾಗುವ ವೇಗದೂತ ಬಸ್ಸುಗಳನ್ನು ಪ್ರಾರಂಭಿಸಿ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೂಡಲೇ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಎಸ್ ಡಿ ಪಿ ಐ ಮನವಿಯಲ್ಲಿ ಒತ್ತಾಯಿಸಿದೆ.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಭೇಟಿಯಾದ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದ ನಿಯೋಗ ಸಂಬಂಪಟ್ಪ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸಮಸ್ಯೆ ಬಗೆಹರಿಸಿ ಪ್ರಯಾಣಿಕರ ಸಂಕಟ ನಿವಾರಿಸಬೇಕೆಂದು ಒತ್ತಾಯಿಸಿದೆ.
ಪುತ್ತೂರು ಮತ್ತು ಧರ್ಮಸ್ಥಳ ವಿಭಾಗಗಳ ಕೆಎಸ್ ಆರ್‌ಟಿಸಿ ಅಧಿಕಾರಿಗಳನ್ನು ಭೇಟಿಯಾದ ನಿಯೋಗ ಧರ್ಮಸ್ಥಳ- ಮಂಗಳೂರು ಮಧ್ಯೆ ಓಡಾಡುವ ಬಸ್ಸುಗಳ ಕೆಲವು ಮುಖ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನದಟ್ಟು ಮಾಡಿ ಮನವಿ ಮಾಡಿಕೊಂಡರು.
ಈ ಸಂದರ್ಭ ಮಂಗಳೂರು- ಧರ್ಮಸ್ಥಳ ಮಾರ್ಗದಲ್ಲಿ ಹೆಚ್ಚುವರಿ ವೇಗದೂತ ಬಸ್ ಹಾಗೂ ರಾಜಹಂಸ ಬಸ್ ಹಾಕಿ ಶೀಘ್ರವಾಗಿ ಪ್ರಯಾಣಿಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ನಾಯಕರಾದ ನವಾಝ್ ಕಟ್ಟೆ, ಹನೀಫ್ ಪುಂಜಾಲಕಟ್ಟೆ, ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ, ಚಾರ್ಮಾಡಿ ಗ್ರಾ.ಪಂ. ಪಂಚಾಯತ್ ಸದಸ್ಯ
ಸಿದ್ಧಿಕ್ ಯು.ಪಿ, ಕ್ಷೇತ್ರ ನಾಯಕ ಅಶ್ರಫ್ ಚಾರ್ಮಾಡಿ, ಸಹಲ್ ನಿರ್ಸಾಲ್, ಮರ್ಷದ್ ಉಜಿರೆ ಉಪಸ್ಥಿತರಿದ್ದರು.
Post Comment