ಬೆಳ್ತಂಗಡಿಯಲ್ಲಿ ‘ಪುಣ್ಯಾನುಮೋದನಾ ಮಾತೃವಂದನಾ’ ಕಾರ್ಯಕ್ರಮ
ಬೆಳ್ತಂಗಡಿ : ಕುತ್ಲೂರು ಗ್ರಾಮದ ‘ಶಾಂತಿ ಸದನ’ದಲ್ಲಿ ಡಿಸೆಂಬರ್ 21ರಂದು ಪರಿನಿಬ್ಬಾಣಗೊಂಡ ಧೀಮತಿ ಅಕ್ಕು (ದಲಿತ ಚಳುವಳಿಯ ಹಿರಿಯ ಮುಖಂಡ ಚೆನ್ನಕೇಶವ ಅವರ ತಾಯಿ) ಅವರ ಗೌರವಾರ್ಥವಾಗಿ ದಲಿತ ಚಳುವಳಿಯ ಒಡನಾಡಿಗಳ
ಆಯೋಜನೆಯಲ್ಲಿ ಸಾಮೂಹಿಕ ಬುದ್ಧವಂದನೆ ಹಾಗೂ ಪುಣ್ಯಾನುಮೋದನಾ ಮಾತೃವಂದನಾ ಕಾರ್ಯಕ್ರಮವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜ:12ನೇ ಭಾನುವಾರದಂದು
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನೆರವೇರಿತು.
ಬೌದ್ಧ ಧಮ್ಮಾಚಾರಿ ನಯನ್ ಕುಮಾರ್ ಅವರು ಸಾಮೂಹಿಕ ಬುದ್ಧವಂದನೆ ಮತ್ತು ಪುಣ್ಯಾನುಮೋದನಾ ಮಾತೃವಂದನಾ ಕಾರ್ಯಕ್ರಮ ನೆರವೇರಿಸಿ ಬಳಿಕ ಧಮ್ಮೋಪದೇಶ ನೀಡಿದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದ
ಬೆಂಗಳೂರಿನ ಸಾಹಿತಿ ಡಾ.ಕುಮಾರಸ್ವಾಮಿ ಅವರು ಪರಿನಿಬ್ಬಾಣಗೊಂಡ ಧೀಮತಿ ಅಕ್ಕು ಅವರು ಚಳುವಳಿಯ ನಾಯಕರಿಗೆ ಕಾರ್ಯಕರ್ತರಿಗೆ ಆದರ್ಶ, ಅವರಿಂದ ನಾವು ಕಲಿಯಬೇಕಾಗಿದ್ದು ಬಹಳ ಇದೆ, ಚಳುವಳಿಗಾರರು ಸ್ವಾಭಿಮಾನಿಗಳಾಗಿ ನೈಜ ಅಂಬೇಡ್ಕರ್ ವಾದಿಗಳಾಗಿ
ಬುದ್ಧ ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಅಗಲಿದವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಆಶಿಸುತ್ತಾ ನುಡಿವಂದನೆ ಸಲ್ಲಿಸಿದರು.
ಪುಣ್ಯಾನುಮೋದನಾ ಮಾತೃವಂದನಾ ಕಾರ್ಯಕ್ರಮದಲ್ಲಿ
ನ್ಯಾಯವಾದಿ ಎಸ್.ಎಂ. ಶಿವಕುಮಾರ್ , ಮಂಗಳೂರಿನ ಪ್ರೇಮಿ ಫೆರ್ನಾಂಡೀಸ್, ನ್ಯಾಯವಾದಿ ಸುರೇಶ್ ಬೆಳ್ವಾಯಿ, ಸಾಮಾಜಿಕ ಹೋರಾಟಗಾರ ನಾರಾಯಣ ಕಿಲಂಗೋಡಿ, ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ , ಚಳುವಳಿಯ ಮುಖಂಡ ರಘುಧರ್ಮಸೇನ್, ಚಳುವಳಿಯ ಮುಖಂಡರಾದ ಬಿ.ಕೆ.ವಸಂತ್, ಧರ್ಣಪ್ಪ ನೀರಾಡಿ, ಹೈಕೋರ್ಟ್ ವಕೀಲೆ ನಮಿತಾ ಪಟ್ರಮೆ, ಮುಖಂಡರಾದ ಸಂಜೀವ ನೀರಾಡಿ, ಪದ್ಮನಾಭ ಗರ್ಡಾಡಿ, ಶಿವಪ್ಪ ಗರ್ಡಾಡಿ ಮುಂತಾದವರು ಪರಿನಿಬ್ಬಾಣಗೊಂಡ ಧೀಮತಿ ಅಕ್ಕು ಅವರಿಗೆ ಮಾತೃವಂದನಾ ನುಡಿವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಚಳುವಳಿಯ ಹಿರಿಯ ಮುಖಂಡ ಚೆನ್ನಕೇಶವ
ಮಾತನಾಡಿ ತಮ್ಮ ಅವಿದ್ಯಾವಂತೆ ತಾಯಿಯ ತಾಯಿಯ ಬುದ್ಧ , ಅಂಬೆಡ್ಕರ್ ಪ್ರೇಮ, ಚಳುವಳಿಯ ಅಭಿಮಾನ, ವೈಯ್ಯಕ್ತಿಕ ಬದುಕಿನ ಛಲ, ಸ್ವಾಭಿಮಾನ, ಧೈರ್ಯ ಮತ್ತು ಸ್ಫೂರ್ತಿದಾಯಕ ಮಾತುಗಳನ್ನು ನೆನಪಿಸಿಕೊಂಡು ಗದ್ಗದಿತರಾಗಿ ನುಡಿವಂದನೆ ಸಲ್ಲಿಸಿದರು.
ಪ್ರಮುಖರಾದ ವೆಂಕಣ್ಣ ಕೊಯ್ಯೂರು, ಸಂಜೀವ ಆರ್, ರಮೇಶ್ ಆರ್, ಚಳುವಳಿಯ ಪ್ರಮುಖರಾದ ಸುಶೀಲಾ ಪಟ್ರಮೆ,
ಸುಂದರ್ ನಿಡ್ಪಳ್ಳಿ, ಬಾಬು ಎಂ ಬೆಳಾಲು, ಶ್ರೀನಿವಾಸ್ ಪಿಎಸ್,
ಲೋಕೇಶ್ ನೀರಾಡಿ ಸುಂದರ ನಾಲ್ಕೂರು, ಬಾಬಿ ಮಾಲಾಡಿ, ರಮೇಶ್ ಮಾಲಾಡಿ, ಸುಕೇಶ್ ಮಾಲಾಡಿ, ಉದಯ ಗೋಳಿಯಂಗಡಿ, ಶೇಖರ್ ಮಾಲಾಡಿ, ಗಿರೀಶ್ ಪಣಕಜೆ, ಶೇಖರ್ ವಿ.ಜಿ., ಹರೀಶ್ ಲಾಯಿಲಾ ಮುಂತಾದವರು ಪಾಲ್ಗೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಧಮ್ಮಾಚಾರಿಗಳಿಗೆ ಸಂಘದಾನ ಮಾಡಿ ಗೌರವಿಸಲಾಯಿತು.
Post Comment