ಬೆಳ್ತಂಗಡಿ ತಾಲೂಕಿನ ನಕ್ಸಲ್ ಹಾದಿ…

ಬೆಳ್ತಂಗಡಿ ತಾಲೂಕಿನ ನಕ್ಸಲ್ ಹಾದಿ…

Share
IMG-20250109-WA0002 ಬೆಳ್ತಂಗಡಿ ತಾಲೂಕಿನ ನಕ್ಸಲ್ ಹಾದಿ…

ಬೆಳ್ತಂಗಡಿ : ತಾಲೂಕಿನಲ್ಲಿ ನಕ್ಸಲ್-ಪೊಲೀಸ್ ಚಕಮಕಿ ಹೆಸರಲ್ಲಿ ಎಎನ್ಎಫ್ ಅಧಿಕಾರಿಗಳ ಗುಂಡಿಗೆ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದು ಬಿಟ್ಟರೆ ಬೆಳ್ತಂಗಡಿಯಲ್ಲಿ ಎನ್ ಕೌಂಟರ್ ಗೆ ನಕ್ಸಲೀಯರು ಬಲಿಯಾದ ಉದಾಹರಣೆಗಳಿಲ್ಲ.
ದಕ ಜಿಲ್ಲೆಯ ನಕ್ಸಲ್ ಇತಿಹಾಸದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗ್ರಾಮಗಳಲ್ಲಿ ಆದಿವಾಸಿ ಕುಟುಂಬಗಳು ಒಕ್ಕಲೆಬ್ಬಿಸುವಿಕೆ ಆತಂಕದಲ್ಲಿದ್ದಾಗ ಅರಣ್ಯ ಕೆಲವು ಗ್ರಾಮಗಳಲ್ಲಿ ನಕ್ಸಲ್ ಹೆಜ್ಜೆಗುರುತುಗಳು ಕಾಣಿಸಿಕೊಂಡಿದ್ದವು.
ಇತಿಹಾಸದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಟ್ಟ ಬೆಳ್ತಂಗಡಿ ತಾಲೂಕಿನ ಅರಣ್ಯದಂಚಿನ ಗ್ರಾಮಗಳ ಮಲೆಯ ಮಕ್ಕಳನ್ನು ಬಲವಂತದ ಒಕ್ಕಲೆಬ್ಬಿಸುವಿಕೆಗೆ
ಸರಕಾರ ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಿದಾಗ ಇಂಥ ಪ್ರದೇಶಗಳ ಅತಂತ್ರ ಆದಿವಾಸಿಗಳ ಪ್ರತಿರೋಧ
ಧ್ವನಿ ನಕ್ಸಲ್ ಚಳುವಳಿಯ ಮೂಲಕ ವ್ಯಕ್ತವಾಗುತ್ತಿತ್ತು.
ಇಂಥ ಪ್ರಮುಖ ಕಾರಣಗಳಿಂದ ಬೆಳ್ತಂಗಡಿ ತಾಲೂಕಿನ
ಕುತ್ಲೂರು ಮತ್ತಿತರ ಗ್ರಾಮಗಳು ಸರಕಾರದ ದೃಷ್ಟಿಯಲ್ಲಿ ನಕ್ಸಲ್ ಪೀಡಿತ ಗ್ರಾಮವೆಂಬ ಕಪ್ಪು ಚುಕ್ಕಿ ಅಂಟಿಸಿಕೊಳ್ಳಬೇಕಾಯಿತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆಲವು ಗ್ರಾಮಗಳು ವಿಶೇಷವಾಗಿ ಆದಿವಾಸಿ ಕುಟುಂಬಗಳು ವಾಸಿಸುತ್ತಿರುವ ಬಹುತೇಕ ಪ್ರದೇಶಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ನಿರ್ಲಕ್ಷಿತ ಪ್ರದೇಶಗಳಾಗಿ ಉಳಿದಿರುವುದು ದುರಂತ. ನಕ್ಸಲ್ ಪೀಡಿತ ಪ್ರದೇಶಗಳ ಕುಟುಂಬಗಳ ಅಭಿವೃದ್ಧಿ ಹೆಸರಲ್ಲಿ ಸರಕಾರದಿಂದ ಮಂಜೂರಾದ ಯೋಜನೆಗಳು, ಬಿಡುಗಡೆಗೊಂಡ ಅನುದಾನಗಳು ಅಥವಾ ‘ಪ್ಯಾಕೇಜ್’ ಭ್ರಷ್ಟ ಅಧಿಕಾರಿಗಳು ಮತ್ತು ದಲ್ಲಾಳಿಗಳಿಂದ ‘ಲೀಕೇಜ್’ ಆಗಿದ್ದು ಎನ್ ಕೌಂಟರ್ ಬಗ್ಗೆ ಇರುವ ಕಾಳಜಿ ಆದಿವಾಸಿಗಳ ಅಭಿವೃದ್ಧಿ ಬಗ್ಗೆ ಇಲ್ಲವೇ ?
ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ. ಕುತ್ಲೂರು ಗ್ರಾಮದ ಸುಂದರಿ, ದಿನಕರ ಮಲೆಕುಡಿಯ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪೊಲೀಸ್ ದಾಖಲೆಗಳಿದ್ದವು.

