ರೈತರ ತುರ್ತು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ : ಆಳುವವರ ರೈತ ವಿರೋಧಿ ನೀತಿ ವಿರುದ್ಧ ಖಂಡನೆ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ಬೆಳ್ತಂಗಡಿ : ರೈತರು ಇಂದು ತುಂಬಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಯಾವುದೇ ಸಮಸ್ಯೆಗಳಿಗೆ ಪರಿಣಾಮವನ್ನು ನೀಡದ ಸರಕಾರಗಳು ಮತ್ತೊಂದಿಷ್ಟು ಸಮಸ್ಯೆಗಳನ್ನೇ ಉಂಟು ಮಾಡುತ್ತಿರುವುದು ಖಂಡನೀಯವೇ ಸರಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ಆಡಳಿದಲ್ಲಿ ರೈತ ಸಮುದಾಯ ಹೈರಾಣಾಗಿದ್ದಾರೆ ಎಂದು ಕೆ.ಪಿ.ಆರ್.ಎಸ್. ಕಳವಳ ವ್ಯಕ್ತಪಡಿಸಿದೆ.
ಅಕ್ರಮ-ಸಕ್ರಮ ದರ್ಖಾಸು, ಭೂಸುಧಾರಣಾ ಭೂಮಿಯ ಹಕ್ಕುದಾರಿಂದು ತಮ್ಮ ಭೂಮಿಯ ಪ್ಲಾಟಿಂಗ್ ಆಗದೆ
ಪರಬಾರೆ, ವಿಭಾಗ ಪತ್ರ ಮೊದಲಾದ ದಾಖಲೆಗಳನ್ನು ಮಾಡಲು ಮತ್ತು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಕಷ್ಟ ಪಡುತ್ತಿದ್ದಾರೆ.
1991 ರಿಂದ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿದ ರೈತರು ಹಕ್ಕು ಪತ್ರ ದೊರೆಯದೆ ಬದುಕಿಗೆ ಭದ್ರತೆ ಇಲ್ಲವಂತಾಗಿದೆ.
94ಸಿ ಅಡಿ ನಿವೇಶನದ ಹಕ್ಕು ಪತ್ರವೂ ಸಿಗದೆ ಕಂಗಾಲಾಗಿದ್ದಾರೆ.
ಅಡಿಕೆ ಆಮದು ಮಾಡಿದ ಕೇಂದ್ರ -ಸರಕಶಾರದ ನಡೆ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವಂತೆ ಮಾಡಿದೆ.
ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಕಟಿಬದ್ಧರಾಗಿರುವ ಕೇಂದ್ರ ಸರಕಾರ ನೀತಿಯಿಂದ ಅರಣ್ಯವಾಸಿ ರೈತ ಸಮುದಾಯ ಮತ್ತು ಕಸ್ತೂರಿ ರಂಗನ್ ವರದಿ ಜಾರಿಯಾಗಲಿರುವ ಪ್ರದೇಶದ ರೈತರು ಬೀದಿಪಾಲಾಗುವ ಭೀತಿಗೊಳಗಾಗಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ -2006ಕ್ಕೆ ತಿದ್ದುಪಡಿ ತಂದು ತಲೆ ಮಾರಿನ ದಾಖಲೆ ನೀಡಬೇಕೆಂಬ ನಿರ್ಬಂಧ ತೆಗೆದು 2005ರ ತನಕ ವಾಸ ಇದ್ದ ಎಲ್ಲಾ ಅರಣ್ಯವಾಸಿ ರೈತರಿಗೆ ಹಕ್ಕು ಪತ್ರ ನೀಡುವಂತಹ ಕಾನೂನು ಜಾರಿ ಮಾಡಲು ಕೇಂದ್ರ ಸರಕಶಾರಕ್ಕೆ ಒತ್ತಡ ತರಬೇಕಾಗಿದೆ
ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸಂಘ (ಎಐಕೆಎಸ್ ) ಪ್ರತಿಪಾದಿಸಿದೆ.
ಈ ಹಿನ್ನೆಲೆಯಲ್ಲಿ ಕೆಳಗೆ ವಿವರಿಸಿದ ಅತೀ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಕ.ಪ್ರಾ. ರೈತ ಸಂಘವು ಸೋಮವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ಆಯೋಜಿಸಿತು.
