ಬೆಳ್ತಂಗಡಿಯಲ್ಲಿ ಮುಗಿಯದ ಚರಂಡಿ’ಇಸಂ’….! ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ
ಬೆಳ್ತಂಗಡಿ : ನಗರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮತ್ತು ಪಟ್ಟಣ ಪಂಚಾಯತ್ ಆಡಳಿತಕ್ಕೆ ತಲೆನೋವಾಗಿರುವ ವಿಘ್ನೇಶ್ ಸಿಟಿ ವಾಣಿಜ್ಯ ಸಂಕೀರ್ಣದ ಮುಂದಿನ ಪಟ್ಟಣ ಪಂಚಾಯತ್ ತೆರೆದ ಚರಂಡಿ ಮುಚ್ಚುವ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಯಾವ ಕಾರಣಕ್ಕೂ ಚರಂಡಿ ಮುಚ್ಚುವ ಪ್ರಶ್ನೆಯೇ ಇಲ್ಲ, ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಬಗ್ಗೆ
ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ತೆರೆದ ಚರಂಡಿ ಮುಚ್ಚುವ ವಿಚಾರದಲ್ಲಿ ನಡೆದ ಕಟ್ಟಡದ ಅವ್ಯವಸ್ಥೆ ಮತ್ತು ಕಟ್ಟಡ ಮಾಲಕರ ವಿರುದ್ಧ ದ.ಕ.ಜಿಲ್ಲಾಧಿಕಾರಿಯವರಿಗೆ ಮತ್ತು ಮೇಲಧಿಕಾರಿಗಳಿಗೆ ದೂರು ನೀಡುವುದು ಎಂದು ನಿರ್ಣಯ ಕೈಗೊಳ್ಳೋಣ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ತಿಳಿಸಿದ್ದು ವಿಪಕ್ಷ ಸದಸ್ಯ ಜಗದೀಶ್ ಡಿ ಸಹಿತ ಆಡಳಿತ ಪಕ್ಷದ ಸದಸ್ಯರ ಬೆಂಬಲ ವ್ಯಕ್ತಪಡಿಸಿದರು.
ಈ ಬಗ್ಗೆ ನಡೆದ ಚರ್ಚೆಯಲ್ಲಿ ಕಟ್ಟಡದ ಎದುರು ಮಾಲಕರೇ ಚರಂಡಿ ನಿರ್ವಹಣೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು, ಅನೇಕ ಸಲ ಪಾರ್ಕಿಂಗ್ ಸಮಸ್ಯೆ ಆಗಿದೆ, ಚರಂಡಿ ಬ್ಲಾಕ್ ಆಗಿದೆ, ಕೆಲವು ಕಟ್ಟಡಗಳ, ಅಂಗಡಿಗಳ ಮುಂದೆ ಮಾಲಕರೇ ಚರಂಡಿ ನಿರ್ವಹಣೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ನಡೆದ ಚರ್ಚೆಯಲ್ಲಿ ವಿಪಕ್ಷ ಸದಸ್ಯ ಜಗದೀಶ್ “ಎಲ್ಲವೂ ನಾನು ಮಾಡಿದ್ದು , ಮಾಡಿಸುವುದು ಎಂದು ದೂರುತ್ತಾರೆ, ನಾನು ಅಧ್ಯಕ್ಷನಾ? ಹಾಗಾದ್ರೆ ಚರಂಡಿ ತೆರೆದು ಬಿಟ್ಟಿದ್ದು ಏಕ ನಿರ್ಧಾರನಾ?
ಸರ್ವಾನುಮತದ ತೀರ್ಮಾನವೇ? ಮನವಿ ಕೊಡುವ ನೆಪದಲ್ಲಿ ಬಂದವರಲ್ಲಿ ಒಬ್ಬರು ನನ್ನ ಪಕ್ಷದವರು ನನ್ನ ಮೇಲೆ ಸವಾರಿ ಮಾಡಲು ಬರುತ್ತಾರೆ. ಐದು ಅಂತಸ್ತಿನ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಇದೆಯಾ? ನಾವು ಇದುವರೆಗೂ ಮಾನವೀಯತೆಯಲ್ಲಿ ನೋಡಿದ್ದು ಬಾಡಿಗೆದಾರರಿಗೆ, ಅಂಗಡಿಯವರಿಗೆ, ನಾಗರಿಕರಿಗೆ ತೊಂದರೆಯಾಗಬಾರದು ಎಂದು ಹೊಂದಾಣಿಕೆಯಲ್ಲಿದ್ದೆವು.
ಕಟ್ಟಡ ಮಾಲಕರು ಒಬ್ಬರಲ್ಲ ಇಬ್ಬರು. ಆದರೆ ಕಟ್ಟಡವು ಮೊದಲ ಮಾಲಕರ ಹೆಸರಲ್ಲೇ ಇದೆ, ಮೊದಲ ಮಾಲಕರು ಬ್ಯಾಂಕಿನವರಿಗೆ ಮಾರಿದ್ದಾರೆ, ದಾಖಲೆ ಅಧಿಕೃತವಾಗಿಲ್ಲ ಎಂದರು. ಆ ಕಟ್ಟಡದ ಚರಂಡಿ ಮತ್ತು ಪಾರ್ಕಿಂಗ್ ಸಮಸ್ಯೆಗೆ ಪಟ್ಟಣ ಪಂಚಾಯತ್ ಕಾರಣವಲ್ಲ, ಕಟ್ಟಡ ಮಾಲಕರೇ ಕಾರಣ. ಕಟ್ಟಡ ಮಾಲಕರು ಇಲ್ಲಿ ಬರಲಿ ಸಾಧಕ-ಬಾಧಕಗಳನ್ನು ಮಾತನಾಡಲಿ ಎಂದಿದ್ದಾರೆ. ಈ ಚರಂಡಿ ವಿವಾದವು ಪಟ್ಟಣ ಪಂಚಾಯತ್ ಆಡಳಿತಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಬಾಡಿಗೆದಾರರು,ಮಾಲಕರು ಮನವಿ ನೀಡಿದ ಬೆನ್ನಲ್ಲೇ ಬೇಡಿಕೆಗೆ ವಿರುದ್ಧವಾಗಿ ಪಟ್ಟಣ ಪಂಚಾಯತ್ ನಿರ್ಣಯ ಕೈಗೊಂಡಿದ್ದು ಕಟ್ಟಡ ಮಾಲಕರು ಮತ್ತು ಬಾಡಿಗೆದಾರರು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Post Comment