IMG-20250109-WA0003-1 ಬೆಳ್ತಂಗಡಿ ತಾಲೂಕಿನ ನಕ್ಸಲ್ ಹಾದಿ…

ದಿನಕರ ಮಲೆಕುಡಿಯ ಶೃಂಗೇರಿ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದು ಸುಂದರಿಯ ಮತ್ತು ಸಹಚರರ ಪತ್ತೆಗಾಗಿ ಎಎನ್ ಎಫ್ ಹಲವು ವರ್ಷಗಳಿಂದ ಮಾಹಿತಿ ಕಲೆ ಹಾಕುತ್ತಲೇ ಇತ್ತು.
ಮಲೆನಾಡಿನಲ್ಲಿ ನಕ್ಸಲ್ -ಪೊಲೀಸ್ ಗುಂಡಿನ ಸದ್ದು ಕೇಳಿ ಬಂದಾಗಲೆಲ್ಲ ಇತ್ತೀಚೆಗೆ ಎನ್ ಕೌಂಟರ್ ನಲ್ಲಿ ಬಲಿಯಾದ ವಿಕ್ರಮ್ ಗೌಡ ಹಾಗೂ ಸುಂದರಿ ಮುಂತಾದ ಹೆಸರುಗಳು ಕೇಳಿ ಬರುತ್ತಲೇ ಇತ್ತು. ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್-ಪೊಲೀಸ್ ಚಕಮಕಿ ಹೆಸರಲ್ಲಿ ಎಎನ್ಎಫ್ ಅಧಿಕಾರಿಗಳ ಗುಂಡಿಗೆ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದು ಅನುಮಾನಗಳಿಗೆ ಕಾರಣವಾಗಿತ್ತು.
ಕರ್ನಾಟಕ ನಕ್ಸಲ್ ಇತಿಹಾಸದಲ್ಲಿ ಕುತ್ಲೂರು ಗ್ರಾಮಕ್ಕೆ ನಕ್ಸಲ್ ಪೀಡಿತ ಗ್ರಾಮವೆಂಬ ಕಪ್ಪು ಚುಕ್ಕಿ ಅಂಟಿಸಿಕೊಂಡಿತ್ತು.
ಇದಕ್ಕೆ ಕಾರಣವೂ ಇತ್ತು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆಲವು ಗ್ರಾಮಗಳು ವಿಶೇಷವಾಗಿ ಆದಿವಾಸಿ ಕುಟುಂಬಗಳು ವಾಸಿಸುತ್ತಿರುವ ಪ್ರದೇಶಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ನಕ್ಸಲ್ ಚಲನವಲನಕ್ಕೆ ಅವಕಾಶವಾಗಿದ್ದು. ವಿದ್ಯಾರ್ಥಿ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಎಂಬವರು ನಕ್ಸಲ್ ಸಂಪರ್ಕ ದೇಶದ್ರೋಹ ಆರೋಪದಲ್ಲಿ ಜೈಲು ಸೇರಿ ಗಂಭೀರ ಎದುರಿಸಿ ಕೊನೆಗೆ ದೋಷಮುಕ್ತರಾದರು.
ಬೆಳ್ತಂಗಡಿ ತಾಲೂಕಿನ ಇಬ್ಬರು ಅಥವಾ ಮೂವರು ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರೂ ತಾಲೂಕಿನಲ್ಲಿ ದಿನಕರ ಮಲೆಕುಡಿಯರಾಗಲಿ ಇತರ ಯಾವುದೇ ನಕ್ಸಲೀಯರು ಬೆಳ್ತಂಗಡಿಯಲ್ಲಿ ಎನ್ ಕೌಂಟರ್ ಗೆ ಬಲಿಯಾದ ಉದಾಹರಣೆಗಳು ಇಲ್ಲ. ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿಯ ಒಂದಿಬ್ಬರು ಪತ್ರಕರ್ತರ ಮೇಲೆ ಎಎನ್ ಎಫ್ ಪೊಲೀಸರು ಪತ್ರಕರ್ತರಿಗೆ ಆಗದವರ ತಳ್ಳಿ ಅರ್ಜಿ ಮತ್ತು ಕೆಲವರ ತಪ್ಪು ಮಾಹಿತಿಯ‌ ಕಾರಣಕ್ಕಾಗಿ ನಿರಾಧಾರವಾಗಿ ಕಣ್ಣಿಟ್ಟು ಆ ಪತ್ರಕರ್ತರು ಕಿರಿಕಿರಿ ಅನುಭವಿಸಿದ್ದಿದೆ. ನಕ್ಸಲ್ ಪೀಡಿತ ಗ್ರಾಮಗಳಲ್ಲಿ ನಕ್ಸಲ್ ಚಲವಲನಗಳ ಬಗ್ಗೆ ಆಗಾಗ ಪೊಲೀಸರು ಕೂಂಬಿಂಗ್ ನಡೆಸಿದ್ದಿದೆ, ಆದರೆ ಯಾವುದೇ ನಕ್ಸಲೀಯರು ಬೆಳ್ತಂಗಡಿ ತಾಲೂಕಿನಲ್ಲಿ ಎನ್ ಕೌಂಟರ್ ಗೆ ಬಲಿಯಾದ ಉದಾಹರಣೆಗಳು ಇಲ್ಲ.