ಪ್ರತಿಭಟನೆಯಲ್ಲಿ ಕೇಳಿ ಬಂದ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ. ರೈತರ ಭೂಮಿಯನ್ನು ಉಚಿತ ಪ್ಲಾಟಿಂಗ್ ಮಾಡಿ ಪ್ರತ್ಯೇಕ ನಕ್ಷೆ, ಪಹಣಿ ಮಾಡಿಕೊಡಬೇಕು.,
1991ರಿಂದ 2017ತನಕ ಫಾರಂ ನಂ 50, 53, 57ರಲ್ಲಿ
ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಿದ ಬಡ ರೈತರಿಗೆ ಇನ್ನೂ ಹಕ್ಕುಪತ್ರ ನೀಡದೆ ಸತಾಯಿಸುವುದು ಸರಿಯಿಸದೆ ತಕ್ಷಣ ಎಲ್ಲಾ ಅರ್ಜಿದಾರರಿಗೆ ಹಕ್ಕುಪತ್ರ ನೀಡಬೇಕು.,
94ಸಿ , 94 ಸಿಸಿ ನೀವೇಶನ ಅರ್ಜಿದಾರರಿಗೆ ತಕ್ಷಣ ಸದರಿ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು., ರೈತರು ಹಳ್ಳಿಯಲ್ಲಿ ಮನೆ ಕಟ್ಟಲು ಕನ್ವರ್ಷನ್ ಕಡ್ಡಾಯ ಎಂಬ ನಿಯಮವನ್ನು ಹಿಂಪಡೆಯಬೇಕು.,
ರೈತರು, ಕೃಷಿಕರು ಮನೆ ಕಟ್ಟಲು ಕನ್ನರ್ಷನ್ ಇಲ್ಲದೇಯೇ ವಿಶೇಷ ಅನುಮತಿ ನೀಡಬೇಕು., ರೈತ ವಿರೋಧಿಯಾಗಿ ಮತ್ತು ಅವೈಜ್ಞಾನಿಕವಾಗಿ ತಯಾರಾದ ಡಾ.ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರಕಾರ ತಕ್ಷಣ ತಿರಸ್ಕರಿಸಬೇಕು ಮತ್ತು ರೈತರ ಪರಿಗಣನೆಗೆ ತೆಗೆದುಕೊಂಡು ಪ್ರತ್ಯೇಕ ಆಯೋಗ ರಚಿಸಿ ವೈಜ್ಞಾನಿಕವಾಗಿ ಪ್ರತ್ಯೇಕ ವರದಿ ತಯಾರಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು, ಅರಣ್ಯವಾಸಿ ರೈತರಿಗೆ ಹಕ್ಕು ಪತ್ರ ನೀಡಲು 3 ತಲೆಮಾರು ವಾಸ್ತವ್ಯದ ದಾಖಲೆ ನೀಡಬೇಕೆಂಬ ನಿರ್ಬಂಧವನ್ನು ತೆಗೆದು 2005ರ ತನಕ ವಾಸವಿದ್ದ ಎಲ್ಲಾ ಅರಣ್ಯವಾಸಿ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಕೇಂದ್ರ ಸರಕಾರ ಹಕ್ಕು ಕಾಯ್ದೆ-2006 ಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಡ ತರಬೇಕು.,
ಅಡಿಕೆ ಅಮದು ಮಾಡಲು ಅವಕಾಶ ನೀಡದ ಕೇಂದ್ರ ಸರಕಾರ ತಕ್ಷಣ ಸದ್ರಿ ಆಮದನ್ನು ನಿಷೇಧಿಸಬೇಕು. , ಮತ್ತು ಅಡಿಕೆಯಲ್ಲಿ ಕ್ಯಾನ್ಸರ್ ಅಂಶ ಇದೆ ಎಂಬ ಅವೈಜ್ಞಾನಿಕ ತೀರ್ಮಾನವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿರುವುದನ್ನು ಹಿಂಪಡೆಯಬೇಕು.,
ಮತ್ತು ಪ್ರತ್ಯೇಕ ಅಡಿಕೆ ಮಂಡಳಿ ರಚಿಸಲು ಸರಕಾರ ನಿರ್ಧರಿಸಬೇಕು.,
ರಬ್ಬರ್ ಕೃಷಿಯನ್ನು ಕಾಡುತ್ಪತ್ತಿ ಎಂಬ ದಾಖಲೆಯನ್ನು
