ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮಾಡಳಿತಾಧಿಕಾರಿಗಳ ರಾಜ್ಯವ್ಯಾಪಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮಾಡಳಿತಾಧಿಕಾರಿಗಳ ರಾಜ್ಯವ್ಯಾಪಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

Share
20250210_111211-1024x461 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ      ಗ್ರಾಮಾಡಳಿತಾಧಿಕಾರಿಗಳ ರಾಜ್ಯವ್ಯಾಪಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ ಫೆ.10ನೇ ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿ ಆವರಣದಲ್ಲಿ ಧರಣಿ ಪ್ರಾರಂಭವಾಯಿತು.

ಬೆಳ್ತಂಗಡಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಸಿ., ಉಪಾಧ್ಯಕ್ಷೆ ಉಷಾಕಿರಣ್‌ ನೇತೃತ್ವದಲ್ಲಿ
ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರವು ನಡೆಯಿತು.
ಗ್ರಾಮ ಆಡಳಿತ ಅಧಿಕಾರಿಗಳ ರಾಜ್ಯವ್ಯಾಪಿ ಮುಷ್ಕರದ ಬೇಡಿಕೆಗಳು
ಈ ಕೆಳಗಿನಂತಿದೆ.

ನೌಕರರ ಕೌಟುಂಬಿಕ ಸಮಸ್ಯೆ,ನೌಕರರ ಕೌಟುಂಬಿಕ ಸಮಸ್ಯೆ, ಸಣ್ಣ-ಸಣ್ಣ ಮಕ್ಕಳ ಪಾಲನೆ,ಪೋಷಣೆ ಮಾಡಲು, ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ,ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ, ದೂರ-ದೂರದ ಊರಿನಲ್ಲಿರುವ ತಮ್ಮ ವಯಸ್ಸಾಗಿರುವ ತಂದೆ ದೂರದ ಊರಿನಲ್ಲಿರುವ ತಮ್ಮ ವಯಸ್ಸಾಗಿರುವ ತಂದೆ-ತಾಯಿಗಳ ತಾಯಿಗಳ ಪೋಷಣೆ ಮಾಡಲು, ಪೋಷಣೆ ಮಾಡಲು, ಗರ್ಭಿಣಿಯರು/ಬಾಣಂತಿಯರ ವೈಯಕ್ತಿಕ ಸಮಸ್ಯೆಗಳು , ಪತಿ-ಪತ್ನಿಯರ ನಡುವೆ ಬಿರುಕು ಮೂಡುತ್ತಿರುವುದು, ಅಂಗವಿಕಲ ನೌಕರರಿಗೆ ಜೀವನ ನಡೆಸುವುದು ಕಷ್ಟಕರವಾಗಿರುವುದು.
ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳ ಕಾರಣ ನಿರಂತರ ಪ್ರಯಾಣ ಹಾಗೂ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗಿರುತ್ತದೆ.
ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡುವಂತೆ ಕೋರಿ ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಜಮೀನಿನ ಮಾಲಿಕರು ಮರಣ ಹೊಂದಿದ ನಂತರ ಪೌತಿ/ವಾರಸುದಾರ ರೀತಿಯ ಮಾಲಿಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡುವ ಹಿನ್ನೆಲೆಯಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ನಿರ್ವಹಣೆ ಕಾರ್ಯದ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಪೌತಿ ಎಂದು ಗುರುತಿಸಲಾದ ಪಹಣಿಗಳ ಮೃತ ಖಾತೆದಾರರ ಉತ್ತರಾಧಿಕಾರಿಗಳಿಗೆ ಹಕ್ಕುಬದಲಾವಣೆ ಮಾಡುವ ಸಂಬಂಧ 2-3 ಆಂದೋಲನವನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ, ಇ-ಪೌತಿ ಖಾತೆ ಆಂದೋಲನವನ್ನು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘವು ಈ ಕೆಳಕಂಡ ಕಾರಣಗಳಿಂದಾಗಿ ವಿರೋಧಿಸುತ್ತದೆ.
ಖಾಸಗಿ ಒಡೆತನದ ಕೃಷಿ ಜಮೀನುಗಳ ಹಕ್ಕುಬದಲಾವಣೆ ವಿಚಾರವು ಖಾತೆದಾರರ ಅಥವಾ ವಾರಸುದಾರರ ವೈಯಕ್ತಿಕ ವಿಚಾರಗಳಾಗಿದೆ,
ಸದರಿ ಜಮೀನುಗಳ ಹಕ್ಕುಬದಲಾವಣೆ ವಿಚಾರವು ಸಹ ಉತ್ತರಾಧಿಕಾರಿಗಳ ವೈಯಕ್ತಿಕ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು ಒತ್ತಾಯ ಪೂರ್ವಕ ಹಕ್ಕುಬದಲಾವಣೆ ಕ್ರಮ ತರವಾಗಿರುವುದಿಲ್ಲ ಎಂದು ಸಂಘ ಹೇಳಿದೆ.
ಗ್ರಾಮ ಆಡಳಿತ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ತಾವೇ ಸ್ವತಃ ರೈತರನ್ನು ಸಂಪರ್ಕಿಸಿ ಮರಣ ಪ್ರಮಾಣಪತ್ರ, ವಂಶವೃಕ್ಷ, ಪಹಣಿ, ಮ್ಯುಟೇಷನ್ ಮತ್ತಿತರ ದಾಖಲಾತಿಗಳನ್ನು ಸಂಗ್ರಹಿಸಿ ಹಕ್ಕುದಾಖಲೆಗೆ ಒತ್ತಡ ಹೇರುವ ಕ್ರಮವನ್ನು ಗ್ರಾಮ ಆಡಳಿತ ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸಿದೆ.
ಜಮೀನಿನ ಮಾಲಿಕರ ಇಚ್ಛೆಯಿಲ್ಲದೇ ಒತ್ತಾಯಪೂರ್ವಕ ಹಕ್ಕುಬದಲಾವಣೆ ಕ್ರಮವು ಸಮಂಜಸವಾದದ್ದಲ್ಲ ಆದ್ದರಿಂದ ತಮ್ಮ ಜಮೀನುಗಳ ಹಕ್ಕುಬದಲಾವಣೆಯ ಆಯ್ಕೆಯನ್ನು ನಿಯಮಾನುಸಾರ
ಮೃತ ಖಾತೆದಾರರ ಒಡೆತನದಲ್ಲಿರುವ ಜಮೀನುಗಳ ವಾರಸುದಾರರ ಇಚ್ಛೆಗೆ ಬಿಡುವುದು ಸೂಕ್ತವಾಗಿರುತ್ತದೆ ಎನ್ನವುದು ಸಂಘದ ಪ್ರತಿಪಾದನೆಯಾಗಿದೆ.
