ಆರಿಕೋಡಿಯಲ್ಲಿ ದೈವಾರಾಧನಾ ಪದ್ಧತಿಗೆ ಅಪಚಾರ..? : ಧರ್ಮದರ್ಶಿಗೆ ತುಳು ಸಂಸ್ಕೃತಿ ವಿದ್ವಾಂಸ ತಮ್ಮಣ್ಣ ಶೆಟ್ಟಿ ಖಡಕ್ ಕ್ಲಾಸ್…!

ಬೆಳ್ತಂಗಡಿ : “ತುಳುನಾಡಿನ ಅತ್ಯಂತ ಕಾರಣಿಕ ದೈವವೆಂದು ದೈವಾರಾಧಕರು ನಂಬಿಕೊಂಡು ಬಂದಿರುವ ದೈವಗಳಲ್ಲಿ ಒಂದಾಗಿರುವ ಚಾಮುಂಡಿ ದೈವದ ಮುಂದೆ ಯಾವುದೇ ಧರ್ಮದರ್ಶಿಗಳಾಗಲಿ ಅಥವಾ ಇನ್ಯಾವುದೇ ಗಣ್ಯ ವ್ಯಕ್ತಿಗಳಾಗಲಿ ಆ ದೈವದ ಎದುರು ಭಕ್ತನೇ ಹೊರತು ದೈವಕ್ಕಿಂತ ಮಿಗಿಲಾದ ವ್ಯಕ್ತಿಯೂ ಅಲ್ಲ, ಶಕ್ತಿಯಾಗಲೂ ಸಾಧ್ಯವಿಲ್ಲ. ಅದೇ ರೀತಿ ದೇವೀಮಹಾತ್ಮೆ ಯಕ್ಷಗಾನ ವೇಷದಂತೆ , ಸಿಂಗರಿಸಿಕೊಂಡು, ತಲೆಯ ಮೇಲೆ ಮೈಸೂರು ಅರಸರಂತೆ ಕಿರೀಟ ಇಟ್ಟುಕೊಂಡು ಮೆರೆಯುವುದಾಗಲಿ ದಸರಾ ಆನೆಗಳ ಮೇಲೆ ಬಣ್ಣ ಬಳಿಯುವಂತೆ ಹಣೆ, ಕೈಗಳಿಗೆ ಯಾವುದೇ ಬಣ್ಣ, ಬೊಟ್ಟುಗಳಿಂದ ಅಲಂಕರಿಸಿಕೊಂಡು ದೈವಕ್ಕಿಂತಲೂ ಅತ್ಯಾಲಂಕಾರ ವೇಷಭೂಷಣಗಳಿಂದ ವೈಭವೀಕರಿಸಿಕೊಂಡು ದೈವದ ಮುಂದೆ ನಿಂತು ದೈವದ ಅಪ್ಪಣೆ ಪಡೆಯುವುದಾಗಲಿ, ದೈವಕ್ಕೆ ಮದಿಪು ಹೇಳುವುದಾಗಲಿ ಮಾಡುವ ಕ್ರಮವಿಲ್ಲ, ಆದರೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೈವ ಕ್ಷೇತ್ರದ ಧರ್ಮದರ್ಶಿ ಎಂದು ಕರೆಯಿಸಿಕೊಳ್ಳುವ ವ್ಯಕ್ತಿಯೊಬ್ಬರು ದೈವಕ್ಕಿಂತ ಮೀರಿ ಸಿಂಗರಿಸಿಕೊಂಡು ತಲೆಗೆ ಮೈಸೂರು ಅರಸರು ಧರಿಸುವಂಥ ‘ಪೇಟ’ (ಕಿರೀಟ) ಧರಿಸಿಕೊಂಡು ದೈವಕ್ಕಿಂತಲೂ ತಾನೇ ಮಿಗಿಲೆಂಬಂತೆ ಬಿಂಬಿಸಿಕೊಳ್ಳುತ್ತಾ ವೈಭವೀಕರಿಸಿಕೊಂಡು ತನ್ನ ಪ್ರತಿಷ್ಠೆಗಾಗಿ, ವೈಭವಕ್ಕಾಗಿ ಮಾರ್ಕೆಟ್ ಗಾಗಿ ದೈವದ ಮುಂದೆ
ತುಳುನಾಡಿನ ದೈವಾರಾಧನಾ ಪದ್ಧತಿ, ಸಂಪ್ರದಾಯಗಳಿಗೆ ಅಪಚಾರವೆಸಗುತ್ತಿರುವ ಬಗ್ಗೆ ತಮ್ಮಣ್ಣ ಶೆಟ್ಟಿ ಮಾರ್ಮಿಕವಾಗಿ ದೃಷ್ಟಾಂತಗಳ ಸಹಿತ ಮಾತನಾಡಿ ದೈವಾರಾಧನಾ ಪದ್ಧತಿಯ ಮೇಲೆ ನಡೆಯುತ್ತಿರುವ ಅಭಾಸ ಪ್ರಸಂಗಗಳ ಬಗ್ಗೆ ಆಕ್ಷೇಪವೆತ್ತುವ ಮೂಲಕ ತುಳುನಾಡಿನ ನೈಜ ದೈವಾರಾಧಕರ ಕಣ್ತೆರೆಸಿದ್ದಾರೆ.
