ಹಳೆಕೋಟೆ ಅನಧಿಕೃತ ಬಂಗ್ಲೆ ಕಾಮಗಾರಿ ಮತ್ತೆ ಮುಂದುವರಿಕೆ : ಕಾಣದ ಕೈಗಳ ಅಭಯಹಸ್ತ!

ಹಳೆಕೋಟೆ ಅನಧಿಕೃತ ಬಂಗ್ಲೆ ಕಾಮಗಾರಿ ಮತ್ತೆ ಮುಂದುವರಿಕೆ : ಕಾಣದ ಕೈಗಳ ಅಭಯಹಸ್ತ!

Share

IMG-20241014-WA0007 ಹಳೆಕೋಟೆ ಅನಧಿಕೃತ ಬಂಗ್ಲೆ ಕಾಮಗಾರಿ ಮತ್ತೆ ಮುಂದುವರಿಕೆ : ಕಾಣದ ಕೈಗಳ ಅಭಯಹಸ್ತ!
20250107_000839-1024x927 ಹಳೆಕೋಟೆ ಅನಧಿಕೃತ ಬಂಗ್ಲೆ ಕಾಮಗಾರಿ ಮತ್ತೆ ಮುಂದುವರಿಕೆ : ಕಾಣದ ಕೈಗಳ ಅಭಯಹಸ್ತ!

ಬೆಳ್ತಂಗಡಿ : ಇಲ್ಲಿನ ಹಳೆಕೋಟೆಯಲ್ಲಿ ವ್ಯಕ್ತಿಯೊಬ್ಬರು ದೂರಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯತ್ ನೀಡಿದ್ದ ನೋಟೀಸ್ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಮೂರು ಮಾಳಿಗೆಯ ಅಕ್ರಮ ಬಂಗ್ಲೆಯ ಅನಧಿಕೃತ ಕಾಮಗಾರಿಯು ನ್ಯಾಯಾಲಯದಲ್ಲಿ ಹೂಡಿದ ದಾವೆಯನ್ನು ಮತ್ತು ಜಿಲ್ಲಾಧಿಕಾರಿಗಳಿಗೆ ಕೊಟ್ಟಿರುವ ದೂರನ್ನು ಲೆಕ್ಕಿಸದೆ ಇದೀಗ ಮತ್ತೆ ಆರಂಭವಾಗಿದ್ದು ಸ್ಥಳಕ್ಕಾಗಮಿಸಿದ ಕರ್ತವ್ಯ ನಿರತ ಪ.ಪಂ. ಮುಖ್ಯಾಧಿಕಾರಿಗೆ ಅಕ್ರಮ ಬಂಗ್ಲೆ ಮಾಲೀಕ ” ಏನು ಮಾಡ್ತಿಯಾ ಮಾಡು, ತಾಕತ್ತಿದ್ರೆ ಕಾಮಗಾರಿ ನಿಲ್ಲಿಸು, ಡೆಮಾಲಿಶ್ ಮಾಡಿಸು ನೋಡೋಣ…” ಎಂದು ಏಕವಚನದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ದಬಾಯಿಸಿ ಚಾಲೆಂಜ್ ಮಾಡಿದ ಘಟನೆ ಮೂರು ದಿನಗಳ ಹಿಂದೆ ನಡೆದಿದೆ.

ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿ ತಲೆ ಎತ್ತಿರುವ ಸಿ.ಹೆಚ್.ಪ್ರಭಾಕರ ಎಂಬಾತನ ಅಕ್ರಮ ಬಂಗ್ಲೆಯ ಅನಧಿಕೃತ ಕಾಮಗಾರಿಯ ಬಗ್ಗೆ ಬಂದಿದ್ದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕಾಮಗಾರಿಯನ್ನು ನಿಲ್ಲಿಸುವಂತೆ ಮೊದಲೇ ನೋಟೀಸ್ ನೀಡಿದ್ದೇವೆ, ನಿಯಮಗಳನ್ನು ಪಾಲಿಸಿ ಬಳಿಕ ಕಾಮಗಾರಿ ಮುಂದುವರಿಸಿ ಈಗ ನಿಲ್ಲಿಸಿ, ನಿಯಮಬಾಹಿರವಾಗಿ ಮತ್ತೆ ಮುಂದುವರಿಸಿದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಮಾಡಬೇಕಾಗುತ್ತದೆ, ಜಿಲ್ಲಾಧಿಕಾರಿಯವರು ಆದೇಶ ನೀಡಿದಲ್ಲಿ ಅನಧಿಕೃತ ಕಟ್ಟಡವನ್ನು ಕೆಡವಬೇಕಾಗುತ್ತದೆ, ಇನ್ನು ಕಾಮಗಾರಿ ಮುಂದುವರಿಸಬೇಡಿ ಎಂದು ಮೌಖಿಕವಾಗಿ ಸೂಚಿಸಿದ್ದು ಈ ಸಂದರ್ಭ ಕಟ್ಟಡ ಮಾಲೀಕ ಕೋಪ ನೆತ್ತಿಗೇರಿ ” ನಿನಗೆ ತಾಕತ್ತಿದ್ರೆ ಕಟ್ಟಡ ಕೆಡವಿ ಹಾಕಿಸು, ಕಾಮಗಾರಿ ನಿಲ್ಲಿಸು ನೋಡೋಣ …” ಎಂದು ಕರ್ತವ್ಯನಿರತ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಏಕವಚನದಲ್ಲಿ ಸವಾಲು ಹಾಕಿ ದರ್ಪ ತೋರಿಸಿದ ಘಟನೆ ನಡೆದಿದೆ.
ಅಕ್ರಮ ಬಂಗ್ಲೆ ಮಾಲೀಕ ಈ ರೀತಿ ದರ್ಪದಿಂದ ವರ್ತಿಸಿದ್ದು ಈತನ ಅಕ್ರಮಕ್ಕೆ ಯಾವ ರೀತಿಯ ಕಾಣದ ಕೈಗಳ ಬೆಂಬಲವಿದೆ ಎಂಬುದನ್ನು ತೋರಿಸುತ್ತದೆ. ಸಿ.ಹೆಚ್. ಪ್ರಭಾಕರ ಅನಧಿಕೃತವಾಗಿ ಮತ್ತು ಮೂಡಾ ನಿಯಮ ಉಲ್ಲಂಘಿಸಿ ಮೂರು ಮಹಡಿಯ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಈ ಅಕ್ರಮ ಕಟ್ಟಡಕ್ಕೆ ಪರವಾನಿಗೆ ಮತ್ತು ಡೋರ್ ನಂಬರ್ ನೀಡದಂತೆ ಅಕ್ರಮ ಕಟ್ಟಡದಿಂದ ತೊಂದರೆಗೊಳಗಾದ
ವ್ಯಕ್ತಿಯೊಬ್ಬರು 2024ರ ಆಗಸ್ಟ್‌ 19 , ಅಕ್ಟೋಬರ್ 18 , ಹಾಗೂ ಡಿಸೆಂಬರ್ 12ರಂದು ಪಟ್ಟಣ ಪಂಚಾಯತ್ ಗೆ ಲಿಖಿತ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿ 2 ತಿಂಗಳು ವಿಳಂಬವಾದರೂ
ಪ.ಪಂ. ಮುಖ್ಯಾಧಿಕಾರಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ
ಪರಿಶೀಲನೆ ನಡೆಸಿ ಅನಧಿಕೃತ ಕಟ್ಟಡ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ತಡೆ ಆದೇಶ ನೀಡಿದ್ದರು. ಆದರೆ ಸ್ವಲ್ಪ ಸಮಯ ನಾಟಕೀಯವಾಗಿ ಕಾಮಗಾರಿಯನ್ನು ನಿಲ್ಲಿಸಿದ್ದ ಸಿ.ಹೆಚ್ ಪ್ರಭಾಕರ ಇದೀಗ ಮತ್ತೆ ಅನಧಿಕೃತ ಬಂಗ್ಲೆಯ ಕಾಮಗಾರಿ ಮುಂದುವರಿಸುತ್ತಿರುವ ಬಗ್ಗೆ ಮತ್ತೆ ದೂರು ನೀಡಲಾಗಿದೆ.
ಇನ್ನೊಂದೆಡೆ ಅಕ್ರಮ ಬಂಗ್ಲೆ ಕಾಮಗಾರಿಗೆ ತಡೆ ನೀಡುವಂತೆ ಕೋರ್ಟ್ ನಲ್ಲಿ ದಾವೆಯನ್ನೂ ಹೂಡಲಾಗಿದೆ.
ಅಕ್ರಮ ಕಟ್ಟಡ ಪ.ಪಂ.‌ಆಡಳಿತದ ನೋಟೀಸ್ ಗಾಗಲಿ, ಕೋರ್ಟ್ ದಾವೆಗಾಗಲಿ, ಜಿಲ್ಲಾಧಿಕಾರಿಗಳಿಗೆ ಕೊಟ್ಟ ದೂರಿಗಾಗಲಿ ಬೆಲೆ ಇಲ್ಲವೇ ? ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತವು ದೂರಿಗೆ ಸ್ಪಂದಿಸಿ ಕ್ರಮಕ್ಕೆ ಮುಂದಾಗಿದ್ದು ಈತ ಮಾತ್ರ ಕಾಣದ ಕೈಗಳ ಕೃಪಾಕಟಾಕ್ಷದಿಂದ ಅನಧಿಕೃತ ಬಂಗ್ಲೆಯ ಅಕ್ರಮ ಕಾಮಗಾರಿಯನ್ನು ಯಾವ ಭಯವೂ ಇಲ್ಲದೆ ನಿರಾತಂಕವಾಗಿ ಮುಂದುವರಿಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಳ್ತಂಗಡಿಯ ಹಳೆಕೋಟೆಯ ಬಳಿ ಸ್ಥಳೀಯರ ಖಾಸಗಿ ಜಾಗಗಳಿಗೆ ತೊಂದರೆಯಾಗುವ ರೀತಿಯಲ್ಲಿ ಅತಿಕ್ರಮಿಸಿ ತಲೆ ಎತ್ತಿದ್ದ ಅನಧಿಕೃತ ಬಂಗ್ಲೆ ಚರ್ಚೆಗೆ ಕಾರಣವಾಗಿತ್ತು. ಬಂಗ್ಲೆಯ ಮಾಲಿಕ ಪಕ್ಕದ ಇತರರ ಜಾಗದ ಸುತ್ತ ನಿಯಮ ಪ್ರಕಾರ ಬೇಕಾದಷ್ಟು ಜಾಗವನ್ನು ಖಾಲಿ ಬಿಡದೆ ಬೇರೆಯವರ ಜಾಗವನ್ನೂ ಅತಿಕ್ರಮಿಸಿ ಮೂರು ಮಾಳಿಗೆಯ ಬಂಗ್ಲೆ ನಿರ್ಮಿಸುತ್ತಿರುವ ಬಗ್ಗೆ ಪಟ್ಟಣ ಪಂಚಾಯತ್ ಗೆ ಸ್ಥಳೀಯರು ದೂರು ನೀಡಿದ್ದರು.
ಈ ಬಗ್ಗೆ ಒಂದು ತಿಂಗಳ ಹಿಂದೊಮ್ಮೆ ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾತ್ ಅಧಿಕಾರಿಗಳ ನಿಯೋಗ ಅಕ್ರಮ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾಲಕನಿಗೆ ನೋಟೀಸ್ ಬಿಸಿ ಮುಟ್ಟಿಸಿದ್ದರು.
ಸ್ಥಳೀಯಾಡಳಿತದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಬಂಗ್ಲೆ ತಲೆ ಎತ್ತಿತ್ತು.

