‘ಧರ್ಮಸೂಕ್ಷ್ಮ-3’ ಪುಸ್ತಕ ಬಿಡುಗಡೆ ಕಾರ್ಯಕ್ರಮ: ಉನ್ಮತ್ತರಿಗೆ ಯಾವ ಭಯವೂ ಇಲ್ಲ ,ಇರುವುದು ಈ ದೇಶದ ಕಾನೂನಿನ ಭಯ ಮಾತ್ರ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

‘ಧರ್ಮಸೂಕ್ಷ್ಮ-3’ ಪುಸ್ತಕ ಬಿಡುಗಡೆ ಕಾರ್ಯಕ್ರಮ: ಉನ್ಮತ್ತರಿಗೆ ಯಾವ ಭಯವೂ ಇಲ್ಲ ,ಇರುವುದು ಈ ದೇಶದ ಕಾನೂನಿನ ಭಯ ಮಾತ್ರ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

Share
Photo-1-1024x482 'ಧರ್ಮಸೂಕ್ಷ್ಮ-3' ಪುಸ್ತಕ ಬಿಡುಗಡೆ ಕಾರ್ಯಕ್ರಮ:                 ಉನ್ಮತ್ತರಿಗೆ ಯಾವ ಭಯವೂ ಇಲ್ಲ ,ಇರುವುದು ಈ ದೇಶದ ಕಾನೂನಿನ ಭಯ ಮಾತ್ರ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

ಉನ್ಮತ್ತರಿಗೆ ಯಾವ ಭಯವೂ ಇಲ್ಲ ,
ಇರುವುದು ಈ ದೇಶದ ಕಾನೂನಿನ ಭಯ ಮಾತ್ರ : ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

