ನಿರ್ಮಲಾ ಸೀತಾರಾಮನ್ ಬಜೆಟ್ ನಿಂದ ದಲಿತರಿಗೆ ಅನ್ಯಾಯ : ದಲಿತರನ್ನು ಕಡೆಗಣಿಸಿದ ಕೇಂದ್ರದ ಬಜೆಟ್-ಜಗನ್ನಾಥ್ ಲಾಯಿಲಾ

ಬೆಳ್ತಂಗಡಿ : ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು 2025-26 ಸಾಲಿನ ರೂ, 50, 65, 345 ಕೋಟಿ ಗಾತ್ರದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ನೇ 2025 ರಂದು ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಪ್ರಧಾನಿ ಮತ್ತವರ ಸಚಿವ ಸಂಪುಟದವರು ನಿರ್ಮಲಾ ಸೀತಾರಾಮನ್ ಅವರನ್ನು
ಅಭಿನಂದಿಸಿದ್ದಾರೆ.
ಕೆಲವು ಮಾದ್ಯಮಗಳು ಮತ್ತು ಆರ್ ಎಸ್ ಎಸ್ ನ ಸಾಮಾಜಿಕ ಜಾಲತಾಣಗಳು ನಿರ್ಮಲಾ ಅವರನ್ನು ಮಹಾಲಕ್ಷ್ಮಿ ಅವತಾರಕ್ಕೆ ಹೋಲಿಸಿ ಚಿತ್ರಬರೆದು ಕುಣಿದು ಕುಪ್ಪಳಿಸಿದ್ದಾರೆ.
ಇನ್ನೊಂದೆಡೆ ಹಿಂದೂ ಸಂವಿಧಾನದ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಮಾಧ್ಯಮ ವಕ್ತಾರರು
ಜಗನ್ನಾಥ್ ಲಾಯಿಲ ಆರೋಪಿಸಿದ್ದಾರೆ.
ದೇಶದ ಸಂವಿಧಾನದ ಅಪಮಾನಿಸುತ್ತಾ ಕಂಟಕ ತರುವಂತಹ ಉನ್ನಾರವನ್ನು ನಡೆಸಿದ್ದಾರೆ.
2025- 26 ಸಾಲಿನ ಕೇಂದ್ರ ಬಜೆಟ್ ರೂ 50, 65, 345 ಕೋಟಿ ಗಾತ್ರದ ಬಜೆಟ್ ನಲ್ಲಿ ಈ ದೇಶ ಶೇಕಡಾ 18 ಇರುವ ಪರಿಶಿಷ್ಟ ಜಾತಿಯವರ ಪಾಲೆಷ್ಟು? ಎಂದು ಪ್ರಶ್ನಿಸಿರುವ ಅವರು ಕೇವಲ 1, 68, 478 ಕೋಟಿಗಳು ಮಾತ್ರ; ಅಂದರೆ ಕೇವಲ ಶೇಕಡಾ 3.32 ಮಾತ್ರ ! ಇದರಲ್ಲಿ 1, 58, 556.2 ಕೋಟಿಗಳು ಇತರ ಕಾಮಗಾರಿಗಳಿಗೆ ಡೈವರ್ಟ್ ಮಾಡಲಾಗುತ್ತದೆ. ರೂ 9915 ಕೋಟಿಗಳು ಪರಿಶಿಷ್ಟ ಜಾತಿಯವರ ಕಲ್ಯಾಣ ನೋಡಿಕೊಳ್ಳುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ನೀಡಲಾಗುತ್ತದೆ.
ಅದರಲ್ಲಿ ರೂ 5900 ಕೋಟಿಗಳುನ್ನು ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಸ್ಕಾಲರ್ಶಿಪ್, ರೂ 577.96 ಕೋಟಿಗಳಷ್ಟು ಪ್ರೀ ಮೆಟ್ರಿಕ್ ಸ್ಕಾಲರ್ ಶಿಪ್ ಮತ್ತು ಇತರ ಸ್ಕಾಲರ್ ಶಿಪ್ ಗಾಗಿ ರೂ 472 ಕೋಟಿ ಕಾಯ್ದಿರಸಲಾಗಿದೆ. ಇದು ಪರಿಶಿಷ್ಟ ಜಾತಿ ಕೋಟಿ ಕೋಟಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ದೊಡ್ಡ ಮಟ್ಟದಲ್ಲಿ ತಡೆ ಉಂಟಾಗಲಿದೆ ಎಂದಿದ್ದಾರೆ.
