ವಿದ್ಯುತ್ ಆಘಾತಕ್ಕೆ ವಿದ್ಯಾರ್ಥಿ ಬಲಿ : ಪರೊಡಿತ್ತಾಯನ ಕಟ್ಟೆ ಬಳಿ ಇಂದು ಸಂಭವಿಸಿದ ದುರ್ಘಟನೆ
ಬೆಳ್ತಂಗಡಿ : ವಿದ್ಯಾರ್ಥಿಯೊಬ್ಬ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ತೆಂಕಕಾರಂದೂರು ಗ್ರಾಮದ ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಪೆರೋಡಿತ್ತಾಯನ ಕಟ್ಟೆ
ಶಾಲಾ ಬಳಿಯ ಮನೆಯ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸ್ಟೀಪನ್ (14) ಮೃತಪಟ್ಟ ಬಾಲಕ. ಕ್ರಿಸ್ ಮಸ್ ಪ್ರಯುಕ್ತ ಇಂದು ಸಂಜೆ ಮನೆಗೆ ಸಾಂತಕ್ರೊಸ್ ಬರುವ ಹಿನ್ನೆಲೆಯಲ್ಲಿ ಮನೆಗೆ ಆಲಂಕಾರ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ದುರ್ಘಟನೆ ನಡೆದಿದೆ.
ವಿದ್ಯುತ್ ಆಘಾತಕ್ಕೊಳಗಾದ ಬಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಬಾಲಕ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
Post Comment