ಅನಧಿಕೃತ ಕಟ್ಟಡ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಮೊದಲ ನೋಟೀಸ್ ನಲ್ಲಿ ಸೂಚಿಸಲಾಗಿತ್ತು. ಬೇರೆಯವರ ಜಾಗಕ್ಕೂ ಆವರಣಕ್ಕೂ ತೊಂದರೆಯಾಗುವಂತೆ ಅತಿಕ್ರಮಿಸಿ ಅಳವಡಿಸಿರುವ ಪೈಪನ್ನು ತೆರವುಗೊಳಿಸುವಂತೆಯೂ ಸೂಚನೆ ನೀಡಲಾಗಿತ್ತು.
ಪಟ್ಟಣ ಪಂಚಾಯತ್ ನೋಟೀಸ್ ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಪುರಸಭಾ ಅಧಿನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದೂ ನೋಟೀಸ್ ನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿತ್ತು. ಅಕ್ರಮ ಬಂಗ್ಲೆ ಮಾಲಕನ ಪ್ರಳಯಾಂತಕ ಮನಸ್ಥಿತಿಯಿಂದ ಭಕ್ತರ ಪೂಜ್ಯನೀಯ ಸತ್ಯಸಾಯಿ ಮಂದಿರವೇ ಕೆಲವು ಸಮಯಗಳಿಂದ ಅಪವಿತ್ರಗೊಂಡಂತಿದೆ ಎನ್ನುತ್ತಾರೆ; ಸ್ಥಳೀಯ ನೈಜ ಸತ್ಯಸಾಯಿ ಭಕ್ತರು.
ಇನ್ನೊಂದೆಡೆ ಇದೀಗ ಹಳೆಕೋಟೆ ಪರಿಸರವೇ ಪ್ರಳಯಾಂತಕ ‘ಪೀಡಿತ’ ಪ್ರದೇಶವಾಗಿ ಪರಿಣಮಿಸಿ ಸ್ಥಳೀಯರ ನೆಮ್ಮದಿ ಕೆಡಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

Previous post

ರೈತರ ತುರ್ತು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ : ಆಳುವವರ ರೈತ ವಿರೋಧಿ ನೀತಿ ವಿರುದ್ಧ ಖಂಡನೆ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

Next post

ರೆಂಕೆದಗುತ್ತು ಸ್ಮಶಾನದ ದುಸ್ಥಿತಿ : ಮೃತರ ಕುಟುಂಬದಿಂದಲೇ ಸ್ಮಶಾನ ದುರಸ್ತಿ..!

Post Comment

ಟ್ರೆಂಡಿಂಗ್‌