ಕಾಜೂರು; ಪತಿ, ಅತ್ತೆ, ನಾದಿನಿ ಕಿರುಕುಳ : ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಬೆಳ್ತಂಗಡಿ : ಪತಿಯ ದೈಹಿಕ ದೈಹಿಕ ಹಲ್ಲೆ ಮತ್ತು ಅತ್ತೆ, ನಾದಿನಿಯ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಜೂರು ಬಳಿ ನಡೆದಿದ್ದು ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಎರ್ಮಾಳ್ ಪಲ್ಕೆ ನಿವಾಸಿ ಫಾರೂಕ್ ಎಂಬಾತನ ಪತ್ನಿ ದೈಹಿಕ ಹಲ್ಲೆಗೊಳಗಾಗಿ
ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದು ಪತಿ ಮತ್ತು ಅತ್ತೆ, ನಾದಿನಿಯ ಮಾನಸಿಕ, ದೈಹಿಕ ಕಿರುಕುಳವೇ ಆತ್ಮಹತ್ಯೆಗೆ ಯತ್ನಿಸಲು ಕಾರಣವೆನ್ನಲಾಗಿದೆ.
ಕಾಜೂರು ಗಣೇಶ್ ನಗರ ನಿವಾಸಿ ಹಮೀದ್ ಎಂಬವರ ಪುತ್ರಿ ಮತ್ತು ಸ್ಥಳೀಯ ಫಾರೂಕ್ ಎಂಬಾತನಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು ಒಂದು ಹೆಣ್ಣು ಮಗು ಇದೆ.
ಈ ಮಧ್ಯೆ ಕೆಲವು ಸಮಯಗಳಿಂದ ಪತಿ ದಿನ ನಿತ್ಯ ಏನಾದರೊಂದು ನೆಪ ನೃಷ್ಠಿಸಿ ಪತ್ನಿಗೆ ಚಿತ್ರಹಿಂಸೆ ನೀಡುಐತ್ತಿದ್ದು ತವರು ಮನೆಯವರೂ ಬೇಸತ್ತಿದ್ದರು. ಪತಿ ಫಾರೂಕ್ ಜೊತೆ ಸೇರಿ ಅತ್ತೆ, ನಾದಿನಿಯೂ ವರದಕ್ಷಿಣೆಗಾಗಿ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪತಿ ಮನೆಯವರ ಕಿರುಕುಳದಿಂದ ನೊಂದು ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದು ಇದೀಗ ಈಕೆ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.















Post Comment