ಬೆಳ್ತಂಗಡಿ : “ಧಾರ್ಮಿಕ ಕ್ಷೇತ್ರದ ನೇತಾರರು ಎನಿಸಿಕೊಂಡ ಕೆಲವು ವ್ಯಕ್ತಿಗಳಿಗೆ ಧರ್ಮದ ಭಯವಿಲ್ಲ, ದೇವರ ಭಯವಿಲ್ಲ, ಸಮಾಜದ ಭಯವಿಲ್ಲ, ನಿಜವಾಗಿ ಧರ್ಮಭೀರು–ದೈವಭೀರುಗಳಾದ ಧಾರ್ಮಿಕ ನಂಬಿಕೆಯುಳ್ಳ ಜನತೆಯನ್ನು ನಿರಂತರವಾಗಿ ವಂಚಿಸುತ್ತಲೇ ತಮ್ಮ ಹೀನಾಯ ಬದುಕನ್ನು ನಡೆಸುತ್ತಿರುವ ಇಂಥವರಿಗೆ ತಮ್ಮ ಆತ್ಮಸಾಕ್ಷಿಯ ಭಯವೂ ಇಲ್ಲ. ಅಂದರೆ ಶಾಸಕಾಂಗ, ಕಾರ್ಯಾಂಗಗಳ ಭಯವೂ ಇಲ್ಲ. ಹೀಗೆ ಮಾನ ಭಯವೂ ಇಲ್ಲದಂತೆ ವರ್ತಿಸುತ್ತಿರುವ ಈ ಉನ್ಮತ್ತರಿಗೆ ಇರುವುದು ಒಂದೇ ಒಂದು ಭಯ. ಅದು ಈ ದೇಶದ ಕಾನೂನಿನ ಭಯ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯ ಪಟ್ಟರು.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಹೋರಾಟದ ಭಾಗವಾಗಿ ಪ್ರಕಟಿಸಿದ ಧರ್ಮಸೂಕ್ಷ್ಮ-3′ ಮತ್ತಿತರ ಅಕ್ರಮ ನಡೆಗಳ ದಾಖಲೆ’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತಾಡಿದ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರು
“ಧರ್ಮದ ಮುಖವಾಡದಲ್ಲಿ ನಡೆಯುತ್ತಿರುವ ಅನ್ಯಾಯ, ಅಧರ್ಮಗಳ ವಿರುದ್ಧ ಕಾನೂನು ಸಮ್ಮತವಾಗಿ ನಡೆಸುತ್ತಿರುವ
ಈ ಹೋರಾಟವು ಐತಿಹಾಸಿಕವಾದದ್ದು ನಿರುದ್ವಿಗ್ನವಾದದ್ದು , ಯೋಚಿಸಬಲ್ಲ ಎಲ್ಲರಿಗೂ ನ್ಯಾಯವೆಂದರೇನೆಂದು ಮನವರಿಕೆ ಮಾಡಿಸುವಂಥಾದ್ದು, ಹೋರಾಟದ ಪ್ರತಿಯೊಂದು ಹೆಜ್ಜೆ ಗುರುತುಗಳೂ ಪಾರದರ್ಶಕವಾಗಿರುವಂಥಾದ್ದು. ಮುಂದೆಯೂ ಈ ಹೋರಾಟವನ್ನು ಕೈಗೆತ್ತಿಕೊಂಡು ಮುಂದುವರೆಸಬಲ್ಲ ಆದರ್ಶವಾದಿ ಯುವಕರಿಗೆ ಮಾರ್ಗದರ್ಶಕವೂ ಪ್ರೇರಕವೂ ಆಗಿರುವಂಥದ್ದು..” ಎಂದರು.
“ಹೋರಾಟದಲ್ಲಿ ಎಂಥಾ ಕಷ್ಟ ನಷ್ಟಗಳು ಎದುರಾದರೂ ತಾವು ಜಗ್ಗದೆ, ಬಗ್ಗದೆ, ಕುಗ್ಗದೆ, ಜೈಲುವಾಸವನ್ನೇ ಮಾಡಬೇಕಾಗಿ ಬಂದರೂ ಇನಿತೂ ಮನೋವ್ಯಥೆಗೆ ಈಡಾಗದೆ, ತಮಗೆ ಬೆಂಬಲವಿತ್ತವರನ್ನೂ ಮನೋವ್ಯಥೆಗೆ ಈಡು ಮಾಡದೆ, ಆರ್ದಶವಾದದ ಧೀರತೆಯನ್ನು ಪ್ರದರ್ಶಿಸಿದ ಸೋಮನಾಥ ನಾಯಕರು ಮತ್ತು ನಾಗರಿಕ ಸೇವಾ ಟ್ರಸ್ಟ್ ಬಳಗವನ್ನು ಲಕ್ಷ್ಮೀ ಶ ತೋಳ್ಪಾಡಿ ಅಭಿನಂದಿಸಿದರು.
2 ಪುಸ್ತಕಗಳ ಕುರಿತು ವಿವರ ನೀಡಿದ ನಾಗರಿಕ ಸೇವಾ ಟ್ರಸ್ಟ್
ಅಧ್ಯಕ್ಷ ಕೆ. ಸೋಮನಾಥ ನಾಯಕ್ “ಈ ಹಿಂದೆ ಪ್ರಕಟಿತ
‘ಧರ್ಮಸೂಕ್ಷ್ಮ-2’ರಲ್ಲಿರುವ ದಾಖಲೆಗಳೊಂದಿಗೆ ಇಲ್ಲಿ ತನಕ ಪಡೆದ ದಾಖಲೆಗಳನ್ನೂ ಸೇರಿಸಿ ಪರಿಷ್ಕೃತ ಆವೃತ್ತಿ ಪ್ರಕಟಿಸಿದ್ದೇವೆ.
ನಿಗದಿತ ಪ್ರಸ್ತಾವನೆ ಕಳಿಸಲು ಬೆಳ್ತಂಗಡಿ ತಹಶೀಲ್ದಾರರು ವಿಳಂಬ ಮಾಡುತ್ತಿರುವುದು ಮಾಹಿತಿ ಹಕ್ಕಿನ ಉತ್ತರದಿಂದ ತಿಳಿದುಬರುತ್ತದೆ ” ಎಂದು ತಿಳಿಸಿದರು.
ಇನ್ನೊಂದು ಪುಸ್ತಕದಲ್ಲಿ ಅಕ್ರಮಗಳ ಕುರಿತ 240 ಸರಕಾರಿ ದಾಖಲೆಗಳ ಪಟ್ಟಿ ಒಳಗೊಂಡಿದೆ. ಸಾರ್ವಜನಿಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಇದರ ಸತ್ಯಾಸತ್ಯತೆಯಲ್ಲಿ ಪರಿಶೀಲಿಸಬೇಕು. ಪಾರದರ್ಶಕವಾಗಿ ಮುಕ್ತ ಸಂವಾದ ಏರ್ಪಡಿಸಬೇಕು ಎಂದರು. ಕೋರ್ಟ್ ನ ನಿರ್ಬಂಧಕಾಜ್ಞೆ ಇರುವುದು ಸುಳ್ಳು ಮತ್ತು ಅವಮಾನಕಾರಿ ಹೇಳಿಕೆ ಪ್ರಕಟಣೆ ಮಾಡಬಾರದೆಂದು ಮಾತ್ರ ” ಎಂದು ಸ್ಪಷ್ಟ ಪಡಿಸಿದ ಸೋಮನಾಥ ನಾಯಕ್ ಒಕ್ಕೂಟ ಮತ್ತು ಟ್ರಸ್ಟ್ ಕೋರ್ಟ್ ನ ಆಜ್ಞೆ ಮಾನ್ಯ ಮಾಡುತ್ತದೆ ಎಂದರು.
ಈ ಸಂದರ್ಭ ಹಿಂದು ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟದ ಸಂಚಾಲಕ ಸದಾಶಿವ ಹೆಗ್ಡೆ, ಒಕ್ಕೂಟ ಮತ್ತು ಟ್ರಸ್ಟಿ ವಿದ್ಯಾ ನಾಯಕ್, ದಯಾನಂದ ಪೂಜಾರಿ, ಬಾಬು ಎ., ಶೀನ ಪಿಲ್ಯ ಮತ್ತಿತರು ಉಪಸ್ಥಿತರಿದ್ದರು.

ಈ ಪುಸ್ತಕದ ಪಿಡಿಎಫ್ ಪ್ರತಿ ಬೇಕಾದಲ್ಲಿ 9448287050 ಮತ್ತು
7795042149 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು

Post Comment

ಟ್ರೆಂಡಿಂಗ್‌

error: Content is protected !!