ದಲಿತ ವಿದ್ಯಾವಂತ ಯುವಕರಿಗೆ ಯಾವುದೇ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡದೆ ಸನಾತನ ಧರ್ಮದ ರೀತಿಯಲ್ಲಿ ಗುಲಾಮರಾಗಿ ಮಾಡುವ ಪ್ರಯತ್ನಿಸುತ್ತಾ ದಲಿತರು ಜೀವನದ ಮೇಲೆ ಜಿಗುಪ್ಸೆಗೊಳ್ಳುವಂತೆ ಮಾಡಲಾಗುತ್ತಿದೆ,
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದಲಿತ ವಿದ್ಯಾವಂತ ಯುವಕರಿಗೆ ಜೀವನ ಕೌಶಲ್ಯಗಳ ರೂಪಿಸುವ ಯೋಜನೆಗಳು ಈ ಬಜೆಟ್ಟಿನಲ್ಲಿ ತಂದಿಲ್ಲ. ಸಫಾಯಿ ಕರ್ಮಚಾರಿ ಹಣಕಾಸು ನಿಗಮಕ್ಕೆ ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ನಿಗಮಕ್ಕೆ ತಲಾ ಕೇವಲ ರೂ 10 ಲಕ್ಷ ನೀಡಲಾಗಿದೆ.
ರೂ 166 ಕೋಟಿಗಳನ್ನು ಎಐ ಮಿಷನ್ ಗೆ ತೆಗದಿರಸಲಾಗಿದೆ.
ರೂ 22173.41 ಕೋಟಿಗಳನ್ನು ಕೃಷಿ ಮತ್ತು ಕೃಷಿಕರ ಕಲ್ಯಾಣ ಇಲಾಖೆಗೆ, ರೂ 10112.68 ಕೋಟಿಗಳನ್ನು ಗೊಬ್ಬರ ಇಲಾಖೆಗೆ, ರೂ 18270.00 ಕೋಟಿಗಳನ್ನು ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಅನ್ನ ಯೋಜನೆಗೆ, ರೂ 19071.99 ಕೋಟಿಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಡೈವರ್ಟ್ ಮಾಡಲು ಸೂಚಿಸಲಾಗಿದೆ ಎಂದ ಜಗನ್ನಾಥ್
ರೂ 258.6 ಕೋಟಿಗಳನ್ನು ದಲಿತರಿಗೆ ಸಂಬಂಧವಿಲ್ಲದ ನ್ಯಾಷನಲ್ ಇನಸ್ಟೂಟ್ ಆಫ್ ರಾಂಕಿಂಗ್ ( ಎನ್ ಐ ಆರ್ ಎಫ್) ನೀಡಲಾಗಿದೆ ಎಂದು ಟೀಕಿಸಿದ್ದಾರೆ.
ಇನ್ನುಳಿದಂತೆ ರೂ 684.34 ಕೋಟಿ ಐಐಟಿಗೆ; ರೂ 398.12,ಕೋಟಿ ಎನ್ ಐಐಟಿಗೆ;ರೂ 94.73 ಕೋಟಿ ಐಎಎಸ್ ಇ ಆರ್ ಗೆ; ರೂ 60 ಕೋಟಿ ಐಐ ಎಸ್ ಸಿಗೆ; ರೂ 32.19 ಕೋಟಿ ತ್ರಿಬಲ್ ಐಐಟಿಗೆ, ರೂ 15.44 ಕೋಟಿ ಸಾಲ ಮತ್ತು ಬಡ್ಡೀತೀರಿಸಲು ಐಐಎಮ್ ಗೆ ಹೀಗೆ ಪರಿಶಿಷ್ಟ ಜಾತಿಯವರ ಪಾಲಿನ ಹಣವನ್ನು ಯತೇಚ್ಛವಾಗಿ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಮಾಜಿಕ ನ್ಯಾಯ ಬಯಸದ ಮತ್ತು ಭಾರತ ಸಂವಿಧಾನ ಕಲಂ 46 ಉಲ್ಲಂಘಿಸಿದ
ಬಿಜೆಪಿಯ ಪ್ರಧಾನಿ ಮೋದಿಯವರು ಕೇಂದ್ರ ಬಜೆಟ್ ನಲ್ಲಿ ಪರಿಶಿಷ್ಟರಿಗೆ ಬಹಿರಂಗವಾಗಿ ಮೋಸಮಾಡಿದ್ದಾರೆ ಎಂದು ಆರೋಪಿಸಿರುವ ಜಗನ್ನಾಥ್ ಲಾಯಿಲಾ ಕೇಂದ್ರದ ಬಿಜೆಪಿ ಸರ್ಕಾರದ ಮಂಡನೆಯಾದ ಬಜೆಟ್ ಅನ್ನು ತೀವ್ರವಾಗಿ ಖಂಡಿಸಿದ್ದು ಕೂಡಲೇ ಪರಿಶಿಷ್ಟರಿಗೆ ಕೇಂದ್ರ ಬಜೆಟ್ ನಲ್ಲಿ ನ್ಯಾಯ ದೊರಕಿಸಿ ಕೊಡಿಸಲು ಒತ್ತಾಯಿಸಿದ್ದಾರೆ.
Post Comment