ಅಭಿಯಾನ ಮಾದರಿಯಲ್ಲಿ ತರಾತುರಿಯಲ್ಲಿ ಮಾಡಲಾಗುವ ಹಕ್ಕುಬದಲಾವಣೆ ಪ್ರಕರಣಗಳಲ್ಲಿ ವಾರಸುದಾರರುಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ/ಕಾನೂನುಬದ್ದ ಕೆಲವು ವಾರಸುದಾರರನ್ನು ಕೈಬಿಡುವುದು ಹಾಗೂ ವಿವಾಹಿತ ಹೆಣ್ಣುಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೈಬಿಡುವುದು, ಬಹುಪತ್ನಿತ್ವ ಹಕ್ಕಿನ ವಿವಾದಗಳು ಮುಂತಾದ ಕ್ರಮಗಳಿಂದಾಗಿ ತಪ್ಪಾಗಿ ಹಕ್ಕುದಾಖಲೆಗಳು ದಾಖಲಾಗುವ ಸಂಭವವಿದ್ದು, ಈ ಸಂಬಂಧ ಗ್ರಾಮ ಆಡಳಿತ ಅಧಿಕಾರಿಗಳು ಹಲವು ಬಗೆಯ ಕಾನೂನು ಕ್ರಮಗಳನ್ನು ಎದುರಿಸುವ ಪ್ರಸಂಗಗಳು ಎದುರಾಗುತ್ತವೆ, ಈಗಾಗಲೇ ಮೃತ ಖಾತೆದಾರರ ಹೆಸರಿನಲ್ಲಿರುವ ಪಹಣಿ ದಾಖಲೆಗಳನ್ನು ವಾರಸುದಾರರ ಹೆಸರುಗಳಿಗೆ ಬದಲಾಯಿಸುವಂತೆ ಅರ್ಜಿ ಸಲ್ಲಿಸಿ ಹಕ್ಕುಬದಲಾವಣೆ ಪಡೆದುಕೊಂಡಿರುವ ಪ್ರಕರಣಗಳಲ್ಲಿಯೇ ಸಾಕಷ್ಟು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ/ ದಾಖಲೆ ನೀಡಿ ಹಕ್ಕುದಾಖಲೆ ಮಾಡಿಕೊಂಡಿರುವ ಸಾವಿರಾರು ಪ್ರಕರಣಗಳಿದ್ದು ಸದರಿ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಮಾನತುಗೊಳಿಸಿ ಕ್ರಿಮಿನಲ್ ಪ್ರಕರಣಗಳನ್ನು ಸಹ ದಾಖಲಿಸಿರುವ ನೂರಾರು ಪ್ರಕರಣಗಳಿರುತ್ತವೆ ಎಂಬಿತ್ಯಾದಿ ಬೇಡಿಕೆಗಳ ಬಗ್ಗೆ ಧರಣಿ ಕುಳಿತಿದ್ದಾರೆ.
ಮೃತರ ಹೆಸರಿನಲ್ಲಿರುವ ಕೃಷಿ ಜಮೀನುಗಳ ಪಹಣಿಗಳನ್ನು ಉತ್ತರಾಧಿಕಾರಿಗಳ ಹೆಸರಿಗೆ ಬದಲಾಯಿಸುವ ಸಂಬಂಧ ಕಾನೂನುಬದ್ಧ ವಾರಸುದಾರರು ದಾಖಲಾತಿಗಳೊಂದಿಗೆ
ಅರ್ಜಿ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಉತ್ತರಾಧಿಕಾರಿಗಳಿಗೆ ಹಕ್ಕುದಾಖಲೆ ಮಾಡಲು ಎಲ್ಲಾ ಬಗೆಯ ಕ್ರಮಗಳನ್ನು ಅನುಸರಿಸಲು ಗ್ರಾಮ ಆಡಳಿತ ಅಧಿಕಾರಿಗಳು ಸಿದ್ಧರಿದ್ದು ತಾವೇ ಮೃತ ಖಾತೆದಾರರ ವಾರಸುದಾರರುಗಳನ್ನು ಹುಡುಕಿ ಅವರಿಂದ ದಾಖಲಾತಿಗಳನ್ನು ಸಂಗ್ರಹಿಸಿ ಹಕ್ಕುಬದಲಾವಣೆ ಮಾಡುವ ಒತ್ತಾಯಪೂರ್ವಕ ಕೆಲಸ ನಿರ್ವಹಿಸಲು ಸಿದ್ಧರಿರುವುದಿಲ್ಲ ಎಂಬುದು ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳು ಇದೀಗ ಕೈಗೊಂಡ ಸಾಮೂಹಿಕ ನಿರ್ಧಾರವಾಗಿದೆ. ತಾಲೂಕಿನ ವಿವಿಧ ಗ್ರಾಮಗಳ 32 ಮಂದಿ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡರು.

20250210_111143-1024x461 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ      ಗ್ರಾಮಾಡಳಿತಾಧಿಕಾರಿಗಳ ರಾಜ್ಯವ್ಯಾಪಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ



Post Comment

ಟ್ರೆಂಡಿಂಗ್‌