ಪದ್ಮುಂಜದಲ್ಲಿ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬೆಳ್ತಂಗಡಿ : ಮನೆಯಿಂದ ಉಪ್ಪಿನಂಗಡಿ ಪೇಟೆಗೆ ಹೋಗುವುದಾಗಿ ಹೇಳಿ ಹೋದ ಮೈರೋಳ್ತಡ್ಕ ನಿವಾಸಿಯ ಮೃತದೇಹ ಕಣಿಯೂರು ಗ್ರಾಮದ ಪದ್ಮುಂಜ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ.
ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ವ್ಯಕ್ತಿ ಬಂದಾರು ಗ್ರಾಮದ ಮೈರೋಳ್ತಡ್ಕ ಸಮೀಪದ ನೂಜಿ ಮನೆ ನಿವಾಸಿ ಚೆನ್ನಪ್ಪ ಪರವ (58) ಎಂಬವ ರಾಗಿದ್ದಾರೆ.
ಮಾ 11ರಂದು ಚೆನ್ನಪ್ಪ ಪರವ ಉಪ್ಪಿನಂಗಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅವರು ಮನೆಗೆ ಹಿಂತಿರುಗಿರಲಿಲ್ಲ. ಮಾ12 ರಂದು ಅವರು ಪದ್ಮುಂಜ ಬಸ್ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಸ್ಥಳೀಯರು ಮನೆಯವರಿಗೆ ತಿಳಿಸಿದ್ದು ಅಲ್ಲಿಗೆ ತೆರಳಿ ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ.
ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಅವರು ಮದ್ಯ ಸೇವಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದು ಹೃದಯಾಘಾತ ಅಥವಾ ಬೇರೇನೋ ಅನಾರೋಗ್ಯದ ಕಾರಣಕ್ಕೆ ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Post Comment