IMG-20250109-WA0000-2 ಬೆಳ್ತಂಗಡಿ ತಾಲೂಕಿನ ನಕ್ಸಲ್ ಹಾದಿ…

2000ರ ನವೆಂಬ‌ರ್ 17ರಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಹಾಜಿಮಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪಾರ್ವತಿ ಎಂಬಿಬ್ಬರು (ದಕ-ಉಡುಪಿ ಜಿಲ್ಲೆಗಳ ಗಡಿ ಭಾಗ ಅಂದರೆ) ಬೆಳ್ತಂಗಡಿ-ಕಾರ್ಕಳ ಗಡಿ ಭಾಗದ ಈದು ಗ್ರಾಮದ ಮನೆಯೊಂದರಲ್ಲಿ ಉಡುಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಇಡೀ ದಿನ ಮಲಗಿ ವಿಶ್ರಾಂತಿ ಪಡೆದಿದ್ದ ನಕ್ಸಲ್ ಒಬ್ಬ ಮರುದಿನ ಶಿವಮೊಗ್ಗ ಪೊಲೀಸರಿಂದ ಬಂಧಿತನಾಗಿದ್ದು ಸ್ಮರಿಸಬಹುದು.
ಕರ್ನಾಟಕದ ಎರಡು ದಶಕಗಳ ನಕ್ಸಲ್ ಇತಿಹಾಸದಲ್ಲಿ ಪೊಲೀಸ್ – ನಕ್ಸಲ್ ಗುಂಡಿನ ಚಕಮಕಿಗೆ ಒಟ್ಟು 37 ಜನರು ಬಲಿಯಾಗಿದ್ದು ಈ ಪೈಕಿ ನಕ್ಸಲೀಯರೆಂದು ಗುರುತಿಸಲಾದ 19 ಮಂದಿ ಪೊಲೀಸರ ಗುಂಡಿಗೆ ಅಥವಾ ಎಎನ್ ಎಫ್ ಗುಂಡಿಗೆ ಬಲಿಯಾಗಿದ್ದಾರೆ.
2003ರ ಜೂನ್ 23ರಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿಯ ಅಜಿತ್ ಕುಸುಬಿ ಮತ್ತು ಮೂಡಿಗೆರೆ ಬಣಕಲ್ ಸಬ್ಲಿಯ ಉಮೇಶ್ ಬಲಿಯಾಗಿದ್ದರು.
2006ರ ಡಿಸೆಂಬರ್ 25ರಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎಎನ್‌ಎಫ್‌ ಗುಂಡಿಗೆ ಬಲಿಯಾಗಿದ್ದು ಸ್ಮರಿಸಬಹುದು.
2010ರ ಮಾರ್ಚ್ 1ರಂದು ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿಯಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಎನ್ ಕೌಂಟರ್ ನಲ್ಲಿ ಹತ್ಯೆಯಾಗಬೇಕಾಯಿತು.
2011ರ ಅಗಸ್ಟ್ 9ರಂದು ಬೆಳ್ತಂಗಡಿ ತಾಲೂಕು
ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ನಾವೂರು ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಎಡವಟ್ಟಿನಿಂದ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಬಲಿಯಾಗಿದ್ದು ಈ ಸಂಶಯಾಸ್ಪದ ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠರೇ ಸತ್ಯ ಶೋಧನಾ ತನಿಖೆ ನಡೆಸಬೇಕಾಯಿತು.
ಬಳಿಕ ಕುತ್ಲೂರು ಬಳಿ ವ್ಯಕ್ತಿಯೊಬ್ಬರ ಮನೆ ಮುಂದೆ ನಿಲ್ಲಿಸಲಾಗಿದ್ದ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣವನ್ನು ನಕ್ಸಲೀಯರ ಕೃತ್ಯವೆಂದು ದಾಖಲಿಸಿಕೊಂಡಿದ್ದರು.