ಲೋಪ ಪಡಿಸಿ ಅದನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಬೇಕು.,
ಕಾಡು ಉತ್ಪತ್ತಿ ಎಂಬ ಕಾರಣದಿಂದ ಸರಕಾರಿ ಸೌಲಭ್ಯಗಳು, ಬ್ಯಾಂಕು ಸಾಲಗಳು ಸಿಗದೆ ರಬ್ಬರ್ ಕೃಷಿಕ ಕಷ್ಟ ಪಡುತ್ತಿರುವುದುನ್ನು ಪರಿಗಣಿಸಬೇಕು., ರಬ್ಬರ್ ಬೋರ್ಡು ರಬ್ಬರ್ ಹಾಳೆಗೆ ದರ ನಿಗದಿಪಡಿಸಿದಂತೆ, ರಬ್ಬರ್ ಹಾಲಿಗೆ ಕೂಡ ದರ ನಿಗದಿಗೊಳಿಸಬೇಕು,
ಅರಣ್ಯವಾಸಿ, ಹಾಗೂ ಅಕ್ರಮ- ಸಕ್ರಮ ಅರ್ಜಿದಾರ ರೈತರನ್ನು ಒಕ್ಕಲೆಬ್ಬಿಸುವ ಭಯ ಪಡಿಸುವ ಸರಕಾರದ ನಡೆಯನ್ನು ನಿಲ್ಲಿಸಿ , ಅವರ ಬದುಕಿಗೆ ಭದ್ರತೆ ಒದಗಿಸಬೇಕು., ಕರ್ನಾಟಕ ರಾಜ್ಯ ಸರಕಾದ ಈ ಹಿಂದೆ 2019ರಲ್ಲಿ ಭೂಸುಧಾರಣಾ ಕಾಯ್ದೆಗೆ ತಂದ ರೈತ ವಿರೋಧಿ ತಿದ್ದುಪಡಿಯನ್ನು ಹಿಂಪಡೆಬೇಕು.,
ಅಂಶ ಆರಣ್ಯ ಎಂದು ಪಹಣಿಯಲ್ಲಿ ದಾಖಲಾದ ಸರಕಾರಿ ಭೂಮಿಯ ಪ್ಲಾಟಿಂಗ್ ಮಾಡಿ ಪ್ರತ್ಯೇಕಿಸಬೇಕು., ಸರಕಾರಿ ಭೂಮಿಯಾಗಿದ್ದು ಕೂಡಾ ಪಹಣಿಯಲ್ಲಿ ಡೀಮ್ಸ್ ಫಾರೆಸ್ಟ್ ಎಂದು ದಾಖಲಿರುವುದನ್ನು ರದ್ದು ಪಡಿಸಬೇಕು.,
ನ್ಯಾಯಾಲಯದಲ್ಲಿ ವಿಭಾಗವಾದರೂ ನ್ಯಾಯಾಲಯದ ಆದೇಶದಂತೆ ಸರಕಾರಿ ಹಕ್ಕು ದಾಖಲೆಗಲ್ಲಿ ಪಹಣಿಗಳಲ್ಲಿ ದಾಖಲಿಸಬೇಕು,
14 ಕೃಷಿ ರಕ್ಷಣೆಗಾಗಿ ಕೃಷಿಕರು ಕೋವಿ ಪರವಾನಿಗೆ ಪಡೆಯಲು ಇರುವ ನಿಯಮಗಳನ್ನು ಸರಳೀಕರಿಸಬೇಕು., ಪರವಾನಿಗೆ ನಡೆದಿರುವ ರೈತರನ್ನು ಚುನಾವಣಾ ಸಂದರ್ಭದಲ್ಲಿ ಕೋವಿ ಡೆಪೋಸಿಟ್ ಇಡುವಂತೆ ಸತಾಯಿಸಬಾರದು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಯಾದವ ಶೆಟ್ಟಿ , ಕಾರ್ಯದರ್ಶಿ ಶ್ಯಾಮರಾಜ್ , ನ್ಯಾಯವಾದಿ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಮಾತನಾಡಿ ಸರಕಾರದ ರೈತ ವಿರೋಧಿ ನೀತಿಗಳನ್ನು ಟೀಕಿಸಿದರು.
ಈ ಸಂದರ್ಭ ತಾಲೂಕು ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ, ಉಪಾಧ್ಯಕ್ಷ ಸಲಿಮೋನ್, ಸಹ ಕಾರ್ಯದರ್ಶಿ ಪ್ರದೀಪ್ , ಖಜಾಂಚಿ ಅಜಿ.ಎಂ.ಜೋಸ್ , ಜಯರಾಂ ಮಯ್ಯ , ಧನಂಜಯ, ಎಂ.ಕೆ. ಅಭಿಷೇಕ್, ಜೆಎಂಎಸ್ ಮುಖಂಡೆ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನಾಕಾರರು ಕೋರ್ಟ್ ರಸ್ತೆಯಿಂದ ಮುಖ್ಯ ರಸ್ತೆಯ ಮೂಲಕ ತಾಲೂಕು ಆಡಳಿತ ಸೌಧದ ಎದುರು ಸಮಾವೇಶಗೊಂಡರು.
Post Comment