ಆರಿಕೋಡಿ ಚಾಮುಂಡಿ ಕ್ಷೇತ್ರದಲ್ಲಿ ದೈವ ನಿಯಮಗಳಿಗೆ ನಿತ್ಯ ಅಪಚಾರವಾಗುತ್ತಿದೆ ಎಂಬ ಆರೋಪ ದೈವಾರಾಧಕರಿಂದ
ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಕ್ಷೇತ್ರದ ಧರ್ಮದರ್ಶಿಯ ಕೆಲವೊಂದು ನಾಟಕೀಯ ನಡೆಯ ಬಗ್ಗೆ ತುಳುನಾಡಿನ ದೇವರಾಧನಾ ವಿದ್ವಾಂಸ ತಮ್ಮಣ್ಣ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ನಿಮ್ಮ ಪ್ರತಿಷ್ಠೆಗಾಗಿ ನಿಮ್ಮ ವೈಭವಕ್ಕಾಗಿ, ನಿಮ್ಮ ವ್ಯಾಪಾರಕ್ಕಾಗಿ ದೈವ ನಿಯಮಗಳಿಗೆ ಅಪಚಾರವೆಸಗಬೇಡಿ ಎಂದು ವಿನಂತಿಸಿಕೊಳ್ಳುತ್ತಾ ತುಳುನಾಡಿನ ದೈವ ಭಕ್ತರಲ್ಲಿ ಜಾಗೃತಿ ಮೂಡಿಸುವ ವೀಡಿಯೊಂದು ವೈರಲ್ ಆಗಿದ್ದು ದ.ಕ. , ಉಡುಪಿ ಜಿಲ್ಲೆಗಳೂ ಸೇರಿದಂತೆ ಕರಾವಳಿ ಜಿಲ್ಲೆಗಳ ದೈವ ಭಕ್ತರ ಕಣ್ತೆರೆಸಿದಂತಿದೆ. ಕೆಲವೊಂದು ಕ್ಷೇತ್ರಗಳಲ್ಲಿ ವೈಭವದ ವೇಷಭೂಷಣಗಳಿಂದ ಅಮಾಯಕ ಭಕ್ತರಲ್ಲಿ ಭಯ ಹುಟ್ಟಿಸಿ ಮೋಸಗೊಳಿಸಲಾಗುತ್ತಿದೆ ಎಂದು ತುಳುನಾಡಿನ ದೈವರಾಧನಾ ವಿದ್ವಾಂಸ ತಮ್ಮಣ್ಣ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರಿಕೋಡಿ ಚಾಮುಂಡಿ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದು ಚಾಮುಂಡಿ ದೈವದ ಮೇಲಿನ ಭಕ್ತಿಯಿಂದಲೇ ಹೊರತು ಕೇವಲ ಧರ್ಮದರ್ಶಿ ಎಂದೆನಿಸಿಕೊಂಡವರ ಪೇಟಾ , ಕಿರೀಟ, ನಾಮ ಬಣ್ಣ, ಅಲಂಕಾರ ಇತ್ಯಾದಿಗಳ ವೈಭವಕ್ಕೆ ಮರುಳಾಗಿ ಅಲ್ಲ ಎಂದಿದ್ದಾರೆ.
ಆರಿಕೋಡಿ ಚಾಮುಂಡಿ ಕ್ಷೇತ್ರದ ಧರ್ಮದರ್ಶಿ ಮಾತ್ರ ಚಾಮುಂಡಿಗಿಂತಲೂ ತನ್ನದೇ ಕಾರಣಿಕ ಮಿಗಿಲೆಂಬಂತೆ ವರ್ತಿಸುತ್ತಾ ಸ್ವತ: ಚಾಮುಂಡಿ ದೈವವೇ ತನ್ನ ಮೈಮೇಲೆ ಬಂದಂತೆ ಅಮಾಯಕ ಭಕ್ತರನ್ನು ನಂಬಿಸುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿದ್ದು ಇಂಥ ಕ್ಷೇತ್ರವನ್ನು ಮತ್ತು ಇಲ್ಲಿನ ದೈವವನ್ನು ದುಡ್ಡು ಮಾಡುವ ದಂಧೆಗೆ ಬಳಸಿಕೊಳ್ಳಲಾಗುತ್ತಿದೆಯೇ ? ಎಂಬ ಸಂಶಯವು ದೈವ ಭಕ್ತರನ್ನು ಕಾಡುವಂತಾಗಿದೆ.ಇದೀಗ
ಧರ್ಮದರ್ಶಿಗಳೆಂದೆನಿಸಿಕೊಂಡವರು ದಿನನಿತ್ಯದ ತುಳುನಾಡಿನ ದೈವಾರಾಧನೆಯ ಕಟ್ಟು ಕಟ್ಟಳೆಗಳಿಂದ ಹಿಡಿದು ವಾರ್ಷಿಕವಾಗಿ ನಡೆಯುವ ಚಾಮುಂಡಿ ಗುಳಿಗ ಹಾಗೂ ಸಪರಿವಾರ ದೈವಗಳ ನೇಮೋತ್ಸವದ ಸಂದರ್ಭದ ವರೆಗಿನ ಪ್ರತಿಯೊಂದು ಹಂತಗಳಲ್ಲೂ ತುಳುನಾಡಿನ ದೈವಾರಾಧನಾ ಪರಂಪರಾಗತ ಪದ್ಧತಿ ನಂಬಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಸಂಶಯಾಸ್ಪದವಾಗಿ ಅಥವಾ ಪ್ರಶ್ನಾರ್ಹವಾಗಿ ನಡೆದಿರುವುದು ದುರಂತ ಎಂಬ ಮಾತುಗಳು ಕೇಳಿ ಬರುತ್ತಿದೆ.