IMG-20250109-WA0001 ಬೆಳ್ತಂಗಡಿ ತಾಲೂಕಿನ ನಕ್ಸಲ್ ಹಾದಿ…

2024ರ ನವೆಂಬರ್ 18ರಂದು ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ಕಬ್ಬಿನಾಲೆಯಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತ್ಯೆಯಾದರು. 2005ರ ಫೆಬ್ರವರಿ 6ರಂದು ಮಾವೋವಾದಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಾಕೇತ್ ರಾಜನ್ ಹಾಗೂ ಆತನ ಅಂಗರಕ್ಷಕನಾಗಿದ್ದ ಸಿಂಧನೂರಿನ ಶಿವಲಿಂಗು ಎಂಬವರು ಪೊಲೀಸ್‌ ಎನ್‌ಕೌಂಟ‌ರ್ ನಲ್ಲಿ ಹತ್ಯೆಯಾಗಿದ್ದರು.
ಕರ್ನಾಟಕದ ಇತಿಹಾಸದಲ್ಲಿ ಪೊಲೀಸ್ ಮತ್ತು ಎಎನ್‌ಎಫ್ ಪಡೆಯಿಂದ 19 ಮಂದಿ ನಕ್ಸಲರರು ಹತ್ಯೆಯಾಗಿದ್ದಾರೆ ಎಂದು ಕರ್ನಾಟಕ ಪೊಲೀಸ್ ಇಲಾಖಾ ಅಂಕಿ ಅಂಶಗಳು ಹೇಳುತ್ತವೆ.
ಎರಡೂವರೆ ದಶಕದ ನಕ್ಸಲ್ ಚಳುವಳಿ ಇದೀಗ 2025ರ ಹೆಬ್ಬಾಗಿಲಲ್ಲಿ ಶರಣಾಗತಿಗೆ ಬಂದು ನಿಂತಿರುವುದು ನಕ್ಸಲ್ ಚಳುವಳಿಯಲ್ಲಿ ನರಳಿದ ಶೋಷಿತ ಸಮುದಾಯಗಳ ಭೂಗತ ಹೋರಾಟಗಾರರಿಗೆ ಮಾತ್ರವಲ್ಲ ಸರಕಾರಕ್ಕೂ ಪಾಠವಾಗಲಿ ಎಂಬುದೇ ನಾಡಿನ ಜನತೆಯ ಆಶಯವಾಗಿದೆ.

Post Comment

ಟ್ರೆಂಡಿಂಗ್‌