ಮೈರೋಳ್ತಡ್ಕ ಶಾಲಾ ರಾಷ್ಟ್ರೀಯ ವಿಜ್ಞಾನ ದಿನಾಚರಣೆ : ಮಕ್ಕಳಿಂದ ವಿಜ್ಞಾನ ಮಾದರಿ ಪ್ರದರ್ಶನ

ಮೈರೋಳ್ತಡ್ಕ ಶಾಲಾ ರಾಷ್ಟ್ರೀಯ ವಿಜ್ಞಾನ ದಿನಾಚರಣೆ : ಮಕ್ಕಳಿಂದ ವಿಜ್ಞಾನ ಮಾದರಿ ಪ್ರದರ್ಶನ

Share
InShot_20250228_135518717-1024x947 ಮೈರೋಳ್ತಡ್ಕ ಶಾಲಾ ರಾಷ್ಟ್ರೀಯ ವಿಜ್ಞಾನ ದಿನಾಚರಣೆ : ಮಕ್ಕಳಿಂದ ವಿಜ್ಞಾನ ಮಾದರಿ ಪ್ರದರ್ಶನ

ಬೆಳ್ತಂಗಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಬಂದಾರು ಇಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಭಾಗವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯು ಫೆ 28ರಂದು ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ.ಧ.ಮಂ.ಪ್ರೌಢ ಶಾಲಾ ನಿವೃತ್ತ ಶಿಕ್ಷಕ ರಾಮಕೃಷ್ಣ ಚೊಕ್ಕಾಡಿ ಅವರು ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿ ಸಿ.ವಿ.ರಾಮನ್ ಅವರ ವೈಜ್ಞಾನಿಕ ಸಂಶೋಧನೆ, ಸಾಧನೆಗಳನ್ನು ತಿಳಿಸಿ ವಿದ್ಯಾರ್ಥಿಗಳು ದಿನನಿತ್ಯ ಜೀವನದಲ್ಲಿ ಅನೇಕ ವೈಜ್ಞಾನಿಕ ಕಲಿಕೆಗಳಿಗೆ ಅವಕಾಶಗಳಿವೆ ಅವುಗಳಿಂದ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿ ಭವಿಷ್ಯದಲ್ಲಿ ಸಂಶೋಧನೆಗಳ ಮೂಲಕ ವಿಜ್ಞಾನಿಗಳಾಗಿ ದೇಶದ ಸಂಪತ್ತುಗಳಾಗಬೇಕು ಎಂದು ಶುಭ ಹಾರೈಸಿದರು. ನಿವೃತ್ತ ಶಿಕ್ಷಕಿ ರೇವತಿ ಅನಾಬೆ, ಕೃಷ್ಣಯ್ಯ ಆಚಾರ್ಯ, ಗ್ರಾ.ಪಂ. ಅಧ್ಯಕ್ಷ ದಿನೇಶ್ ಖಂಡಿಗ ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ , ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ನಿರುಂಬುಡ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ರಾಜಶ್ರೀ ಪಿ.ವಿ. ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕ ಶ್ರೀಧರ್ ಸ್ವಾಗತಿಸಿದರು. ಎಸ್.ಡಿ.ಎಂಸಿ.ಸದಸ್ಯರು,
ವಿದ್ಯಾರ್ಥಿಗಳು, ಪೋಷಕರು ಶಿಕ್ಷಕ ವೃಂದ ಪಾಲ್ಗೊಂಡರು.
ವಿದ್ಯಾರ್ಥಿಗಳು ತಾವು ವಿವಿಧ ಪರಿಕರಗಳಿಂದ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಸಹ ಶಿಕ್ಷಕಿ ರಾಜಶ್ರೀ ಪಿ.ವಿ. ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕ ಶ್ರೀಧರ್ ಸ್ವಾಗತಿಸಿದರು. ಎಸ್.ಡಿ.ಎಂಸಿ.ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಶಿಕ್ಷಕ ವೃಂದ ಪಾಲ್ಗೊಂಡರು. ವಿದ್ಯಾರ್ಥಿಗಳು ತಾವು ವಿವಿಧ ಪರಿಕರಗಳಿಂದ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.


Previous post

ಅಂಡಿಂಜೆ ಸರಕಾರಿ ಗೇರು ನೆಡುತೋಪಿಗೆ ಕಾಡ್ಗಿಚ್ಚು; ಮೂರು ದಿನಗಳಿಂದ ಬೆಂಕಿ ನಂದಿಸಲು ಹರಸಾಹಸ

Next post

ಆರಿಕೋಡಿಯಲ್ಲಿ ದೈವಾರಾಧನಾ ಪದ್ಧತಿಗೆ ಅಪಚಾರ..? : ಧರ್ಮದರ್ಶಿಗೆ ತುಳು ಸಂಸ್ಕೃತಿ ವಿದ್ವಾಂಸ ತಮ್ಮಣ್ಣ ಶೆಟ್ಟಿ ಖಡಕ್ ಕ್ಲಾಸ್…!

Post Comment

ಟ್ರೆಂಡಿಂಗ್‌