ಆರಿಕೋಡಿಯಲ್ಲಿ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ದೈವ ಕಾರ್ಯಗಳು ಮತ್ತು ನೇಮೋತ್ಸವದ ವೇಳೆ ನಡೆದ ಕೆಲವೊಂದು ನಾಟಕೀಯ ವಿದ್ಯಮಾನಗಳು ಆರಿಕೋಡಿ
ಕ್ಷೇತ್ರದ ದರ್ಮದರ್ಶಿಗೆ ದೈವಾರಾಧನಾ ಪದ್ಧತಿಗಳ ಬಗೆಗಿರುವ ಜ್ಞಾನದ ಕೊರತೆಯನ್ನೂ ತಪ್ಪು ಕಲ್ಪನೆಯನ್ನೂ ಎತ್ತಿ ತೋರಿಸಿದಂತಾಗಿದೆ,
ಇಂಥವರಿಂದ ಯಾರೂ ‘ಮಂಗ’ ಆಗುವುದಿಲ್ಲ ಎಂದು ತಮ್ಮಣ್ಣ ಶೆಟ್ಟಿ ಹೋರಾಟೋಪಾದಿಯಲ್ಲಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ದುಡ್ಡಿನಾಸೆಗೆ ಬಲಿ ಬಿದ್ದು ತುಳುನಾಡಿನ ಇಂತಹ ಕಾರಣಿಕ ದೈವಗಳನ್ನು ಈ ರೀತಿ ಬೇಕಾಬಿಟ್ಟಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ತುಳುವರೆಲ್ಲರೂ ಒಟ್ಟಾಗಿ ವಿರೋಧಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ. ದೈವಗಳ ಮುಂದೆ ಇಂಥ ನಾಟಕ ಮಾಡಿದರೆ ಖಂಡಿತವಾಗಿಯೂ ಮುಂದೊಂದು ದಿನ ಅದೇ ದೈವಗಳು ನಾಟಕ ಮಾಡಿದವರನ್ನೇ ಸಾರ್ವಜನಿಕವಾಗಿ ಬೀದಿ ಬೀದಿಯಲ್ಲಿ ನಾಟಕವಾಡಿಸುತ್ತವೆ ಎಂಬುದನ್ನು ಅವರು ಮರೆಯಬಾರದೆಂದು ಎಚ್ಚರಿಸಿದ್ದಾರೆ.
ನಿಮ್ಮ ಹೊಟ್ಟೆಪಾಡಿಗಾಗಿ ಏನು ಬೇಕಾದರೂ ಮಾಡಿಕೊಳ್ಳಿ ದೈವರಾಧನೆಗೆ, ದೈವ ಪದ್ಧತಿ ನಿಯಮಗಳಿಗೆ ಇಂಥ ಅಪಚಾರ ಮಾಡಬೇಡಿ ಒಂದಲ್ಲ ಒಂದು ದಿನ ಇದಕ್ಕೆಲ್ಲ ಪ್ರಕೃತಿಯೇ ಶಿಕ್ಷೆ ಕೊಡುತ್ತದೆ ಎಂದು ಜಾನಪದ ವಿದ್ವಾಂಸ ತಮ್ಮಣ್ಣ ಶೆಟ್ಟಿ
ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ನಡೆಸುವ ರಂಗೋತ್ಸವ ಕಾರ್ಯಕ್ರಮದಲ್ಲಿ ತುಳುನಾಡಿನ ದೈವಾರಾಧನಾ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜ್ಯ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ತಮ್ಮಣ್ಣ ಶೆಟ್ಟಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಹೊರಡಿಸಿದ ಆದೇಶವನ್ನು ತಕ್ಷಣ ರದ್ದುಗೊಳಿಸುವ ಮೂಲಕ ವೇದಿಕೆಗಳಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿದ್ದಾರೆ.
Post Comment